ಚೆಟ್ಟಳ್ಳಿ, ಸೆ. ೨೯: ಬೆಣ್ಣೆ ಹಣ್ಣಿನ ಗಿಡವನ್ನು ಚಿಗುರಿಗಾಗಿ ಕಡಿದ ಪ್ರಕರಣ ಇದೀಗ ಚೆಟ್ಟಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಕಸಿಕಟ್ಟಲು ಬೇಕಾದ ಬೇಡಿಕೆಯ ಬೆಣ್ಣೆ ಹಣ್ಣಿನ ಗಿಡದ ಚಿಗುರಿಗಾಗಿ ತೋಟಗಳಿಗೆ ನುಗ್ಗಿ ಕತ್ತರಿಸಿ ಮಾರಾಟ ಮಾಡುವವರ ಬಗ್ಗೆ ಬೆಳೆಗಾರರು ಚೆಟ್ಟಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಲ್ಲದೆÀ ಈರಳೆವಳಮುಡಿ ಗ್ರಾಮದಲ್ಲಿ ಐದು ವರ್ಷದ ಗಿಡವನ್ನು ಕತ್ತರಿಸಿ ತಂದು ಚಿಗುರನ್ನು ಮಾರಾಟ ಮಾಡಿದವರನ್ನು ತೋಟದ ಮಾಲೀಕರೇ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಚಿಗುರನ್ನು ಖರೀದಿಸಿದವರÀನ್ನು ಠಾಣೆಯಲ್ಲಿ ವಿಚಾರಣೆ ನಡೆಸಿ ತಂಡದ ಉಳಿದವರನ್ನು ವಿಚಾರಣೆ ನಡೆಸಲು ಪೊಲೀಸ್ ಸಿಬ್ಬಂದಿಗಳು ಹುಡುಕಾಡಿದರೂ ಯಾರೂ ಸಿಗಲಿಲ್ಲ. ಹಣ್ಣಿನ ಗಿಡವನ್ನು ನಾಶಪಡಿದ ನಷ್ಟವನ್ನು ಕಡಿದವರಿಂದಲೇ ವಸೂಲಿ ಮಾಡಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರು ದೂರು ನೀಡಿದ ಮೇರೆಗೆ ಚೆಟ್ಟಳ್ಳಿ ಪೊಲೀಸ್ ಉಪ ಠಾಣೆಯ ಎಎಸ್ ಐ ಶ್ರೀನಿವಾಸ್ ಕ್ರಮ ಕೈಗೊಂಡಿದ್ದಾರೆ.
ಕಸಿಕಟ್ಟಲು ಹಣ್ಣಿನ ಗಿಡವನ್ನು ಕತ್ತರಿಸಿ ತಂದವರಿAದ ಖರೀದಿಸುವ ನರ್ಸರಿಯವರ ಮೇಲೂ ಸೂಕ್ತ ಕ್ರಮಕೈಗೊಳ್ಳಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ. - ಕರುಣ್ ಕಾಳಯ್ಯ