ಮಡಿಕೇರಿ, ಸೆ. ೨೬: ಕೇಂದ್ರ ಸರಕಾರ ರೈತ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಸಂದರ್ಭ ಸಾರಿಗೆ ಸಂಚಾರ ಎಂದಿನAತೆ ಇರಲಿದೆ.

ಸರಕಾರಿ ಬಸ್‌ಗಳು ಎಂದಿನAತೆ ಸಂಚಾರ ನಡೆಸಲಿದೆ. ಯಾವುದೇ ತೊಡಕು ಉಂಟಾಗುವುದಿಲ್ಲ ಎಂದು ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕಿ ಗೀತಾ ಮಾಹಿತಿ ನೀಡಿದ್ದಾರೆ.

ಈಗಾಗಲೇ ಕೊರೊನಾ ಹೊಡೆತದಿಂದ ಖಾಸಗಿ ಬಸ್‌ಗಳ ಮಾಲೀಕರು, ಚಾಲಕರು, ಸಿಬ್ಬಂದಿಗಳು ಆರ್ಥಿಕ ಸಂಕಷ್ಟ

(ಮೊದಲ ಪುಟದಿಂದ) ಎದುರಿಸಿ ಮೆತ್ತನೆ ಚೇತರಿಕೆಯಾಗುವ ಹೊತ್ತಿನಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ರೈತರ ಹೋರಾಟಕ್ಕೆ ಬೆಂಬಲವಿದೆ. ಆದರೆ, ಆರ್ಥಿಕ ಸಂಕಷ್ಟ ಹಿನ್ನೆಲೆ ಬಸ್ ಸೇವೆ ಅನಿವಾರ್ಯವಾಗಿದೆ. ಒಂದು ದಿನ ಬಸ್ ಸ್ಥಗಿತಗೊಂಡರೆ ನಷ್ಟ ಉಂಟಾಗುತ್ತದೆ. ಹೀಗಾಗಿ ಬಸ್ ಸಂಚಾರ ಸಹಜವಾಗಿ ಇರಲಿದೆ. ಅದಲ್ಲದೆ ತರಗತಿ ಇರುವುದರಿಂದ ಸೇವೆ ಮುಂದುವರೆಸಲಿದ್ದೇವೆ ಎಂದು ಬಸ್ ಚಾಲಕರ ಹಾಗೂ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಜೋಯಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.

ಆಟೋ ಚಾಲಕರ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಮೇದಪ್ಪ ಈ ಬಗ್ಗೆ ಮಾತನಾಡಿ, ಹೋರಾಟಕ್ಕೆ ಬೆಂಬಲ ನೀಡುವುದು ಚಾಲಕರ ಸ್ವಇಚ್ಚೆಯಾಗಿದೆ. ಆದರೆ, ಅಧಿಕೃತವಾಗಿ ಹೋರಾಟಕ್ಕೆ ಬೆಂಬಲಿಸಿ ಆಟೋ ಸೇವೆ ಸ್ಥಗಿತ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.

ಈಗಾಗಲೇ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಹೋರಾಟಕ್ಕೆ ನೈತಿಕ ಬೆಂಬಲ ಇದೆ, ಬಂದ್ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.