ಮಡಿಕೇರಿ, ಸೆ. ೨೬: ಎಂ. ಬಾಡಗ ಅಂಗನವಾಡಿ ಕೇಂದ್ರದಲ್ಲಿ ಪೋಷಣಾ ಮಾಸಾಚರಣೆ, ಅಡುಗೆ ಸ್ಪರ್ಧೆ ಮತ್ತು ಅರಿವು ಕಾರ್ಯಾಗಾರ ನಡೆಯಿತು. ಕೇಂದ್ರವನ್ನು ಸ್ವಚ್ಛಗೊಳಿಸಿ, ವೈಯಕ್ತಿಕ ಸ್ವಚ್ಛತೆಯ ಬಗ್ಗೆ ತಿಳಿಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಸವಿತಾ ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರಾದ ಜಯಂತಿ ಬಿ.ಬಿ., ಚೈತ್ರ ಪಿ.ಯು., ಭವ್ಯ ಬಿ.ಆರ್., ಗೀತಾ ವಿ.ಪಿ., ಗೌರಿ, ಪುಷ್ಪಲತಾ, ಪ್ರಮೀಳಾ ಸಿ.ಎಲ್. ಮತ್ತು ಶಾಲಾ ಶಿಕ್ಷಕರಾದ ಯಮುನಾ ಮತ್ತು ಕುಮುದಿನಿ ಹಾಜರಿದ್ದರು.