ಬೆಂಗಳೂರು, ಸೆ. ೨೪: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ವಿಧಾನ ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಸಚಿವರು ಈ ಕೆಳಗಿನಂತೆ ಉತ್ತರಿಸಿದ್ದಾರೆ.
ಶಾಸಕರ ಪ್ರಶ್ನೆ: ಮಾಗಡಿ - ಸೋಮವಾರಪೇಟೆ ರಸ್ತೆಯನ್ನು ದ್ವಿಪದರ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಲಾಗಿದೆಯೆ, ಹಾಗಿದ್ದಲ್ಲಿ ಕಾಮಗಾರಿಯು ಯಾವ ಹಂತದಲ್ಲಿದೆ. ಈ ಕಾಮಗಾರಿಗಳಿಗೆ ಮಂಜೂರಾಗಿರುವ ಮೊತ್ತವೆಷ್ಟು. ಮಾಗಡಿಯಿಂದ ಸೋಮವಾರಪೇಟೆ ರಸ್ತೆಯ ಕಾಮಗಾರಿಗೆ ಬಜೆಟ್ನಲ್ಲಿ ಮಂಜೂರಾಗಿದ್ದರೂ ಸಹ ಇದರಲ್ಲಿ ಕೊಡಗು - ಹಾಸನ ಗಡಿ ಭಾಗವಾದ ಬೆಟ್ಟಗಳವರೆಗೆ ಮಾತ್ರ ರಸ್ತೆ ಕಾಮಗಾರಿಯನ್ನು ಕೈಗೊಂಡು ಸೋಮವಾರಪೇಟೆಯನ್ನು ಕೈಬಿಡಲು ಕಾರಣವೇನು ಹಾಗೂ ಸೋಮವಾರಪೇಟೆ ಭಾಗದ ರಸ್ತೆ ಕಾಮಗಾರಿಯನ್ನು ಯಾವಾಗ ಕೈಗೊಳ್ಳಲಾಗುವುದು.
ಸಚಿವರ ಉತ್ತರ: ೨೮.೧೨.೨೦೧೭ ರಲ್ಲಿ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-೩ (ಕೆಶಿಪ್-III) ಯೋಜನೆಯಡಿ ಏಷಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನಲ್ಲಿ ರಾಜ್ಯ ಹೆದ್ದಾರಿ ಸಂ. ೮೫ರ ಭಾಗವಾದ ಮಾಗಡಿಯಿಂದ ಸೋಮವಾರಪೇಟೆ ಗಡಿವರೆಗಿನ (ಒಟ್ಟು ೧೬೬ ಕಿ.ಮೀ. ನಷ್ಟು ಉದ್ದ) ರಸ್ತೆ ಭಿವೃದ್ಧಿ ಕಾಮಗಾರಿಯನ್ನು ಹೈಬ್ರಿಡ್ ಆನ್ಯೂಟಿ ಮಾದರಿಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಸದರಿ ಕಾಮಗಾರಿಯ ರಿಯಾಯಿತಿ ಕರಾರನ್ನು ಮೆ|| ಕೆ.ಎನ್.ಆರ್. ಕನ್ಸ್ಟ್ರಕ್ಷನ್ಸ್ರವದೊಂದಿಗೆ ಮಾಡಿಕೊಳ್ಳಲಾಗಿದೆ.
