ಮದೆನಾಡು, ಸೆ. ೨೪: ಕಸವಿಲೇವಾರಿ ವಿಚಾರಕ್ಕೆ ಸಂಬAಧಿಸಿದAತೆ ಇಂದು ಮದೆ ಮದೆನಾಡು, ಸೆ. ೨೪: ಕಸವಿಲೇವಾರಿ ವಿಚಾರಕ್ಕೆ ಸಂಬAಧಿಸಿದAತೆ ಇಂದು ಮದೆ ಪ್ರಸಂಗ ಎದುರಾಯಿತು.

ಮದೆ ಗ್ರಾಮ ಪಂಚಾಯಿತಿಗೆ ಒಳಪಡುವ ಕಾಟಕೇರಿ ಎಂಬಲ್ಲಿ ಇರುವ ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯದ ಪಾಳುಬಿದ್ದ ಕೋಣೆಯೊಂದರಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಒಣಕಸ ವಿಲೇವಾರಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಕಾಟಕೇರಿ ಗ್ರಾಮದ ಕಿಮ್ಮುಡಿರ ಜಗದೀಶ್, ದೀಪಕ್ ಹಾಗೂ ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ತೆರಳಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇಲ್ಲಿ ಕಸ ತ್ಯಾಜ್ಯ ವಸ್ತುಗಳನ್ನು ಹಾಕುವುದರಿಂದ ಸಮೀಪದಲ್ಲಿ ಇರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಆರೋಗ್ಯಕ್ಕೂ ಹಾನಿ ಉಂಟಾಗುವ ಸಾಧ್ಯತೆಗಳಿದ್ದು, ಜಾಗದಲ್ಲಿ ಕಸ ಹಾಕುವದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಒಪ್ಪದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂಜುAಡ ಸ್ವಾಮಿ ಅವರು ನಮಗೆ ಕಸ ವಿಲೇವಾರಿ ಮಾಡಲು ಸರಕಾರದ ಆದೇಶ ಇರುವುದರಿಂದ ನಾವು ಅದನ್ನು ಪಾಲಿಸಲೇಬೇಕು ಎಂದರು. ಈ ಜಾಗವು ತಾತ್ಕಾಲಿಕವಾಗಿದ್ದು, ಮದೆ ಗ್ರಾಮ ಪಂಚಾಯಿತಿಗೆ ಕಸವಿಲೇವಾರಿ ಘಟಕ ಸ್ಥಾಪಿಸುವ ಉದ್ದೇಶಕ್ಕೆ

(ಮೊದಲ ಪುಟದಿಂದ) ಮದೆ ಗ್ರಾಮದ ಸ.ನಂ. ೯೮/೧P೧ ರಲ್ಲಿ ೦.೮೦ ಎಕ್ರೆ ಜಮೀನನ್ನು ಕಾಯ್ದಿರಿಸಲಾಗಿದೆ. ಸದ್ಯದಲ್ಲಿಯೇ ರೂ. ೧೧,೫೦,೦೦೦ ವೆಚ್ಚದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಮನವರಿಕೆ ಮಾಡಿದರು.

ತಾತ್ಕಾಲಿಕ ಕಸ ವಿಲೇವಾರಿ ಮಾಡಲು ಮೇಲಾಧಿಕಾರಿಗಳ ಆದೇಶವಿದ್ದು, ಈ ವಿಚಾರವನ್ನು ಸಮಿತಿ ಮುಂದೆ ಮಂಡಿಸಿ ಸಮಿತಿಯ ಸರ್ವ ಸದಸ್ಯರ ಒಪ್ಪಿಗೆಯಿಂದ ತೀರ್ಮಾನಿಸಲಾಗಿದೆ. ಕಳೆದ ೨೦ ದಿನಗಳ ಹಿಂದೆಯೇ ಕಸ ಹಾಕುವ ಬಗ್ಗೆ ನಾಮಫಲಕ ಅಳವಡಿಸಲಾಗಿದೆ. ಇಲ್ಲಿವರೆಗೂ ಯಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದು ಹೇಳಿದರು. ಪಂಚಾಯಿತಿ ಎದುರು ಗ್ರಾಮಸ್ಥರು ಜಮಾವಣೆಗೊಳ್ಳುತ್ತಿದ್ದಂತೆ ಗ್ರಾ.ಪಂ.ನಿAದ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಗ್ರಾಮಾಂತರ ಠಾಣಾಧಿಕಾರಿ ಸದಾಶಿವ ನಾಯಕ್, ಸಿಬ್ಬಂದಿಗಳಾದ ದಿನೇಶ್, ರಾಜೇಶ್ ಅವರುಗಳು ಆಗಮಿಸಿ ಸರಕಾರದ ಆದೇಶದಂತೆ ಕಾರ್ಯನಿರ್ವಹಿಸಬೇಕಾಗಿದೆ. ನೀವುಗಳೇನಾದರೂ ಆಕ್ಷೇಪ ಮಾಡುವದಾದರೆ ಕಾನೂನು ರೀತಿಯಲ್ಲಿ ಮಾಡುವಂತೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ಪರಿಸ್ಥಿತಿ ತಿಳಿಯಾಯಿತು.

- ಇಬ್ರಾಹಿಂ, ಮದೆನಾಡು