ಮಡಿಕೇರಿ, ಸೆ. ೨೮: ಹಲ್ಲೆ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾ. ೯ರ ರಾತ್ರಿ ಜಲಾಶಯ ಬಡಾವಣೆಯ ನಿವಾಸಿ, ಮಂಜುನಾಥ್ ಜುವೆಲ್ಲರಿ ಮಾಲೀಕ ಪ್ರಶಾಂತ್ ತಮ್ಮ ಕಾರಿನಲ್ಲಿ ಮನೆಗೆ ತೆರಳುವ ಸಂದರ್ಭ ಓಂಕಾರೇಶ್ವರ ದೇವಾಲಯ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಕಾರನ್ನು ಅಡ್ಡ ಹಾಕಿಕೊಂಡಿ ದ್ದನ್ನು ಪ್ರಶಾಂತ್ ಪ್ರಶ್ನಿಸಿದ್ದು, ಬಳಿಕ ಮನೆಗೆ ತೆರಳಿದ್ದರು. ಪ್ರಶಾಂತ್ ಅವರನ್ನು ಹಿಂಬಾಲಿಸಿಕೊAಡು ತೆರಳಿದ ಆರೋಪಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ ಏಕಾಏಕಿ ಹಾಕಿಸ್ಟಿಕ್‌ನಿಂದ ಹಲ್ಲೆ ಮಾಡಿದ್ದು, ಈ ಸಂಬAಧ ಪ್ರಶಾಂತ್ ಪುತ್ರಿ ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿ ಗಳಲ್ಲಿ ಒಬ್ಬನಾದ ಚೇಂದ್ರಿಮಾಡ ಲೋಕೇಶ್ ಎಂಬಾತನನ್ನು ಮಂಗಳೂರಿನಲ್ಲಿ ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.