ಯೋಜನೆಯ ಅಂದಾಜು ಮೊತ್ತ ರೂ. ೯೯೮ ಕೋಟಿಗಳು, ಯೋಜನೆಯ ಬಿಡ್ ಮೊತ್ತ (ಕರಾರು ಮೊತ್ತ), ರೂ. ೧೧೪೪.೫೦ ಕೋಟಿಗಳು (ಃiಜ Pಡಿoರಿeಛಿಣ ಅosಣ), ಹಾಗೂ ಯೋಜನೆಯ ಪ್ರಾರಂಭಿಕ ದಿನಾಂಕ ೧೨.೦೨.೨೦೨೦, ಕಾಮಗಾರಿಯ ಒಟ್ಟು ಉದ್ದ ೧೬೬ ಕಿ.ಮೀ., ಕಾಮಗಾರಿಯ ಪ್ರಗತಿ: ಸುಮಾರು ೭೭.೦೩ ಕಿ.ಮೀ.ನಷ್ಟು ಉದ್ದಕ್ಕೆ ಆಃಒ ಮುಕ್ತಾಯಗೊಂಡಿದ್ದು, ೩೦.೬೦ ಕಿ.ಮೀ.ನಷ್ಟು ಉದ್ದಕ್ಕೆ ಃಅ ಕಾಮಗಾರಿಯು ಮುಕ್ತಾಯಗೊಂಡಿರುತ್ತದೆ. ಯೋಜಿಸಲಾಗಿರುವ ನಿರ್ಮಾಣದ ಮುಕ್ತಾಯ ದಿನಾಂಕ ೧೦.೦೯.೨೦೨೨ (ಗುತ್ತಿಗೆಯ ಅವಧಿ ವಿಸ್ತರಣೆಯೊಂದಿಗೆ) ಮಾಗಡಿಯಿಂದ ಸೋಮವಾರಪೇಟೆ ಈ ರಸ್ತೆಯ ಹಾಸನ ಗಡಿಭಾಗದಿಂದ ಮುಂದುವರೆದ ಭಾಗವು ಉದ್ದೇಶಿತ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷö್ಮ ವಲಯದಲ್ಲಿ (Wesಣeಡಿಟಿ ಉhಚಿಣs ಇಛಿo Seಟಿsiಣive Zoಟಿe) ಬರುತ್ತಿದ್ದ ಕಾರಣದಿಂದ ಕೆಶಿಪ್-೩ರ ಯೋಜನೆಯಡಿ ಕೈಬಿಡಲಾಗಿದೆ.
ಚೆನ್ನರಾಯಪಟ್ಟಣ-ಕೊಡ್ಲಿಪೇಟೆ-ಸೋಮವಾರಪೇಟೆ-ಮಡಿಕೇರಿ-ವೀರಾಜಪೇಟೆ-ಕಣ್ಣೂರು ರಸ್ತೆಯು ಹಾಸನ ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ಮೂರು ತಾಲೂಕು ಅಂದರೆ ಸೋಮವಾರಪೇಟೆ-ಮಡಿಕೇರಿ-ವೀರಾಜಪೇಟೆ ಮೂಲಕ ಕೇರಳದ ಕಣ್ಣೂರು ಜಿಲ್ಲೆಗೆ ಸೇರುವ ರಸ್ತೆಯನ್ನು ಮೇಲ್ದರ್ಜೆಗೇರಿಸದಿರಲು ಕಾರಣವೇನು ಎಂದು ಅಪ್ಪಚ್ಚು ರಂಜನ್ ಪ್ರಶ್ನಿಸಿದರು. ಮಾಜಿ ಸೈನಿಕರುಗಳಿಗೆ ಹೆದ್ದಾರಿಗಳಲ್ಲಿ ಟೋಲ್ ಪಾವತಿಯಿಂದ ವಿನಾಯಿತಿ ನೀಡುವ ಬಗ್ಗೆ ಸರಕಾರದ ಗಮನಕ್ಕೆ ಬಂದಿದೆಯೇ, ಸರಕಾರ ಯಾವ ಕ್ರಮ ಕೈಗೊಂಡಿದೆ ಎಂದು ರಂಜನ್ ಪ್ರಶ್ನಿಸಿದರು.
ಇದಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಈ ಕೆಳಗಿನಂತೆ ಉತ್ತರಿಸಿದರು. ಎಡಿಬಿ ನೆರವಿನ ಕೆಶಿಪ್-೩ ಯೋಜನೆಯಡಿ ೨೦೧೫ ರಲ್ಲಿ ದೋಣಿಗಲ್ನಿಂದ ಪ್ರಾರಂಭವಾಗಿ ಕೊಡ್ಲಿಪೇಟೆ-ಸೋಮವಾರಪೇಟೆ-ಮಡಿಕೇರಿ-ವೀರಾಜಪೇಟೆ ಮೂಲಕ ಕೇರಳ ಗಡಿವರೆಗಿನ ೧೫೦ ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಯೋಜಿಸಿ, ವಿವರವಾದ ಯೋಜನಾ ವರದಿ ಸಿದ್ಧಪಡಿಸಲಾಗಿತ್ತು.
