ಭಾಗಮಂಡಲ, ಸೆ. ೨೫: ಈ ಬಾರಿ ಅಕ್ಟೋಬರ್ ತಾ. ೧೭ರ ಮಧ್ಯಾಹ್ನದ ವೇಳೆ ಕಾವೇರಿ ತೀರ್ಥೋದ್ಭವ ಜರುಗಲಿದ್ದು ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಇಂದು ಅಪರ ಜಿಲ್ಲಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ರಾಜು ಮೊಗವೀರ ಅವರು ತಲಕಾವೇರಿ ಹಾಗೂ ಭಾಗಮಂಡಲ ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕಾವೇರಿ ತೀರ್ಥೋದ್ಭವ ಮಧ್ಯಾಹ್ನದ ವೇಳೆಗೆ ಆಗುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದ್ದು ಎಲ್ಲ ಕಾರ್ಯಕ್ರಮಗಳೂ ಸಾಂಪ್ರದಾಯಿಕವಾಗಿ, ಧಾರ್ಮಿಕವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಲಿದೆ. ಯಾವುದೇ ರೀತಿಯ ಗೊಂದಲ ಆಗದ ರೀತಿಯಲ್ಲಿ ಪೂರ್ವ ಸಿದ್ಧತೆಯೊಂದಿಗೆ ರೂಪುರೇಷೆ ಮಾಡಲಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮಗಳೊಂದಿಗೆ ಜಾತ್ರೆ ನಡೆಯಲಿದ್ದು ಮುಂದೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಸಕಲ ವ್ಯವಸ್ಥೆಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ತೀರ್ಥೋದ್ಭವ ಮುಹೂರ್ತ ಅ. ೧೭ ರಂದು ಮಧ್ಯಾಹ್ನ ಸುಮಾರು ೧.೧೧ರ ವೇಳೆ ಸಾಧ್ಯತೆಯಿದ್ದು ಇನ್ನೂ ದೇವಾಲಯ ಸಮಿತಿಯು ಈ ಕುರಿತು ಜ್ಯೋತಿಷಿಗಳ ಮಾರ್ಗದರ್ಶನ ಪಡೆದು ಅಧಿಕೃತ ವಾಗಿ ಪ್ರಕಟಿಸಲಿರುವುದಾಗಿ ತಿಳಿದುಬಂದಿದೆ.
ತಲಕಾವೇರಿಯಲ್ಲಿ ಅಧಿಕಾರಿ ಭೇಟಿ ಸಂದರ್ಭದಲ್ಲಿ ತಕ್ಕರಾದ ಕೋಡಿ ಮೋಟಯ್ಯ ಮಾತನಾಡಿ ಸಂಪ್ರದಾಯ ಪದ್ಧತಿಗಳು ಎಂದಿನAತೆ ನಡೆಯಲಿದೆ ಪಡೆದು ಅಧಿಕೃತ ವಾಗಿ ಪ್ರಕಟಿಸಲಿರುವುದಾಗಿ ತಿಳಿದುಬಂದಿದೆ.
ತಲಕಾವೇರಿಯಲ್ಲಿ ಅಧಿಕಾರಿ ಭೇಟಿ ಸಂದರ್ಭದಲ್ಲಿ ತಕ್ಕರಾದ ಕೋಡಿ ಮೋಟಯ್ಯ ಮಾತನಾಡಿ ಸಂಪ್ರದಾಯ ಪದ್ಧತಿಗಳು ಎಂದಿನAತೆ ನಡೆಯಲಿದೆ ಅನುಭವಸ್ಥರನ್ನು ನೇಮಿಸುವುದು ಸೂಕ್ತ ಎಂದರು. ಕೇವಲ ಪ್ರಚಾರಕ್ಕಾಗಿ ಸ್ವಯಂಸೇವಕರ ನೇಮಕ ಬೇಡ. ಮೂರು ತಂಡಗಳಾಗಿ ಸ್ವಯಂ ಸೇವಕರನ್ನು ನೇಮಿಸುವುದು ಒಳಿತು. ಅಲ್ಲದೆ, ಸ್ವಯಂ ಸೇವಕರಿಗೆ ಹಾಗೂ ಪೊಲೀಸರಿಗೆ ಸಮರ್ಪಕ ಊಟದ ವ್ಯವಸ್ಥೆಯಾಗಬೇಕು ಎಂದರು.
