ಕಣಿವೆ, ಸೆ. ೨೪: ಹಳ್ಳ ಬಿದ್ದು ವಾಹನ ಸವಾರರಿಗೆ ಸವಾಲಾಗಿದ್ದ ಕುಶಾಲನಗರ ಕೂಡಿಗೆ ಸಂಪರ್ಕದ ಸಾಯಿ ಬಡಾವಣೆ ದ್ವಾರದ ಬಳಿಯ ರಾಜ್ಯ ಹೆದ್ದಾರಿಯ ಗುಂಡಿಯನ್ನು ಡಾಂಬರೀಕರಣಗೊಳಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುರುವಾರ ಸಂಜೆ ಮುಚ್ಚಿದ್ದಾರೆ.

ಹೆದ್ದಾರಿ ಗುಂಡಿ ಬಿದ್ದ ಬಗ್ಗೆ ‘ಶಕ್ತಿ’ ಸಚಿತ್ರ ವರದಿ ಪ್ರಕಟಿಸಿತ್ತು. ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಗುಂಡಿಯೊAದಿಗೆ ಕೂಡಿಗೆಯವರೆಗಿನ ಹೆದ್ದಾರಿಯಲ್ಲಿದ್ದ ಗುಂಡಿಗಳನ್ನು ಮುಚ್ಚಿರುವುದು ಒಳ್ಳೆಯ ಬೆಳವಣಿಗೆ ಎಂದು ಸ್ಥಳೀಯರಾದ ಪಾಣತ್ತಲೆ ಗಿರೀಶ್, ಕೇಚಪ್ಪನ ಮೋಹನ ಕುಮಾರ್, ಬಸವನತ್ತೂರಿನ ಅರುಣಕುಮಾರ್, ಮೇರ್ಕಜೆ ಪ್ರದೀಪ್ ಮೊದಲಾದವರು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.