ಸೋಮವಾರಪೇಟೆ, ಸೆ. ೨೬: ಇತ್ತೀಚಿನ ವರ್ಷಗಳಿಂದ ಅತೀ ಹೆಚ್ಚು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆ ಬೆಟ್ಟಕ್ಕೆ ಪ್ರವಾಸಿಗರು ಹೆಚ್ಚಾದಂತೆ ಸಮಸ್ಯೆಗಳೂ ಹೆಚ್ಚುತ್ತಿವೆ.

ಪಶ್ಚಿಮಘಟ್ಟ ಬೆಟ್ಟಶ್ರೇಣಿ ಪ್ರದೇಶದಲ್ಲಿರುವ ಕೋಟೆಬೆಟ್ಟದಲ್ಲಿ ಈ ಭಾಗದ ಮೂಲನಿವಾಸಿಗಳ ಆರಾದ್ಯ ದೇವರಾದ ಬೊಟ್ಲಪ್ಪ ಈಶ್ವರ ದೇವಾಲಯವಿದ್ದು, ಇಂದಿಗೂ ಕಟ್ಟುಪಾಡುಗಳೊಂದಿಗೆ ಭಯಭಕ್ತಿಯಿಂದ ಸ್ಥಳೀಯರು ಕ್ಷೇತ್ರದ ಪಾವಿತ್ರö್ಯತೆ ಉಳಿಸಿಕೊಂಡಿದ್ದಾರೆ.

ಕೋಟೆಬೆಟ್ಟದ ಬೃಹತ್ ಕಲ್ಲುಬಂಡೆಗಳ ಅಡಿಯಲ್ಲಿ ಬೊಟ್ಲಪ್ಪ ದೇವರ ನೆಲೆ ಇದೆ. ಸರ್ವೆ ನಂ. ೧೪೮ರಲ್ಲಿ ೭೧ ಸೆಂಟ್ಸ್ ಜಾಗದಲ್ಲಿ ದೇವಾಲಯವಿದ್ದು, ಆರ್‌ಟಿಸಿಯಲ್ಲಿ ಬೊಟ್ಲಪ್ಪ ದೇವರಿಗಾಗಿ ಗ್ರಾಮಸ್ಥರು ಎಂದೇ ನಮೂದಾಗಿದೆ. ಆದರೆ ಈ ಜಾಗಕ್ಕೆ ಪ್ರವೇಶ ಕಲ್ಪಿಸುವ ರಸ್ತೆಯ ಕೆಲ ಭಾಗ ಅರಣ್ಯ, ಪೈಸಾರಿ, ಸ್ಥಳೀಯರ ಖಾಸಗಿ ಜಾಗದೊಳಗೆ ಹಾದುಹೋಗಿದೆ. ಬೊಟ್ಲಪ್ಪ ಈಶ್ವರ ದೇವಾಲಯಕ್ಕೆ ಸಂಬAಧಿಸಿದAತೆ ಸುತ್ತಮುತ್ತಲಲ್ಲೇ ದೇವರ ಗುಂಡಿ, ದೇವರ ಗದ್ದೆ, ಊದನ ಕಲ್ಲು, ದೇವರ ಮೀನು ಸ್ಥಳಗಳಿವೆ.

ದೇವಾಲಯದಲ್ಲಿ ವಾರದ ಪ್ರತಿ ಮಂಗಳವಾರ ಪೂಜೆ ನೆರವೇರುತ್ತದೆ. ಮಾರ್ಚ್ ಮೊದಲನೇ ಮಂಗಳವಾರ ಜಾತ್ರಾ ಮಹೋತ್ಸವ ಏರ್ಪಾಡಾಗುತ್ತದೆ. ಸುತ್ತಮುತ್ತಲಿನ ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಭಾಗಿಯಾಗುತ್ತಾರೆ. ಪುರಾತನ ಕಾಲದಿಂದಲೂ ಆಚರಣೆಗಳು ನಡೆದುಕೊಂಡು ಬಂದಿವೆ.