ರಸ್ತೆ ಗುಂಡಿ ಮುಚ್ಚಬೇಕು
ಕಾವೇರಿ ತೀರ್ಥೋದ್ಭವದ ಈ ಪೂರ್ವಸಿದ್ಧತಾ ಸಭೆಯಲ್ಲಿ ನಿರ್ಣಯ ಕೈಗೊಂಡು ಪಾರ್ಕಿಂಗ್ ಪ್ರದೇಶಗಳಲ್ಲಿ ಮೂರರಿಂದ ನಾಲ್ಕು ಸಿಸಿಟಿವಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಬಳಸಬೇಕು. ಪಾರ್ಕಿಂಗ್ ಪ್ರದೇಶಗಳಲ್ಲಿ
(ಮೊದಲ ಪುಟದಿಂದ) ಸ್ವಯಂಸೇವಕರ ವ್ಯವಸ್ಥೆ ಆಗಬೇಕು ಎಂದು ಪ್ರಸ್ತಾಪಿಸಲಾಯಿತು. ಭಾಗಮಂಡಲದಲ್ಲಿ ರಸ್ತೆಗಳು ಗುಂಡಿ ಬಿದ್ದಿದ್ದು ಕೂಡಲೇ ದುರಸ್ತಿ ಪಡಿಸಬೇಕು. ಜಾತ್ರೆಗೆ ಮುಂಚಿತವಾಗಿ ಆಗಬೇಕು.
ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಬಗ್ಗೆ ನಾಮಫಲಕ ಗಳನ್ನು ಅಳವಡಿಸ ಬೇಕಿದೆ. ಬಟ್ಟೆ ಬದಲಾಯಿಸುವ ಸ್ಥಳಗಳಲ್ಲಿ ಅನುಚಿತ ವರ್ತನೆಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮಹಿಳಾ ಸಿಬ್ಬಂದಿಗಳನ್ನು ಹಾಗೂ ಹೋಂ ಗಾರ್ಡ್ಗಳನ್ನು ನೇಮಿಸಿಕೊಳ್ಳಬೇಕು ಎಂದು ತೀರ್ಮಾನಿಸಲಾಯಿತು.
ಗ್ರಾ.ಪಂ. ವತಿಯಿಂದ ಟೆಂಡರ್ ಮೂಲಕ ನೀಡಲಾಗುವ ಅಂಗಡಿ ಮಳಿಗೆಗಳಿಗೆ ಈ ವರ್ಷ ಬೇಡಿಕೆ ಕಡಿಮೆಯಿದ್ದು ವಾಹನ ಸಂಚಾರಕ್ಕೆ ಅಂಗಡಿ ಮಳಿಗೆಗಳಿಂದ ತೊಂದರೆಯಾಗುತ್ತಿದೆ. ಗ್ರಾಮ ಪಂಚಾಯಿತಿ ಜಾಗದಿಂದ ಹೊರಗೆ ಬರದಂತೆ ಸೂಚನೆ ನೀಡಬೇಕು. ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಸಭೆಯಲ್ಲಿ ತೀರ್ಮಾನಿಸ ಲಾಯಿತು. ನೀರಿನ ವ್ಯವಸ್ಥೆಗಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಪಂಚಾಯಿತಿಯಿAದ ಆಗಲಿದೆ. ಶೌಚಾಲಯ ಹಾಗೂ ಕಸದ ತೊಟ್ಟಿಗಳನ್ನು ಗ್ರಾ.ಪಂ.ಯಿAದ ಮಾಡಿಕೊಡ ಲಾಗುವುದು ಎಂದು ಪಂಚಾಯಿತಿ ಸಿಬ್ಬಂದಿಗಳು ತಿಳಿಸಿದರು.
