ಮಡಿಕೇರಿ, ಸೆ. ೨೯: ಕೊಡವ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಎಲ್ಲರೂ ಸಹಕಾರ ಮತ್ತು ಪ್ರೋತ್ಸಾಹ ನೀಡುವಂತೆ ಹೈಕೋರ್ಟ್ ವಕೀಲ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಕರೆ ನೀಡಿದ್ದಾರೆ.
ಮಡಿಕೇರಿ ಕೊಡವ ಸಮಾಜದಲ್ಲಿ "ನಾಡ ಪೆದ ಆಶಾ" ಕೊಡವ ಚಲನಚಿತ್ರದ ೫೦ನೇ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕೊಡವ ಚಲನಚಿತ್ರವನ್ನು ಕೊಡಗಿನ ಜನತೆ ವೀಕ್ಷಿಸಿ ಪ್ರೋತ್ಸಾಹಿಸಲು ಮನವಿ ಮಾಡಿದರು.
ಚಲನಚಿತ್ರ ಕೊಡವ ಭಾಷೆ ಮತ್ತು ಸಂಸ್ಕೃತಿಗೆ ಪೂರಕವಾಗಿದೆ. ಕೊಡಗಿನೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರದ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಪ್ರತಿಯೊಬ್ಬರು ಚಿತ್ರವನ್ನು ವೀಕ್ಷಿಸುವ ಮೂಲಕ ಚಿತ್ರ ತಂಡಕ್ಕೆ ಪ್ರೋತ್ಸಾಹ ನೀಡಿ ಉತ್ತೇಜಿಸ ಬೇಕೆಂದರು.
ಮಕ್ಕಳ ತಜ್ಞ ಮೇಜರ್ ಡಾ. ಕುಶವಂತ್ ಕೋಳಿಬೈಲು ಮಾತನಾಡಿ, ಪುಟ್ಟ ಜಿಲ್ಲೆ ಕೊಡಗಿನಲ್ಲ್ಲಿ ಪ್ರಾದೇಶಿಕ ಚಿತ್ರಗಳನ್ನು ನಿರ್ಮಿಸುವುದು ಅಷ್ಟು ಸುಲಭವಲ್ಲ. ಪ್ರತಿಯೊಬ್ಬರು ಸ್ಥಳೀಯ ಭಾಷೆಗಳ ಮೇಲೆ ಅಭಿಮಾನ ತೋರಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಪ್ರಾದೇಶಿಕ ಭಾಷಾ ಚಲನಚಿತ್ರಗಳನ್ನು ಪ್ರತಿಯೊಬ್ಬರು ವೀಕ್ಷಿಸುವಂತಾಗಬೇಕು. ಆಗ ಮಾತ್ರ ಭಾಷೆ, ಸಂಸ್ಕೃತಿ ಮತ್ತು ಪರಂಪರೆ ಕೂಡ ಬೆಳವಣಿಗೆ ಕಾಣಲು ಸಾಧ್ಯವೆಂದರು.
ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ನಾಚಪ್ಪ ಮಾತನಾಡಿ, ಕೊಡವ ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ನಿರಂತರವಾಗಿ ಮುಂದುವರೆದಿದೆ. ಬದಲಾದ ಇಂದಿನ ಕಾಲದಲ್ಲಿ ಕೊಡವ ಪರಂಪರೆ, ಆಚಾರ, ವಿಚಾರ, ಭಾಷೆ, ಸಾಹಿತ್ಯಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಸಂತಸದ ವಿಚಾರ. ಸಿನಿಮಾ, ನಾಟಕಗಳು ಕೂಡ ಕೊಡವ ಭಾಷೆ, ಸಂಸ್ಕೃತಿಗೆ ಮಾನದಂಡ ವಾಗಬೇಕು. ಇತರ ರಂಗಗಳಲ್ಲೂ ಕೊಡವ ಭಾಷೆಗೆ ಮಾನ್ಯತೆ ದೊರೆಯುವಂತಾಗಬೇಕು ಮತ್ತು ಸಂವಿಧಾನದ ಭದ್ರತೆ ದೊರೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗAಡ ಎಸ್. ದೇವಯ್ಯ, ಕೊಡವ ಮತ್ತು ಅರೆಭಾಷೆಯಲ್ಲೂ ಚಲನಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಂಡು ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ತಿಳಿಸಿದರು.
ಸೇನಾಪಡೆ ಮತ್ತು ಕ್ರೀಡಾಕ್ಷೇತ್ರದಲ್ಲಿ ಕೊಡವರು ವಿಶ್ವ ಮಟ್ಟದಲ್ಲಿ ಗಮನ ಸೆಳೆದಿರುವಂತೆ ಸಿನಿಮಾ ನಿರ್ಮಾಣ, ನಿರ್ದೇಶನ ಮತ್ತು ಅಭಿನಯದಲ್ಲೂ ಕೀರ್ತಿಯನ್ನುಗಳಿಸಲಿ ಎಂದರು.
ಮಡಿಕೇರಿ ಕೊಡವ ಸಮಾಜ ಸಾಮಾಜಿಕ ಕಳಕಳಿಯ ಕಾರ್ಯವನ್ನು ಕೂಡ ಮಾಡುತ್ತಿದ್ದು, ೨೦೧೮ರಲ್ಲಿ ಅತಿವೃಷ್ಟಿಯಿಂದ ಬದುಕು ಕಳೆದುಕೊಳ್ಳುವ ಆತಂಕದಲ್ಲಿದ್ದ ಕಾಲೂರು ಸುತ್ತಮುತ್ತಲ ಸಂತ್ರಸ್ತರ ಬದುಕಿಗೆ ಧೈರ್ಯ ತುಂಬಲಾಗಿದೆ. ಸ್ಥಳೀಯ ಮಹಿಳೆಯರು ಮಸಾಲೆ ಪದಾರ್ಥಗಳ ತಯಾರಿಕ ಘಟಕವನ್ನು ಪ್ರಾರಂಭಿಸಲು ಕೊಡವ ಸಮಾಜದ ಮೂಲಕ ಉತ್ತೇಜನ ನೀಡಲಾಗಿದೆ.
ಮತ್ತು ಅರೆಭಾಷೆಯಲ್ಲೂ ಚಲನಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಂಡು ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ತಿಳಿಸಿದರು.