ಇವಿಷ್ಟು ದೇವಾಲಯಕ್ಕೆ ಸಂಬAಧಿಸಿದ್ದಾದರೆ, ದೇವಾಲಯದ ಎದುರು ಭಾಗವಿರುವ ಬೆಟ್ಟಗುಡ್ಡಗಳ ಶ್ರೇಣಿ ಪ್ರವಾಸಿಗರ ಸ್ವಚ್ಛಂಧ ವಿಹಾರಕ್ಕೆ ತಾಣವಾಗಿದೆ. ಪ್ರಕೃತಿ ಪ್ರಿಯರಿಗೆ ಸೃಷ್ಟಿಯ ಸೌಂದರ್ಯ ಕಂಡುಬAದರೆ, ಕೆಲ ಕುಚೇಷ್ಟೆಯ ಕಿಡಿಗೇಡಿಗರಿಗೆ ಈ ತಾಣ ಮೋಜು ಮಸ್ತಿಗೆ ಬಳಕೆಯಾಗುತ್ತಿದೆ.

ಕೋಟೆಬೆಟ್ಟ ಪ್ರವಾಸಿ ತಾಣ ನೂರಾರು ಏಕರೆ ಹಸಿರಿನ ವನಸಿರಿಯನ್ನು ಹೊಂದಿದೆ. ಮಾದಾಪುರದಿಂದ ೮ ಕಿ.ಮೀ., ಸೋಮವಾರಪೇಟೆಯಿಂದ ೨೨ ಕಿ.ಮೀ. ದೂರವಿರುವ ಕೋಟೆಬೆಟ್ಟ ನಿಜಕ್ಕೂ ಭೂಲೋಕದ ಸ್ವರ್ಗವೇ ಆಗಿದೆ. ಈ ವರ್ಷವಂತೂ ನೀಲಕುರುಂಜಿ ಹೂವಿನ ಆಗಮನದಿಂದ ವಿಶ್ವಮಟ್ಟದಲ್ಲೂ ಕೋಟೆಬೆಟ್ಟ ಸದ್ದು ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಹೊರಭಾಗದಿಂದ ಆಗಮಿಸುವ ಕೆಲ ಪ್ರವಾಸಿಗರಿಂದ ಕ್ಷೇತ್ರದ ಪಾವಿತ್ರö್ಯತೆಗೆ ಧಕ್ಕೆಯಾಗುವಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿರುವುದು ಕಂಡುಬರುತ್ತಿದೆ. ದೇವ ನೆಲೆಯ ಕ್ಷೇತ್ರದಲ್ಲಿ ಬೇಕಾಬಿಟ್ಟಿ ವರ್ತನೆ, ಧೂಮಪಾನ, ಮದ್ಯಪಾನ ಸೇವನೆಯಿಂದ ಹಿಡಿದು ಅಲ್ಲಲ್ಲೇ ಅಡುಗೆ ಮಾಡಿ ಪಾರ್ಟಿ ಮಾಡುವ ಸನ್ನಿವೇಶಗಳೂ ಕಂಡುಬರುತ್ತಿದ್ದು, ಇದರಿಂದಾಗಿ ಸ್ಥಳೀಯರು ಹಾಗೂ ಕುಚೇಷ್ಟೆಯ ಪ್ರವಾಸಿಗರ ನಡುವೆ ಆಗಾಗ್ಗೆ ಘರ್ಷಣೆಗಳೂ ನಡೆದಿವೆ. ಒಂದೆರಡು ಘಟನೆಗಳು ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿವೆ.

