ಮಡಿಕೇರಿ, ಸೆ. ೨೫: ಕೋವಿಡ್-೧೯ ಹಿನ್ನೆಲೆ ಸೋಂಕಿತ, ಬಾದಿತ, ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಎಲ್ಲಾ ಮಕ್ಕಳ ಗುರುತಿಸುವಿಕೆ ಹಾಗೂ ಪುನರ್ವಸತಿ ಕಲ್ಪಿಸುವ ಬಗ್ಗೆ ಕ್ರಿಯಾ ಯೋಜನೆ ಅನುಷ್ಠಾನಗೊಳಿಸುವ ಕುರಿತು ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆಯು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೋವಿಡ್-೧೯ ಸಂದರ್ಭದಲ್ಲಿ ಕೋವಿಡ್-೧೯ ಬಾದಿತ, ಮಕ್ಕಳ ಪಾಲನೆ ಮತ್ತು ರಕ್ಷಣೆಗೆ ವಿವಿಧ ಇಲಾಖೆಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜೊತೆ ಕೈಜೋಡಿಸುವಂತೆ ಸೂಚಿಸಿದರು.
ಜಿ.ಪಂ., ತಾ.ಪಂ., ಗ್ರಾ.ಪಂ. ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅಧಿಕಾರಿ ಸಿಬ್ಬಂದಿಗಳು ಚೈಲ್ಡ್ಲೈನ್ ೧೦೯೮ ಮತ್ತು ಆಪ್ತ ಸಮಾಲೋಚನೆಗಾಗಿ ೧೪೪೯೯ ರ ಬಗ್ಗೆ ಅರಿವು ಮೂಡಿಸುವುದು, ಫಲಕ ಪ್ರದರ್ಶಿಸಲು ಕ್ರಮವಹಿಸುವುದು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಸಮಿತಿ ಮೂಲಕ ಮಾಹಿತಿ ಪಡೆದು ಅಗತ್ಯ ಕ್ರಮವಹಿಸಬೇಕು.
ಕೋವಿಡ್-೧೯ ಸಾಂಕ್ರಾಮಿಕ ದಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಆಸ್ಪತ್ರೆಗೆ ದಾಖಲಾದಾಗ ತಾತ್ಕಾಲಿಕ ಆಶ್ರಯ ಕಲ್ಪಿಸುವುದು, ಜೊತೆಗೆ ಭಿಕ್ಷಾಟನೆಯ ಸಂಕಷ್ಟದಲ್ಲಿರುವ ಮಕ್ಕಳು ಕಂಡುಬAದಲ್ಲಿ ಚೈಲ್ಡ್ಲೈನ್‌ಗೆ ಮಾಹಿತಿ ನೀಡಬೇಕು.
ಮಕ್ಕಳಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ, ಚಿಕಿತ್ಸೆಗೆ ಪ್ರತ್ಯೇಕ ವೈದ್ಯಕೀಯ ತಂಡ ನಿಯೋಜಿಸುವುದು, ಕೋವಿಡ್-೧೯ ನಿಂದ ಅನಾಥ ಮಕ್ಕಳು, ನವಜಾತ ಶಿಶುಗಳು ಕಂಡುಬAದಲ್ಲಿ ಆಶಾ ಕಾರ್ಯಕರ್ತರು ತಕ್ಷಣವೇ ಚೈಲ್ಡ್ಲೈನ್ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದರು.
ಕೋವಿಡ್-೧೯ ಸಾಂಕ್ರಾಮಿಕ ದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳು, ಬಾಲನ್ಯಾಯ ಕಾಯ್ದೆ ಪ್ರಕಾರ ಪಾಲನೆ ಮತ್ತು ರಕ್ಷಣೆಗೆ ಗಮನಹರಿಸುವುದು. ಬಾಲ ಕಾರ್ಮಿಕ ಪದ್ಧತಿ ತಡೆಯುವಲ್ಲಿ ಅಗತ್ಯ ಮಾಹಿತಿ ನೀಡುವುದು.
ಮಕ್ಕಳ ರಕ್ಷಣಾ ಕಾರ್ಯದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದೊಂದಿಗೆ ಸಮನ್ವಯತೆ ಸಾಧಿಸುವುದು, ಚೈಲ್ಡ್ಲೈನ್‌ಗೆ ಸ್ವೀಕೃತವಾದ ಮಾಹಿತಿಯನ್ನು ಕಾರ್ಯಪಡೆಗೆ ತಿಳಿಸುವಂತೆ ಚೈಲ್‌ಲೈನ್ ಸಮಾಲೋಚಕರಿಗೆ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ವಿ. ಸುರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ವೆಂಕಟೇಶ್ ಅವರು ಕೋವಿಡ್-೧೯ ನಿಂದಾಗಿ ಪೋಷಕರು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಎಎನ್‌ಎಂ ಮತ್ತು ಆಶಾ ಕಾರ್ಯಕರ್ತರಿಗೆ ಮಕ್ಕಳ ರಕ್ಷಣೆ ಗಮನಹರಿಸುವಂತೆ ತಿಳಿಸಲಾಗುವುದು ಎಂದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ಯೋಜನಾ ಸಮನ್ವಯಾಧಿ ಕಾರಿ ಎಂ. ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ್, ಚೈಲ್ಡ್ಲೈನ್ ಜಿಲ್ಲಾ ಸಂಯೋಜಕ ನವೀನ್ ಕುಮಾರ್ ಇತರರು ಹಲವು ಮಾಹಿತಿ ನೀಡಿದರು.