ಮಡಿಕೇರಿ, ಸೆ. ೨೪: ಕೊಡಗಿನ ವಾಣಿಜ್ಯ ಬೆಳೆಗಳಾದ ಕಾಫಿ, ಕರಿಮೆಣಸು ಸೇರಿದಂತೆ ರಾಜ್ಯದ ಇತರೆಡೆಯ ವಾಣಿಜ್ಯ ಬೆಳೆಗಳನ್ನು ಕಮಾಡಿಟಿ ಬೋರ್ಡ್ ವ್ಯಾಪ್ತಿಗೆ ತರುವಂತೆ ಮೇಲ್ಮನೆಯಲ್ಲಿ ವೀಣಾ ಅಚ್ಚಯ್ಯ ಗಮನ ಸೆಳೆದರು.

ಪ್ರತಿಯೊಂದು ಬೆಳೆಗಾರರು ತಮ್ಮ ಸಮಸ್ಯೆಯನ್ನು ಹಾಗೂ ಬೇಡಿಕೆಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತರಲಾಗುವುದಿಲ್ಲ. ಕಮಾಡಿಟಿ ಬೋರ್ಡ್ಗೆ ವಾಣಿಜ್ಯ ಬೆಳೆಗಳನ್ನು ಸೇರಿಸಬೇಕು. ಕೊಡಗಿನ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, ಕಮಾಡಿಟಿ ಬೋರ್ಡ್ ಮೂಲಕ ಬೆಳೆಗಾರರಿಗೆ ಸಾಲ ಸೇರಿದಂತೆ ಇನ್ನಿತರ ಸೌಲಭ್ಯ ನೀಡಬೇಕು. ಕಾಫಿ ಬೆಳೆಗಾರರು ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆಯಿಂದ ಕೂಡ ವಂಚಿತರಾಗಿದ್ದಾರೆ. ಕಾಫಿ ಬೆಳೆಗಾರರಿಗೆ ಇತರ ಕೃಷಿಕರಿಗೆ ಸಿಗುವಂತ ಸೌಲಭ್ಯ ಸಿಗುತ್ತಿಲ್ಲ. ಮೊದಲು ಕಾಫಿ ಬೋರ್ಡ್ನಿಂದ ವಿದ್ಯುತ್ ವೇತನ, ಸಬ್ಸಿಡಿ ಸೌಲಭ್ಯ ಸಿಗುತಿತ್ತು. ಇದೀಗ ಲಭ್ಯವಾಗುತ್ತಿಲ್ಲ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ತೋಟಗಾರಿಕಾ ಸಚಿವ ಮುನಿರತ್ನ, ಇದಕ್ಕೆ ಸಂಬAಧಪಟ್ಟAತೆ ಕಾಫಿ ಬೋರ್ಡ್ ಸೇರಿದಂತೆ ಇನ್ನಿತರ ಬೋರ್ಡ್ ಕೇಂದ್ರ ಸರಕಾರ ಸ್ಥಾಪಿಸಿದೆ. ಸಹಾಯಧನಕ್ಕೆ ಸಂಬAಧಿಸಿದAತೆ ಗಮನಹರಿಸಲಾಗುವುದು. ವೀಣಾ ಅಚ್ಚಯ್ಯ ಅವರ ಬೇಡಿಕೆಗಳನ್ನು ಚರ್ಚಿಸಿ ಕ್ರಮತೆಗೆದುಕೊಳ್ಳಲಾಗುವುದು ಎಂದರು.