ಬಣಗಳ ಉದ್ಭವ: ಕೋಟೆಬೆಟ್ಟವು ಪ್ರವಾಸಿ ತಾಣವಾಗಿ ರೂಪುಗೊಂಡAತೆ ಸ್ಥಳೀಯರು ಹಾಗೂ ಪಕ್ಕದ ಗ್ರಾಮದ ಕೆಲಮಂದಿಯ ನಡುವೆ ವೈಮನಸ್ಸು ಉದ್ಬವವಾಗಿದೆ. ಶಿರಂಗಳ್ಳಿಯ ಕೆಲವರು ದೇವಾಲಯದ ಪಾವಿತ್ರö್ತತೆಯನ್ನು ಕಾಪಾಡಿಕೊಂಡು ಕೋಟೆಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು. ಸರ್ಕಾರವೇ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿ ಪಡಿಸಬೇಕೆಂಬ ವಾದವನ್ನು ಮುಂದಿಟ್ಟು, ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದಾರೆ.

ಇದರೊಂದಿಗೆ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಪ ವಿಭಾಗಾಧಿಕಾರಿ ಸೇರಿದಂತೆ ಉನ್ನತಮಟ್ಟದ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ. ಈ ನಡುವೆ ಕೆಲವರು ಕ್ಷೇತ್ರದ ಪಾವಿತ್ರö್ಯತೆಗೆ ಪ್ರವಾಸಿಗರು ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದರೆ, ಇನ್ನು ಕೆಲವರು ಪ್ರವಾಸಿಗರಿಂದ ಯಾವುದೇ ಸಮಸ್ಯೆಯಾಗುತ್ತಿಲ್ಲ ಎನ್ನುತ್ತಿದ್ದಾರೆ. ಈ ಮೂಲಕ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬಂದಿವೆ.

ಸುAಕ ವಸೂಲಾತಿ ಗೇಟ್ ಅಳವಡಿಕೆ: ಈ ನಡುವೆ ಗರ್ವಾಲೆ ಗ್ರಾಮಸ್ಥರು ಹಾಗೂ ದೇವಾಲಯ ಸಮಿತಿಯವರು ಸಭೆ ಸೇರಿ ಕ್ಷೇತ್ರದ ಪಾವಿತ್ರö್ಯತೆ, ಅಭಿವೃದ್ಧಿ ಹಾಗೂ ಪ್ರವಾಸಿಗರ ಮೇಲೆ ನಿಗಾ ವಹಿಸುವ ದೃಷ್ಟಿಯಿಂದ ಸುಂಕ ವಸೂಲಾತಿ ಗೇಟ್ ಅಳವಡಿಸಿ, ಸಿಬ್ಬಂದಿಗಳನ್ನು ನಿಯೋಜಿಸಲು ತೀರ್ಮಾನಿಸಿದ್ದು, ಅದರಂತೆ ಕಳೆದ ತಾ. ೧೧ರಿಂದ ಗೇಟ್‌ನಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಕಾರ್‌ನಲ್ಲಿ ಬರುವ ಪ್ರವಾಸಿಗರಿಂದ ರೂ.೧೦೦ ಹಾಗೂ ಬೈಕ್‌ಗಳಲ್ಲಿ ಬಂದರೆ ರೂ.೫೦ ಸುಂಕ ವಸೂಲಾತಿ ಮಾಡುತ್ತಿದ್ದು, ಅದಕ್ಕೆ ಶ್ರೀ ಕೋಟೆಬೆಟ್ಟ ಬೊಟ್ಲಪ್ಪ ದೇವರ ಜೀರ್ಣೋದ್ದಾರ ಸಮಿತಿಯ ಹೆಸರಿನಲ್ಲಿ ರಶೀದಿ ನೀಡುತ್ತಿದ್ದಾರೆ.

ಇದರಲ್ಲಿ ದೇವಾಲಯದ ಪಾವಿತ್ರö್ಯತೆಗೆ ಧಕ್ಕೆ ತಂದಲ್ಲಿ ರೂ. ೨೫೦ ದಂಡ ವಿಧಿಸಲಾಗುವುದು, ತ್ಯಾಜ್ಯಗಳನ್ನು ಕಸದ ಬುಟ್ಟಿಗೆ ಹಾಕಬೇಕು. ಧೂಮಪಾನ ಮದ್ಯಪಾನ ನಿಷಿದ್ಧ, ಪಾದರಕ್ಷೆಗಳನ್ನು ದೇವಾಲಯದ ಮೆಟ್ಟಿಲಲ್ಲಿ ಕಳಚಿಡಬೇಕು ಎಂದು ಸೂಚನೆ ನೀಡಲಾಗಿದೆ.

