ಭಾಗಮಂಡಲ, ಸೆ. ೨೬: ಅಕ್ಟೋಬರ್ ೧೭ರಂದು ಜರುಗುವ ತುಲಾಸಂಕ್ರಮಣ ಜಾತ್ರೆಗೆ ಸಂಬAಧಿಸಿದAತೆ ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಇಂದು ಚಾಲನೆ ದೊರೆಯಿತು. ಬಳ್ಳಡ್ಕ ಕುಟುಂಬಸ್ಥರು ಭಾಗಮಂಡಲದ ಬಳ್ಳಡ್ಕ ಐನ್ ಮನೆಯಲ್ಲಿ ಒಟ್ಟು ಸೇರಿ ಕಾವೇರಿ ಗದ್ದೆಯಲ್ಲಿ ಬೆಳೆದ ಅಕ್ಕಿಯನ್ನು ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ತಂದರು.

ಭಗಂಡೇಶ್ವರ ದೇವಾಲಯದ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಇಂದು ಪೂ. ೧೧.೫೫ರ ವೇಳೆ ಕೃತ್ತಿಕಾ ನಕ್ಷತ್ರದ ವೃಶ್ಚಿಕ ಲಗ್ನದಲ್ಲಿ ಈ ಅಕ್ಕಿಯನ್ನು ಖಜಾನೆಗೆ ಹಾಕುವುದರೊಂದಿಗೆ ಚಾಲನೆ ನೀಡಿದರು. ಈ ಸಂದರ್ಭ ತಲಕಾವೇರಿ ದೇವಾಲಯದ ತಕ್ಕರಾದ ಕೋಡಿ ಮೋಟಯ್ಯ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ ಹಾಗೂ ಸ್ಥಳೀಯರು, ಮಣವಟ್ಟಿರ ಹಾಗೂ ಪಟ್ಟಮಾಡ ಕುಟುಂಬಗಳ ಪ್ರಮುಖರು ಮತ್ತಿತರ ಭಕ್ತಾದಿಗಳು ಹಾಜರಿದ್ದರು.