ಮಡಿಕೇರಿ, ಸೆ. ೨೬: ಬೆಂಗಳೂರಿನ ಶ್ರೀಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಸೊಸೈಟಿ ಮತ್ತು ಶ್ರೀಜ್ಞಾನಮಂದಾರ ಟ್ರಸ್ಟ್ ವತಿಯಿಂದ ಸಮಾಜ ಸೇವಕ ಮಡಿಕೇರಿಯ ಅಂಬೆಕಲ್ಲು ಕುಶಾಲಪ್ಪ ಅವರಿಗೆ ಸಮಾಜರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಿಕ್ಷಣ ಸೊಸೈಟಿಯ ಶ್ರೀಸರಾಫ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲಪ್ಪ ದಂಪತಿಗಳನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಹರಿಕೃಷ್ಣ ಪುನರೂರು, ಶ್ರೀಜ್ಞಾನಮಂದಾರ ಟ್ರಸ್ಟ್ನ ಅಧ್ಯಕ್ಷ ಪಿ. ಸದಾಶಿವ ಮತ್ತಿತರ ಪ್ರಮುಖರು ಪ್ರಶಸ್ತಿ ನೀಡಿ ಸನ್ಮಾನಿಸಿದರು.