ಇದರೊಂದಿಗೆ ಸಿಬ್ಬಂದಿಗಳೂ ಸಹ ಪ್ರವಾಸಿಗರಿಗೆ ಮೌಖಿಕವಾಗಿ ಸೂಚನೆ ನೀಡುತ್ತಿದ್ದಾರೆ. ಇಷ್ಟೆಲ್ಲಾ ಸೂಚನೆ ನೀಡಿದರೂ ಪ್ರವಾಸಿಗರು ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯ ಎಸೆಯುತ್ತಿದ್ದು, ಇದನ್ನು ಸಮಿತಿಯ ವತಿಯಿಂದಲೇ ತೆರವು ಮಾಡಲಾಗುತ್ತಿದೆ. ಒಟ್ಟಾರೆ ಕಳೆದ ತಾ. ೧೧ರಿಂದ ಕ್ಷೇತ್ರದಲ್ಲಿ ಶುಚಿತ್ವ ಕಂಡುಬರುತ್ತಿದೆ.

ವಸೂಲಾತಿ ಕೇಂದ್ರದ ಬಗ್ಗೆ ದೂರು: ಈ ನಡುವೆ ಕೋಟೆಬೆಟ್ಟಕ್ಕೆ ತೆರಳಲು ಸರ್ಕಾರವೇ ವಹಿಸಿಕೊಂಡರೆ ಗ್ರಾಮಗಳ ಅಭಿವೃದ್ಧಿ: ಸಚಿನ್

ಕೋಟೆಬೆಟ್ಟ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿದೆ. ದೇವಾಲಯಕ್ಕೆ ಸೂಕ್ತ ಭದ್ರತೆ ನೀಡಬೇಕಿದೆ. ಪಾವಿತ್ರö್ಯತೆ ಉಳಿಸಿಕೊಳ್ಳಬೇಕಿದೆ. ದೇವಾಲಯವನ್ನು ಹೊರತುಪಡಿಸಿ ಉಳಿದಂತೆ ಇರುವ ಪ್ರವಾಸಿ ತಾಣವನ್ನು ಪ್ರವಾಸೋದ್ಯಮ ಇಲಾಖೆ, ಗ್ರಾ.ಪಂ. ಅಥವಾ ಅರಣ್ಯ ಇಲಾಖೆ ವಹಿಸಿಕೊಂಡರೆ ಸರ್ಕಾರದಿಂದ ಮೂಲಭೂತ ಸೌಕರ್ಯ ಪಡೆಯಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ನಾವುಗಳು ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದೇವೆ. ಗರ್ವಾಲೆ ಗ್ರಾ.ಪಂ.ಗೆ ಯಾವುದೇ ಆದಾಯವಿಲ್ಲ. ಪಂಚಾಯಿತಿಯಿAದಲೇ ಸುಂಕ ವಸೂಲಾತಿ ನಡೆಸಿದರೆ ಒಂದಿಷ್ಟು ಆದಾಯ ಬರುತ್ತದೆ. ಮಾದಾಪುರದಿಂದ ಗರ್ವಾಲೆಗೆ ಬರುವ ರಸ್ತೆ ಕಿರಿದಾಗಿದ್ದು, ವಾರಾಂತ್ಯದ ದಿನಗಳಲ್ಲಿ ಹೆಚ್ಚು ವಾಹನಗಳ ಓಡಾಟವಿರುತ್ತದೆ. ರಸ್ತೆ ಇಕ್ಕಟ್ಟಾಗಿರುವುದರಿಂದ ಅಪಘಾತಗಳು ನಡೆಯುತ್ತಿವೆ. ರಸ್ತೆ ವಿಸ್ತರಣೆಯಾಗಬೇಕಿದೆ. ಪ್ರವಾಸೋದ್ಯಮಕ್ಕೆ ಒಳಪಡಿಸಿದರೆ ಹೆಚ್ಚು ಅಭಿವೃದ್ಧಿಯಾಗುತ್ತದೆ. ನಾವು ದೇವಾಲಯ ಅಥವಾ ಗರ್ವಾಲೆ ಗ್ರಾಮಸ್ಥರ ವಿರುದ್ಧವಾಗಿಯೂ ಇಲ್ಲ. ದೇವಾಲಯದ ಪಾವಿತ್ರö್ಯತೆಗೆ ಧಕ್ಕೆಯಾಗದಂತೆ ಸರ್ಕಾರವೇ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಲಿ. ಖಾಸಗಿಯಾಗಿ ಸುಂಕ ವಸೂಲಾತಿ-ಉಸ್ತುವಾರಿ ವಹಿಸಿಕೊಡುವುದು ಬೇಡ ಎಂಬುದಷ್ಟೇ ನಮ್ಮ ಆಗ್ರಹ ಎಂದು ಶಿರಂಗಳ್ಳಿಯ ಸಚಿನ್ ಹೇಳಿದ್ದಾರೆ.