ಆದರೆ, ಕೆಶಿಪ್ ಪ್ರಸ್ತಾವನೆಯಂತೆ ಪೂರ್ಣ ಆರ್ಥಿಕ ನೆರವು ಎಡಿಬಿಯಿಂದ ಒದಗಿ ಬರದ ಕಾರಣ ಹಾಗೂ ಎಡಿಬಿ ಮಾರ್ಗಸೂಚಿಯಂತೆ ಪಿಪಿಪಿ ಮಾದರಿ ಗುತ್ತಿಗೆಗೆ ಅರ್ಹವಾಗದ ಕಾರಣ ಸದರಿ ರಸ್ತೆ ಅಭಿವೃದ್ಧಿಯನ್ನು ಎಡಿಬಿ ನೆರವಿನ ಕೆಶಿಪ್-೩ರಲ್ಲಿ ಅನುಮೋದನೆಗೊಂಡಿರುವುದಿಲ್ಲ. ಆದ್ದರಿಂದ ಪ್ರಸ್ತಾವನೆಯನ್ನು ಕೈಗೊಳ್ಳುವುದು ಸಾಧ್ಯವಾಗಿರುವುದಿಲ್ಲ.
ಕೆಶಿಪ್-೪ರ ಯೋಜನೆಯಡಿ ರಸ್ತೆ ಅಭಿವೃದ್ಧಿಪಡಿಸಲು ಇರುವ ನಿಗದಿತ ಮಾನದಂಡಗಳಡಿ ಸಾಧ್ಯತೆಗಳ ಪರಿಶೀಲನೆಗೆ ಪಟ್ಟಿ ಮಾಡಲಾಗಿರುವ ರಸ್ತೆಗಳಡಿ ಮೂಡಿಗೆರೆ-ದೋಣಿಗಲ್-ಶನಿವಾರಸಂತೆ-ಸೋಮವಾರಪೇಟೆ-ಮಡಿಕೇರಿ-ವೀರಾಜಪೇಟೆ-ಕೇರಳ ಬಾರ್ಡರ್ ರಸ್ತೆಯೂ ಸಹ ಸೇರಿದ್ದು ವರದಿ ಸಿದ್ಧಪಡಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ದಿನಾಂಕ ೦೭.೦೩.೨೦೧೫ ರಂದು ಹೊರಡಿಸಿರುವ ಟೋಲ್ ನೀತಿ (ಖಿoಟಟ Poಟiಛಿಥಿ)ಗೆ ಅನುಗುಣವಾಗಿ ಈ ಕೆಳಗಿನ ವಾಹನಗಳಿಗೆ ವಿನಾಯಿತಿ ಇರುತ್ತದೆ ಎಂದು ಸಚಿವರು ಮಾಹಿತಿಯಿತ್ತರು. ರಾಜ್ಯ, ಕೇಂದ್ರ ಸರಕಾರ, ಸರಕಾರ ಬಳಸಿಕೊಳ್ಳುವ ಖಾಸಗಿ ವಾಹನ, ಶಾಸಕರು, ಸಂಸದರ ವಾಹನ, ರಕ್ಷಣಾ ಇಲಾಖೆ, ಅಂಚೆ ಇಲಾಖೆ ವಾಹನ, ಸೇನಾಪಡೆ, ಅರೆಮಿಲಿಟರಿ ಪಡೆ ವಾಹನ ವಿವಿಧ ವಿಭಾಗಗಳಲ್ಲಿ ರಾಷ್ಟಿçÃಯ, ಅಂರ್ರಾಷ್ಟಿçÃಯ ಸ್ಪರ್ಧಾ ವಿಜೇತರು, ಸ್ವಾತಂತ್ರö್ಯ ಹೋರಾಟಗಾರರು, ಮಾನ್ಯತಾ ಕಾರ್ಡ್ ಹೊಂದಿದ ಪತ್ರಕರ್ತರು, ಆ್ಯಂಬುಲೆನ್ಸ್, ಅಗ್ನಿಶಾಮಕ ದಳ, ಅಂತ್ಯಸAಸ್ಕಾರಕ್ಕೆ ಶವಸಾಗಾಟ ವಾಹನಗಳು.
