ಕೂಡಿಗೆ, ಸೆ. ೨೫: ಕಳೆದ ಎರಡು ವರ್ಷಗಳ ಹಿಂದೆ ಹಾರಂಗಿ ಜಲಾನಯನ ಪ್ರದೇಶದಲ್ಲಿ ಸಂಭವಿಸಿದ ಭಾರೀ ನೀರಿನ ಪ್ರವಾಹ, ಮತ್ತು ಭೂ ಕುಸಿತದ ಹಿನ್ನೆಲೆ ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರದ ವಿಜ್ಞಾನಿಗಳ ತಂಡ ಹಾರಂಗಿ ಮತ್ತು ಅಣೆಕಟ್ಟೆಯ ಜಲಾನಯನ ಪ್ರದೇಶಗಳಿಗೆ ಕಾವೇರಿ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿತು.
ಎನ್ಇಇಆರ್ಐ ಕೇಂದ್ರದ ವಿಜ್ಞಾನಿಗಳ ತಂಡ ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಶೇಖರಣೆ ಮತ್ತು ಮಾದಾಪುರ ನಂದಿಮೊಟ್ಟೆ ಮತ್ತು ಹಟ್ಟಿಹೊಳೆ ವ್ಯಾಪ್ತಿಯಲ್ಲಿ ಅನೇಕ ಭಾಗಗಳಲ್ಲಿ ಭೂ ಕುಸಿತದಿಂದಾಗಿ ನೀರು ಹೆಚ್ಚಾಗಿ ಹರಿದಿರುವ ಸ್ಥಳಗಳ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿತು.
ಕೇAದ್ರದ ವಿಜ್ಞಾನಿಗಳಾದ ನಾಗಪುರ ‘ನಿರೀ’ ಸಂಸ್ಥೆಯ ಡಾ. ಲಕ್ಷಿö್ಮಕಾಂತ್, ಬಾಂಬೆಯ ‘ನಿರೀ’ ಸಂಸ್ಥೆಯ ವಿಜ್ಞಾನಿ ಡಾ. ಕುಮಾರ್ ಅಮಿತ್ ಇವರುಗಳಿದ್ದ ತಂಡ ತಂತಿಪಾಲ, ಕಲ್ಲೂರು ಮತ್ತು ಹಿನ್ನೀರಿನ ಕೆಲ ಭಾಗಗಳಿಗೂ ತೆರಳಿ ಖುದ್ದಾಗಿ ಪರಿಶೀಲನೆ ನಡೆಸಿತು.
ಈ ಸಂದರ್ಭ ಕಾವೇರಿ ನೀರಾವರಿ ನಿಗಮ ಮೈಸೂರು ವಿಭಾಗದ ಮುಖ್ಯ ಇಂಜಿನಿಯರ್ ಶಂಕರೇಗೌಡ, ಕುಶಾಲನಗರ ಕಾವೇರಿ ನೀರಾವರಿ ನಿಗಮದ ಅಭಿಯಂತರ ಚನ್ನಕೇಶವ, ಕಾರ್ಯಪಾಲಕ ಅಭಿಯಂತರ ನಾಗೇಶ್ ಇಂಜಿನಿಯರ್ಗಳಾದ ಕಿರಣ್,ಸಿದ್ದರಾಜ್ ಸೇರಿದಂತೆ ನಿಗಮದ ಅಧಿಕಾರಿ ವರ್ಗದವರು ಮತ್ತು ಸಿಬ್ಬಂದಿಗಳು ಹಾಜರಿದ್ದರು.