ಗುಡ್ಡೆಹೊಸೂರು, ಸೆ. ೨೮: ಇಲ್ಲಿಗೆ ಸಮೀಪದ ದೊಡ್ಡಬೆಟ್ಟಗೇರಿ ಗ್ರಾಮದ ನಿವಾಸಿ ಮೂಲೆಮಜಲು ರಾಧಾಮಣಿ ಎಂಬವರ ತೋಟಕ್ಕೆ ಮತ್ತು ಭತ್ತದ ಗದ್ದೆಗೆ ನುಗ್ಗಿದ ಆನೆಗಳ ಹಿಂಡು ಒಂದು ಎಕರೆ ಪ್ರದೇಶದ ಭತ್ತದ ಬೆಳೆಯನ್ನು ತಿಂದು, ತುಳಿದು ನಾಶಪಡಿಸಿವೆ. ಅಲ್ಲದೆ ಸುಮಾರು ೫೦ ಅಡಿಕೆ ಮರ ಮತ್ತು ೧೦ ತೆಂಗಿನ ಮರಗಳನ್ನು ನಾಶಪಡಿಸಿವೆ. ಹಿಂಡಿನಲ್ಲಿ ಎರಡು ಮರಿಯಾನೆಗಳಿವೆ. ಸ್ಥಳಕ್ಕೆ ಈ ವಿಭಾಗದ ಅರಣ್ಯಾಧಿಕಾರಿ ದೇವಯ್ಯ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವಿಭಾಗದಲ್ಲಿ ನಿರಂತರ ಆನೆ ದಾಳಿ ಮಾಡುತ್ತಿ ರುವುದಾಗಿ ಗುಡ್ಡೆಹೊಸೂರಿನಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ಪಂಚಾಯಿತಿ ಸದಸ್ಯರು ಗಂಭೀರ ಆರೋಪ ಮಾಡಿದ್ದರು. ಆನೆಕಾಡು ರಕ್ಷಿತಾರಣ್ಯಕ್ಕೆ ಹೊಂದಿಕೊAಡಿರುವ ಹಲವು ಗ್ರಾಮದ ರೈತರು ಆನೆ ದಾಳಿಯಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪರಿತಪಿಸುವಂತಾಗಿದೆ. ೬ ಆನೆ ಮತ್ತು ಎರಡು ಮರಿಯಾನೆಗಳಿದ್ದು, ಪ್ರತಿದಿನ ಸರಣಿ ದಾಳಿಯಂತೆ ರೈತರ ತೋಟಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿವೆ. ಕದಿರು ದಾಟುವ ಮೊದಲೇ ಬೆಳೆ ಕುಯ್ಲು ಮಾಡುತ್ತಿದ್ದಾರೆ.