ಮಾಜಿ ಸೈನಿಕರಿಗೆ ಸೌಲಭ್ಯ
ಶಾಸಕ ಅಪ್ಪಚ್ಚು ರಂಜನ್ ಅವರು ಮಾಜಿ ಸೈನಿಕರ ಸೌಲಭ್ಯದ ಕುರಿತು ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಆರ್. ಅಶೋಕ್ ಅವರು ಈ ಕೆಳಗಿನಂತೆ ಉತ್ತರಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಒಟ್ಟು ೫೫೪ ಮಾಜಿ ಸೈನಿಕರು ಜಮೀನು ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಈ ಪೈಕಿ ೫೬ ಮಂದಿಗೆ ಜಮೀನು ಮಂಜೂರು ಮಾಡಲಾಗಿದೆ. ಉಳಿದವರಿಗೆ ಭೂ ಲಭ್ಯತೆ ಪಟ್ಟಿಯಂತೆ ಲಭ್ಯವಿರುವ ಜಮೀನನ್ನು ಆದ್ಯತೆ ಮೇರೆಗೆ ಸೈನಿಕರು - ಮಾಜಿ ಸೈನಿಕರಿಗೆ ನಿಯಮಾನುಸಾರ ಮಂಜೂರಾತಿಗೆ ಕ್ರಮವಹಿಸಲಾಗುತ್ತಿದೆ.
ರೈತರ ಕುರಿತಾದ ಪ್ರಶ್ನೆಗೆ ಸಚಿವರ ಉತ್ತರ ಹೀಗಿದೆ. ಜಾಗವನ್ನು ದುರಸ್ತಿಪಡಿಸಲು ಕೋರಿ ೩೭ ಅರ್ಜಿಗಳು ರೈತರಿಂದ ಸ್ವೀಕೃತವಾಗಿದೆ. ರೈತರು ತಮ್ಮ ಸ್ವಂತ ಜಾಗವನ್ನು ದುರಸ್ತಿಪಡಿಸುವಂತೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಕಚೇರಿಯಲ್ಲಿ ಮೂಲ ಕಡತ ಇಲ್ಲವೆಂದು ಹೇಳಿ ರೈತರ ಜಮೀನನ್ನು ದುರಸ್ತಿಪಡಿಸದೇ ಇರುವುದು ಸರಕಾರದ ಗಮನಕ್ಕೆ ಬಂದಿದೆ. ಮೂಲ ಕಡತ ಲಭ್ಯವಿದ್ದ ಪ್ರಕರಣಗಳಲ್ಲಿ ನಿಯಮಾನುಸಾರ ದುರಸ್ತಿಗೆ ಕ್ರಮ ವಹಿಸಲಾಗುತ್ತಿದೆ. ಮೂಲ ಕಡತ ಲಭ್ಯವಿಲ್ಲದ ಪ್ರಕರಣಗಳಲ್ಲಿ ಸರಕಾರದ ಸುತ್ತೋಲೆ ಸಂಖ್ಯೆ ಕಂಇ/೦೮/ಎಲ್ಜಿಪಿ/೨೦೧೬, ದಿನಾಂಕ ೨೦.೦೬.೨೦೧೬ ರಂತೆ ಗೈರು ವಿಲೇ ಕಡತ ತಯಾರಿಸಿ, ಸಮಿತಿಯಲ್ಲಿ ಮಂಡಿಸಿ ನಿಯಮಾನುಸಾರ ದುರಸ್ತಿಗೆ ಕ್ರಮವಹಿಸಲಾಗುತ್ತಿದೆ.
