ವೀರಾಜಪೇಟೆ,ಸೆ.೨೭: ಸೇವೆಯನ್ನು ಹೃದಯದಿಂದ ಮಾಡಬೇಕು. ಈ ಸೇವಾ ಕಾರ್ಯದಲ್ಲಿ ವೀರಾಜಪೇಟೆ ಲಯನ್ಸ್ ಕ್ಲಬ್ ಈ ಹಾದಿಯಲ್ಲಿ ಮುಂಚೂಣಿಯಲ್ಲಿ ಇದೆ ಎಂದು ಕೊಡಗು ಜಿಲ್ಲೆಯ ಲಯನ್ಸ್ ಸಂಸ್ಥೆಗಳ ಪ್ರಾಂತೀಯಾ ಅಧ್ಯಕ್ಷ ಪಟ್ಟಡ ಧನು ಉತ್ತಯ್ಯ ಹೇಳಿದರು. ಕ್ಲಬ್‌ಗೆ ಅಧಿಕೃತ ಭೇಟಿಯ ಮಾತನಾಡಿ, ಈ ವರ್ಷ ಜಿಲ್ಲಾ ಮಟ್ಟದಲ್ಲಿ ಖIಊP ಂmmಚಿಣhi ಹಾಗೂ ಇತರೆ ಸಂಸ್ಥೆಯ ಸಹಯೋಗದಲ್ಲಿ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಶಸ್ತçಚಿಕಿತ್ಸೆ ನಡೆಸುವ ಯೋಜನೆಗಳು ಇದು ಜಿಲ್ಲೆಯ ೧೧ ಲಯನ್ಸ್ ಕ್ಲಬ್‌ಗಳು ಕೈಜೋಡಿಸಲಿವೆ ಎಂದರು. ಲಯನ್ಸ್ ಕ್ಲಬ್‌ನ ಅಧ್ಯಕ್ಷ ಪುಷ್ಪರಾಜ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಪ್ರಾರ್ಥನೆಯನ್ನು ಪ್ರೇಮ ವೆಂಕಟೇಶ್ ಮಾಡಿ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ವರದಿ ವಾಚಿಸಿ ವಂದಿಸಿದರು