ತ್ರಿವೇಣಿ ಸಂಗಮದಲ್ಲಿ ಸ್ನಾನ ಹಾಗೂ ಪಿಂಡಪ್ರದಾನಕ್ಕೆೆ ಸಂಬAಧಿಸಿದ ವಿಚಾರಗಳ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಆಗಲಿದೆ. ಈ ಬಾರಿ ತೀರ್ಥೋದ್ಭವದ ಪೂಜಾ ಕಾರ್ಯಕ್ರಮವು ಅರ್ಚಕರುಗಳಾದ ಗುರುರಾಜ್ ಮತ್ತು ರವಿರಾಜ್ ಇವರುಗಳ ನೇತೃತ್ವದಲ್ಲಿ ಇತರ ಸುಮಾರು ೧೨ - ೧೫ ಅರ್ಚಕರ ತಂಡದಿAದ ನಡೆಯಲಿದೆ.
ಪತ್ತಾಯಕ್ಕೆ ಅಕ್ಕಿ
ಕಾವೇರಿ ಜಾತ್ರೆಯ ಪ್ರಥಮ ಸಾಂಪ್ರದಾಯಿಕ ಕಾರ್ಯಕ್ರಮವಾಗಿ ತಾ.೨೭ ರ ಭಾನುವಾರ ಪತ್ತಾಯಕ್ಕೆ ಅಕ್ಕಿಹಾಕುವ ಕಾರ್ಯಕ್ರಮವಿದೆ. ಸಂಪ್ರದಾಯದAತೆ ನಡೆಯಲಿದೆ. ತಲಕಾವೇರಿಯಲ್ಲಿ ಜಾತ್ರೆ ಸಂದರ್ಭ ತಾ. ೧೬ ಮತ್ತು ೧೭ ರಂದು ಅನ್ನಸಂತರ್ಪಣೆ ವ್ಯವಸ್ಥೆಯಿದ್ದು ಇನ್ನೆರಡು ದಿನಗಳಲ್ಲಿ ತೀರ್ಮಾನ ಅಂತಿಮಗೊಳ್ಳಲಿದೆ. ಭಾಗಮಂಡಲ ದಲ್ಲಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಅಂಗಡಿಗಳಿಗೆ ಗುರುತು ಮಾಡುವ ಪ್ರಕ್ರಿಯೆ ಕೂಡಲೇ ಆಗಬೇಕಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಭಾಗಮಂಡಲ- ತಲಕಾವೇರಿ ದೇವಾಲಯಗಳÀ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ತಹಶೀಲ್ದಾರ್ ಮಹೇಶ್, ಠಾಣಾಧಿಕಾರಿ ಮಹದೇವ್,ಅಪರ ಕಂದಾಯ ಪರಿವೀಕ್ಷಕ ಅನೂಪ್ ಸಬಾಸ್ತಿನ್, ಶರ್ಮಿಳಾ, ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಆರ್ಥಿಕ ಕೊರತೆ
ಈ ಬಾರಿ ತಲಕಾವೇರಿ ಜಾತ್ರೆಗೆ ಆರ್ಥಿಕ ಕೊರತೆ ಎದುರಾಗಿದೆ ಎಂದು ಸಭೆಯಲ್ಲಿ ಕೇಳಿಬಂದ ಮಾತು. ದೇವಾಲಯ ಬ್ಯಾಂಕ್ ಖಾತೆಯಲ್ಲಿ ಕೇವಲ ರೂ. ೧೮,೪೨೨ ಸಾವಿರ ಮಾತ್ರ ಹಣವಿದೆ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ ಸಭೆಗೆ ತಿಳಿಸಿದರು. ಇಷ್ಟಾಗಿ ೨-೩ ತಿಂಗಳಿನಿAದ ದೇವಾಲಯಗಳ ಸಿಬ್ಬಂದಿಗಳಿಗೆ ವೇತನವನ್ನೂ ನೀಡಿಲ್ಲ. ಇದೀಗ ಪರ್ಯಾಯ ಆರ್ಥಿಕ ವ್ಯವಸ್ಥೆ ಕುರಿತು ಮುಂದಿನ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯಿದೆ.
-ಸುನಿಲ್ ಕುಯ್ಯಮುಡಿ