ಕುಶಾಲನಗರದಲ್ಲಿ ಮಿನಿ ವಿಧಾನಸೌಧ ಕುರಿತು ಶಾಸಕರು ಪ್ರಶ್ನಿಸಿದರು. ಇದಕ್ಕೆ ಸಚಿವರ ಉತ್ತರ ಹೀಗಿದೆ. ಕೊಡಗು ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಿರುವ ಕುಶಾಲನಗರ ತಾಲೂಕಿನಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಸ್ಥಳ ಗುರುತಿಸುವ ಪ್ರಕ್ರಿಯೆಯು ಜಾರಿಯಲ್ಲಿದ್ದು, ತಾಲೂಕುಗಳಲ್ಲಿ ಹೊಸದಾಗಿ ಮಿನಿ ವಿಧಾನಸೌಧವನ್ನು ರೂ. ೧೦ ಕೋಟಿಗಳ ಮಿತಿಯೊಳಗೆ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ.
ರಂಜನ್ ಅವರು ತಮ್ಮ ಪ್ರಶ್ನೆ ಮುಂದುವರಿಸಿ, ಕೊಡಗು ಜಿಲ್ಲೆಯಲ್ಲಿ ಭೂ ಪರಿವರ್ತಿಸಲು ಅರ್ಜಿ ಸಲ್ಲಿಸಿ ರೈತರು ಇಲಾಖೆಗೆ ಅಲೆದಾಡುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆಯೇ, ಕಳೆದ ಮೂರು ವರ್ಷಗಳಿಂದ ಜಾಗ ಪರಿವರ್ತನೆ ಕೋರಿ ಎಷ್ಟು ಅರ್ಜಿಗಳು ಬಂದಿವೆ, ಎಷ್ಟು ಅರ್ಜಿಗಳಿಗೆ ಭೂ ಪರಿವರ್ತನೆ ಆದೇಶ ನೀಡಲಾಗಿರುತ್ತದೆ ಎಂದು ಕೇಳಿದರು.
ಈ ಕುರಿತಾಗಿ ಸಚಿವರ ಉತ್ತರ ಹೀಗಿದೆ. ಕೊಡಗು ಜಿಲ್ಲೆಯಲ್ಲಿ ದಿನಾಂಕ ೦೧.೦೧.೨೦೧೯ ರಿಂದ ೩೧.೦೮.೨೦೨೧ ರವರೆಗೆ ಜಾಗ ಪರಿವರ್ತನೆ ಕೋರಿ ೩೪೧೩ ಅರ್ಜಿಗಳು ಸ್ವೀಕೃತಗೊಂಡಿದೆ. ಈ ಪೈಕಿ ೧೫೪೪ ಅರ್ಜಿಗಳನ್ನು ಅಂಗೀಕರಿಸಲಾಗಿದ್ದು, ೧೩೮೩ ಪ್ರಕರಣಗಳಲ್ಲಿ ಭೂ ಪರಿವರ್ತನೆ ಆದೇಶ ನೀಡಲಾಗಿದೆ. ೯೫೨ ಅರ್ಜಿಗಳನ್ನು ತಿರಸ್ಕರಿಸಿದೆ. ೯೧೭ ಅರ್ಜಿಗಳು ಬಾಕಿ ಇರುತ್ತವೆ.
ಖಾಲಿ ಹುದ್ದೆಗಳು
ಶಾಸಕ ರಂಜನ್ ಅವರು ಮಾತು ಮುಂದುವರಿಸಿ, ಕೊಡಗು ಜಿಲ್ಲೆಯಲ್ಲಿ ಮಂಜೂರಾಗಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳೆಷ್ಟು, ಭರ್ತಿಯಾಗಿರುವ ಹುದ್ದೆಗಳೆಷ್ಟು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿದರು. ಇದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ನೀಡಿದ ಮಾಹಿತಿ ಹೀಗಿದೆ.
