ಗೋಣಿಕೊಪ್ಪ ವರದಿ, ಸೆ. ೨೮ : ಕೊಂಗಣ ಗ್ರಾಮದಲ್ಲಿ ವಾಸವಿದ್ದ ಪಣಿ ಎರವರ ಪಿ. ಪಾಲ ಅವರ ಪತ್ನಿ ಚಣ್ಣಿ (೩೮) ಇಬ್ಬರು ಪುತ್ರಿಯರೊಂದಿಗೆ ನಾಪತ್ತೆಯಾಗಿದ್ದಾರೆ.
ಆಗಸ್ಟ್ ೨೨ ರಂದು ನಾನು ಕೆಲಸ ಮುಗಿಸಿ ಮನೆಗೆ ಬಂದಾಗ ೬ ಮತ್ತು ೪ ವರ್ಷ ಪ್ರಾಯದ ನನ್ನ ಇಬ್ಬರು ಪುತ್ರಿಯರೊಂದಿಗೆ ಪತ್ನಿ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಸಂಬAಧಿಕರ ಮನೆಯಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ ಎಂದು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪತ್ತೆಯಾದವರು ೦೮೨೭೪-೨೪೭೩೩೩ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ ಗೋಣಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.