ನಮ್ಮ ದೇವಾಲಯದ ರಕ್ಷಣೆ ನಮ್ಮ ಜವಾಬ್ದಾರಿ: ಸಮಿತಿ

ನಮ್ಮ ದೇವಾಲಯದ ಪಾವಿತ್ರö್ಯತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವಾಸಿಗರಿಂದ ಆಗುತ್ತಿದ್ದ ಸಮಸ್ಯೆಗಳನ್ನು ದೇವಾಲಯ ಸಮಿತಿಯ ವತಿಯಿಂದಲೇ ಬಗೆಹರಿಸಲಾಗುತ್ತಿದೆ. ತ್ಯಾಜ್ಯ ಸಂಗ್ರಹಣೆಗೆ ಬುಟ್ಟಿ, ಪ್ರವಾಸಿಗರಿಗೆ ಸೂಚನೆ, ಸೆಕ್ಯೂರಿಟಿ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಷೇತ್ರ ಹಾಗೂ ಪ್ರವಾಸಿ ತಾಣವನ್ನು ಸ್ವಚ್ಚವಾಗಿಟ್ಟುಕೊಳ್ಳಲಾಗಿದೆ. ಕೆಲವರು ಅನಗತ್ಯವಾಗಿ ಈ ಬಗ್ಗೆ ಗೊಂದಲ ಮೂಡಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರವೇ ವಹಿಸಿಕೊಂಡರೆ ಹೊರಭಾಗದವರೂ ಟೆಂಡರ್‌ಗೆ ಬರುತ್ತಾರೆ. ಅವರಿಗೆ ಉಸ್ತುವಾರಿ ನೀಡಿದರೆ ಪಾವಿತ್ರö್ಯತೆ ಕಾಪಾಡಿಕೊಳ್ಳಲು ಆಗುವುದಿಲ್ಲ. ಶಾಸಕರು ಸಭೆ ನಡೆಸುವ ಬಗ್ಗೆ ತಿಳಿಸಿದ್ದಾರೆ. ಮುಂದಿನ ಬೆಳವಣಿಗೆಯನ್ನು ಕಾದುನೋಡಬೇಕಿದೆ.

–ಗರ್ವಾಲೆ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜೀರ್ಣೋದ್ದಾರ ಸಮಿತಿಯ ಮುಖಂಡರು.ಸರ್ಕಾರವೇ ವಹಿಸಿಕೊಂಡರೆ ಗ್ರಾಮಗಳ ಅಭಿವೃದ್ಧಿ: ಸಚಿನ್

–ಗರ್ವಾಲೆ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜೀರ್ಣೋದ್ದಾರ ಸಮಿತಿಯ ಮುಖಂಡರು.ಕ್ರಮ ಸರಿಯಲ್ಲ; ಇದನ್ನು ತೆರವುಗೊಳಿಸಿ ಎಂದು ಸೂಚನೆ ನೀಡಿದ್ದಾರೆ.