ಕೊಡಗು ಜಿಲ್ಲೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೃಂದದಲ್ಲಿ ೧೦೪ ಹುದ್ದೆಗಳು ಮಂಜೂರಾಗಿದ್ದು, ೮೦ ನೌಕರರು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಇವುಗಳಲ್ಲಿ ೨೪ ಹುದ್ದೆಗಳು ಖಾಲಿ ಇರುತ್ತವೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೃಂದಕ್ಕೆ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇಮಕಾತಿ ಪ್ರಾಧಿಕಾರ ಆಗಿದ್ದು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-೧ ವೃಂದದ ಅರ್ಹ ನೌಕರರು ಲಭ್ಯವಾದಂತೆ ಜೇಷ್ಠತೆ ಮತ್ತು ಅರ್ಹತೆ ಆಧಾರದ ಮೇಲೆ ಮುಂಬಡ್ತಿ ಮೂಲಕ ಭರ್ತಿ ಮಾಡಲು ನಿರ್ದೇಶನ ನೀಡಲಾಗಿದೆ.
ಶಾಸಕರ ಪ್ರಶ್ನೆ ಮತ್ತೆ ಮುಂದುವರಿಯುತ್ತದೆ. ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಉಂಟಾಗುತ್ತಿರುವ ಮಳೆಯಿಂದ ಇಲ್ಲಿನ ರಸ್ತೆಗಳು ತುಂಬಾ ಹಾಳಾಗಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆಯೇ, ಹಾಗಿದ್ದಲ್ಲಿ ವಿಶೇಷ ಅನುದಾನ ನೀಡಲು ಸರಕಾರ ತೆಗೆದುಕೊಂಡ ಕ್ರಮವೇನು ಎಂದು ರಂಜನ್ ಪ್ರಶ್ನಿಸಿದರು. ಇದಕ್ಕೆ ಸಚಿವರ ಉತ್ತರ ಹೀಗಿದೆ. ೨೦೧೮-೧೯ ರಲ್ಲಿ ರಸ್ತೆ, ಸೇತುವೆ ಮತ್ತು ತಡೆಗೋಡೆ ಇತ್ಯಾದಿ ಕಾಮಗಾರಿಗಳನ್ನು ಮರು ನಿರ್ಮಾಣ ಮಾಡಲು ಪ್ರಕೃತಿ ವಿಕೋಪ ಅನುದಾನದಡಿ ರೂ. ೨೮ ಕೋಟಿಗಳ ಕ್ರಿಯಾ ಯೋಜನೆ ಅನುಮೋದನೆಗೊಂಡು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ೨೦೧೯-೨೦ ರಲ್ಲಿ ರಸ್ತೆ, ಸೇತುವೆ ಮತ್ತು ತಡೆಗೋಡೆ ಇತ್ಯಾದಿ ಕಾಮಗಾರಿಗಳನ್ನು ಮರು ನಿರ್ಮಾಣ ಮಾಡಲು ಪ್ರಕೃತಿ ವಿಕೋಪ ಅನುದಾನದಡಿ ರೂ. ೪೦ ಕೋಟಿಗಳ ಕ್ರಿಯಾ ಯೋಜನೆ ಅನುಮೋದನೆಗೊಂಡು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಹಾಗೂ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿಗಳು ಪ್ರಗತಿಯಲ್ಲಿದೆ.
೫೦೫೪ ರಸ್ತೆ ಮತ್ತು ಸೇತುವೆಗಳ ಪುನರ್ ನಿರ್ಮಾಣ ಯೋಜನೆಯಡಿ ರೂ. ೪೩.೪೦ ಕೋಟಿ ಅನುಮೋದನೆಗೊಂಡಿರುತ್ತದೆ. ಅಲ್ಲದೆ, ೨೦೨೦-೨೧ ರಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಕೊಡಗು ಜಿಲ್ಲಾ ವ್ಯಾಪ್ತಿಗೆ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ರೂ. ೨೫ ಕೋಟಿಗಳನ್ನು ಹಂಚಿಕೆ ಮಾಡ ಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಹಂಚಿಕೆ ಮಾಡಲಾದ ಅನುದಾನಕ್ಕನುಗುಣವಾಗಿ ಕಾಮಗಾರಿಗಳನ್ನು ಮಂಜೂರಾತಿ ನೀಡಿ ಆಡಳಿತಾತ್ಮಕ ಆದೇಶವನ್ನು ಹೊರಡಿಸಲಾಗಿರುತ್ತದೆ ಎಂದು ಸಚಿವ ಈಶ್ವರಪ್ಪ ವಿವರಿಸಿದರು.