ಗೋಣಿಕೊಪ್ಪ ವರದಿ, ಸೆ. ೨೮ : ಭತ್ತ ಬೆಳೆಗೆ ಬೆಂಕಿ ರೋಗ ಬಾಧೆ ಕಾಡುತ್ತಿದ್ದು, ಹತೋಟಿಗೆ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಕೀಟ ತಜ್ಞ ಡಾ. ವೀರೇಂದ್ರಕುಮಾರ್ ಕೆಲವು ಸಲಹೆ ನೀಡಿದ್ದಾರೆ.
ಹತೋಟಿ ವಿಧಾನ; ಹೆಚ್ಚಿನ ಪ್ರಮಾಣದ ಯೂರಿಯ ನೀಡದೆ ಇರುವುದು.
ರೋಗದ ಬಾಧೆ ಶೇ. ೫ ಕ್ಕಿಂತ ಜಾಸ್ತಿ ಇದ್ದಲ್ಲಿ ಶಿಲೀಂಧ್ರನಾಶಕ ಟ್ರೆöÊಪ್ಲೋಕ್ಸಿಸ್ಟ್ರೋಬಿನ್ ಜತೆಗೆ ಟೆಬುಕೋನೊಜೋಲ್ (ನೆಟಿವೊ) ೦.೫ ಗ್ರಾಂ ಅಥವಾ ಟ್ರೆöÊಸೈಕ್ಲಜೋಲ್ ೦.೬ ಗ್ರಾಂ ಪ್ರತಿ ಒಂದು ಲೀಟರ್ ನೀರಿಗೆ ಬೆರಸಿ ಸಿಂಪಡಣೆ ಮಾಡಬೇಕು. ಶಿಲೀಂಧ್ರನಾಶಕಕ್ಕೆ ಅಂಟು ದ್ರಾವಣ ಸೇರಿಸಿ ಸಿಂಪಡಿಸುವುದರಿAದ ಮಳೆಯ ನಡುವೆಯೂ ಹೆಚ್ಚು ಪ್ರಯೋಜನಕ್ಕೆ ಬರಲಿದೆ.
ಲಕ್ಷಣಗಳು ; ಪ್ರಾರಂಭದಲ್ಲಿ ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆ ಕಂಡು ಬರುತ್ತದೆ. ನಂತರದ ದಿನಗಳಲ್ಲಿ ಚುಕ್ಕೆಗಳ ಗಾತ್ರ ದೊಡ್ಡÀದಾಗುತ್ತದೆ. ಗರಿಗಳ ಮೇಲೆ ಕದಿರಿನಾಕಾರದ ಮೊನಚಾದ ತುದಿಗಳುಳ್ಳ ಚುಕ್ಕೆಗಳು ಕಾಣಿಸಿ ಕೊಳ್ಳುತ್ತವೆ. ಚುಕ್ಕೆಗಳ ಮಧ್ಯಭಾಗವು ಬೂದಿ ಬಣ್ಣಕ್ಕೆ ತಿರುಗಿ ಸುತ್ತಲು ಕಂದು ಬಣ್ಣದ್ದಾಗಿರುತ್ತದೆ. ಇಂತಹ ಚುಕ್ಕೆ ಒಂದಕ್ಕೊAದು ಕೂಡಿಕೊಂಡು ಎಲೆಯು ಸುಟ್ಟು ಹೋದಂತೆ ಕಂಡುಬರುತ್ತದೆ. ಹೆಚ್ಚಿನ ಮಾಹಿತಿಗೆ ೦೮೨೭೪-೨೯೫೨೭೪ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.