ಖಾಸಗಿ ಜಾಗಕ್ಕೆ ಗೇಟ್ ಶಿಫ್ಟ್: ಇದಕ್ಕೆ ಒಪ್ಪದ ಸಮಿತಿಯವರು, ಪ್ರವಾಸಿಗರಿಂದ ದೇವಾಲಯದ ಪಾವಿತ್ರö್ಯತೆಗೆ ಧಕ್ಕೆಯಾಗುತ್ತಿದ್ದು, ಅದನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ. ದೇವಾಲಯ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ, ಗಾಂಜಾ ಸೇವನೆ, ಕಾಡುಪೊದೆಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಇದನ್ನು ಸಮಿತಿಯ ಮೂಲಕವೇ ತಡೆದಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದು, ಪ್ರವೇಶ ದ್ವಾರದಲ್ಲಿದ್ದ ಗೇಟ್‌ನ್ನು ಬದಲಾಯಿಸಿ, ಖಾಸಗಿ ಜಾಗದಲ್ಲಿ ಅಳವಡಿಸಿ, ಎಂದಿನAತೆ ಕಾರ್ಯನಿರ್ವಹಿಸುತ್ತಿದೆ.

ಕೋಟೆಬೆಟ್ಟಕ್ಕೆ ಸಂಬAಧಿಸಿದAತೆ ಉದ್ಬವವಾಗಿರುವ ಈ ಸಮಸ್ಯೆಯಿಂದಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವರ ನಡುವೆ ವೈಮನಸ್ಸು ಉಂಟಾಗುತ್ತಿದೆ. ಗರ್ವಾಲೆಯ ಹಲವು ಗ್ರಾಮಸ್ಥರು ನಮ್ಮ ದೇವಾಲಯವನ್ನು ನಾವೇ ಕಾಪಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಶಿರಂಗಳ್ಳಿ ಗ್ರಾಮದ ಕೆಲವರು ಸುಂಕ ವಸೂಲಾತಿ ಸೇರಿದಂತೆ ಪ್ರವಾಸಿ ತಾಣದ ಅಭಿವೃದ್ಧಿಯನ್ನು ಸ್ಥಳೀಯ ಗ್ರಾ.ಪಂ. ಅಥವಾ ಪ್ರವಾಸೋದ್ಯಮ, ಅರಣ್ಯ ಇಲಾಖೆ ವಹಿಸಿಕೊಳ್ಳಲಿ. ಆ ಮೂಲಕ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲಿ ಎಂದು ಅಭಿಪ್ರಾಯಿಸುತ್ತಿದ್ದಾರೆ.

ಒಟ್ಟಾರೆ ಕೋಟೆಬೆಟ್ಟದ ಶ್ರೀ ಬೊಟ್ಲಪ್ಪ ಈಶ್ವರ ದೇವಾಲಯದ ಪಾವಿತ್ರö್ಯತೆಗೆ ಧಕ್ಕೆಯಾಗಬಾರದು. ಸುತ್ತಮುತ್ತಲಿನ ಪ್ರವಾಸಿ ತಾಣವೂ ಅಭಿವೃದ್ಧಿಯಾಗಬೇಕು. ಅನೈತಿಕ ಚಟುವಟಿಕೆಗಳು ಬಂದ್ ಆಗಿ, ಪ್ರವಾಸಿ ತಾಣದೊಂದಿಗೆ ಪಾವಿತ್ರö್ಯತೆಯ ತಾಣವಾಗಿಯೂ ಕೋಟೆಬೆಟ್ಟ ಉಳಿಯಬೇಕೆಂಬ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಸ್ಥಳೀಯ ಗ್ರಾ.ಪಂ. ಸೇರಿದಂತೆ ಸಂಬAಧಿಸಿದ ಇಲಾಖೆಗಳು ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ಸದ್ಯದ ಪ್ರಶ್ನೆ!

ವರದಿ: ವಿಜಯ್ ಹಾನಗಲ್