ಶನಿವಾರಸಂತೆ, ಸೆ. ೨೭: ಶನಿವಾರಸಂತೆ ಸಮುದಾಯ ಸರಕಾರಿ ಆಸ್ಪತ್ರೆಯ ಆವರಣದೊಳಗಡೆ ಶವಗಾರದ ಬಳಿ ಇರುವ ವಿದ್ಯುತ್ ಟ್ರಾನ್ಸ್ಫಾರ್ಮರ್‌ಗೆ ಅಳವಡಿಸಿರುವ ಕಬ್ಬಿಣದ ಬೇಲಿ ತುಕ್ಕು ಹಿಡಿದು ಕಿತ್ತುಹೋಗಿ ಕೆಲವು ವರ್ಷಗಳೇ ಆಗಿವೆ.

ಈ ಆಸ್ಪತ್ರೆಗೆ ದಿನನಿತ್ಯ ನೂರಾರು ರೋಗಿಗಳು ಬರುತ್ತಾರೆ. ಆಸ್ಪತ್ರೆ ಪಕ್ಕದಲ್ಲಿ ಶವಗಾರವಿದೆ. ಕೆಲವು ಜಾನುವಾರುಗಳು ಇಲ್ಲಿ ಮೇಯುತ್ತವೆ. ಈಗೆ ಒಂದೂವರೆ ವರ್ಷದ ಹಿಂದೆ ವಿದ್ಯುತ್ ಇಲಾಖೆಗೆ ಈ ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಥಳ ಬದಲಾವಣೆ ಮಾಡಿ ಅಥವಾ ನೂತನ ಕಬ್ಬಿಣದ ಬೇಲಿ ನಿರ್ಮಿಸುವಂತೆ ಆಸ್ಪತ್ರೆ ವತಿಯಿಂದ ಮನವಿ ಮಾಡಲಾಗಿತ್ತು. ಅಪಾಯ ಸಂಭವಿಸುವ ಮೊದಲು ವಿದ್ಯುತ್ ಇಲಾಖೆ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.