ಸೋಮವಾರಪೇಟೆ, ಸೆ. ೨೬: ಮಾದಾಪುರದ ಚನ್ನಮ್ಮ ಪ್ರೌಢಶಾಲೆ ಹಾಗೂ ಪದವಿ ಕಾಲೇಜಿನಲ್ಲಿ ಜಂಬೂರು ಟಾಟಾ ಕಾಫಿ ಸಂಸ್ಥೆಯ ವತಿಯಿಂದ ಪರಿಸರ ಜಾಗೃತಿ ಕುರಿತಾಗಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ೭೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಟಾಟಾ ಕಾಫಿ ಸಂಸ್ಥೆಯ ಜಂಬೂರು ಎಸ್ಟೇಟ್ ವ್ಯವಸ್ಥಾಪಕ ಸಿ.ಎ. ರೋಷನ್, ಉಪ ವ್ಯವಸ್ಥಾಪಕ ಅಮಿತ್ ಪೊನ್ನಣ್ಣ ಹಾಗೂ ಸಿಬ್ಬಂದಿಗಳಾದ ಎಂ.ಎನ್. ಸುರೇಶ್, ಹೆಚ್.ಬಿ. ಮಧು, ಕಾಲೇಜು ಪ್ರಾಂಶುಪಾಲ ಮಂದಪ್ಪ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.