ಮಡಿಕೇರಿ, ಸೆ. ೨೫: ಸಮರ್ಥ ಕನ್ನಡಿಗರು ಸಂಸ್ಥೆಯಿAದ ವಿದ್ಯಾರ್ಥಿಗಳಿಗಾಗಿ ನಾಡು ನುಡಿ ಸಂಬAಧಿತ ವೈವಿಧ್ಯಮಯ ಸ್ಪರ್ಧೆ ಆಯೋಜಿಸಲಾಗಿದೆ.

ನಾಡು ನುಡಿಯ ಕನ್ನಡ ಗಾಯನ ಸ್ಪರ್ಧೆ, ಕನ್ನಡ ಹಾಡುಗಳಿಗೆ ನೃತ್ಯ (ವೈಯಕ್ತಿಕ), ಕನ್ನಡ ಹಾಡುಗಳಿಗೆ ನೃತ್ಯ (ಗುಂಪು), ಭರತನಾಟ್ಯ (ವೈಯಕ್ತಿಕ), ಭರತನಾಟ್ಯ (ಗುಂಪು), ಏಕಪಾತ್ರಾಭಿನಯ ಸ್ಪರ್ಧೆಗಳು ನಡೆಯಲಿವೆ.

ಆನ್‌ಲೈನ್ ಸ್ಪರ್ಧೆಯ ಕಾರಣದಿಂದ ಭಾಗವಹಿಸುವವರು ವೀಡಿಯೋ ಮಾಡಿ ವಾಟ್ಸಪ್ ಮಾಡಬೇಕು. ಸ್ಪರ್ಧೆಯ ವೀಡಿಯೋ ೨.೪೦ ನಿಮಿಷಗಳು ಮೀರದಂತಿರಲಿ. ೩ ರಿಂದ ೬ ವರ್ಷದ ಮಕ್ಕಳಿಗೆ ಪ್ರತ್ಯೇಕ ವಿಶೇಷ ಬಹುಮಾನ ಇರುತ್ತದೆ. ಭಾಗವಹಿಸಲು ಕರ್ನಾಟಕ ರಾಜ್ಯದ ಎಲ್ಲರಿಗೂ ಅವಕಾಶವಿದೆ. ವಿಜೇತರಿಗೆ ಕೊಡಗಿನಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಗುವುದು. ಎಲ್ಲಾ ಸ್ಪರ್ಧಿಗಳಿಗೂ ಪ್ರಶಂಸನಾ ಪತ್ರ ನೀಡಲಾಗುತ್ತದೆ ಎಂದು ಸಮರ್ಥ ಕನ್ನಡಿಗ ಸಂಸ್ಥೆಯ ಜಿಲ್ಲಾ ಪ್ರಧಾನ ಸಂಚಾಲಕಿ ಕೆ. ಜಯಲಕ್ಷಿö್ಮ ತಿಳಿಸಿದ್ದಾರೆ.

ವೀಡಿಯೋ ಕಳುಹಿಸಲು ಕೊನೆಯ ದಿನಾಂಕ: ೧೦-೧೦-೨೦೨೧, ವೀಡಿಯೋ ಕಳುಹಿಸಬೇಕಾದ ಸಂಖ್ಯೆ,- ೯೬೬೩೧೧೯೬೭೦, ೯೯೭೨೫೯೫೮೮೨, ೯೫೩೫೮೫೪೩೬೦