ಕರಿಕೆ, ಸೆ.೨೪: ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆಗಳ ರಾಜ್ಯಾಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಅವರು ಅರಣ್ಯ ಭವನದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ಶಾಸಕ ಕೆ.ಜಿ.ಬೋಪಯ್ಯ ಅವರ ಸೂಚನೆ ಮೇರೆಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಮುಖವಾಗಿ ಗಾಳಿಬೀಡು- ಕಡಮಕಲ್-ಸುಬ್ರಹ್ಮಣ್ಯ ರಸ್ತೆ, ದಬ್ಬಡ್ಕ ಚೆಟ್ಟಿಮಾನಿ, ವೀರಾಜಪೇಟೆಯ ಕೂಟಿಯಾಲ ರಸ್ತೆಗೆ ಅಧಿಕಾರಿಗಳ ಸಮನ್ವಯತೆಯ ಕೊರತೆಯಿಂದ ಕಡತ ವಿಲೇವಾರಿ ಯಾಗದೆ ಬಾಕಿ ಉಳಿದಿದ್ದು, ಈ ಬಗ್ಗೆ ಅರಣ್ಯ, ಕಂದಾಯ ಅಧಿಕಾರಿಗಳ ಸಭೆ ನಡೆಸಿ ಕೂಡಲೇ ಸಂಬAಧಿಸಿದ ದಾಖಲೆ ಸಂಗ್ರಹಿಸಿ ಕಡತ ಸಿದ್ಧಪಡಿಸು ವಂತೆ ಸೂಚಿಸಿದರು. ರಸ್ತೆ ಅರಣ್ಯದಲ್ಲಿ ಹಾದು ಹೋಗುತ್ತಿದ್ದು, ಇದಕ್ಕೆ ಪರಿಹಾರವಾಗಿ ಆವಂಡಿ ಗ್ರಾಮದ ಸರ್ವೆ ನಂ ೧/೧ ಒಂದರಲ್ಲಿ ನಲವತ್ತೇಳು ಎಕರೆ ಜಾಗವನ್ನು ಅರಣ್ಯ ಇಲಾಖೆ ಹೆಸರಿನಲ್ಲಿ ಖಾತೆ ಮಾಡಿಸಿದ್ದು, ಪಹಣಿ ಕೂಡ ಆಗಿರುವುದಾಗಿ ಅಧ್ಯಕ್ಷರು ಮಾಹಿತಿ ನೀಡಿದರು.
ಅಲ್ಲದೇ ರಾಷ್ಟಿçÃಯ ಉದ್ಯಾನವನ, ವನ್ಯಧಾಮ, ಮೀಸಲು ಅರಣ್ಯದಲ್ಲಿ ವಿವಿಧೆಡೆ ಕಳ್ಳಭೇಟೆ, ಮರಗಳ್ಳತನ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು, ಪಶ್ಚಿಮಘಟ್ಟ, ನದಿಮೂಲ ಸಂರಕ್ಷಣೆಗೆ ಅರಣ್ಯ ಅಧಿಕಾರಿಗಳು ಕ್ರಮವಹಿಸುವಂತೆಯೂ ಸೂಚಿಸಿದರು.
ಹೆಸರಿನಲ್ಲಿ ಖಾತೆ ಮಾಡಿಸಿದ್ದು, ಪಹಣಿ ಕೂಡ ಆಗಿರುವುದಾಗಿ ಅಧ್ಯಕ್ಷರು ಮಾಹಿತಿ ನೀಡಿದರು.