ಕೊಡಗು ಒಕ್ಕಲಿಗರ ಸಂಘ ಪ್ರತಿಪಾದನೆ
ಮಡಿಕೇರಿ, ಸೆ. ೨೪ : ಕೊಡವರು-ಜಮ್ಮಾ ಹಿಡುವಳಿದಾರರ ಕೋವಿ ಹಕ್ಕು ಪರವಾನಿಗೆ ವಿನಾಯ್ತಿ ಕುರಿತಂತೆ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪನ್ನು ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಸ್ವಾಗತಿಸುತ್ತದೆ ಎಂದು ಸಂಘದ ಅಧ್ಯಕ್ಷ ಎಸ್.ಎಂ.ಚAಗಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ೧೮೬೧ ಮತ್ತು ೧೮೭೩ರ ಶಸ್ತಾçಸ್ತç ಕಾಯ್ದೆ ತಿದ್ದುಪಡಿಯಲ್ಲಿ ಎವೆÀರಿ ಪರ್ಸನ್ ಆಫ್ ಕೂರ್ಗ್ ರೇಸ್‌ನಲ್ಲಿ ಯರ‍್ಯಾರು ಬರುತ್ತಾರೆ ಎಂಬುವುದರ ಬಗ್ಗೆ ಪರಿಪೂರ್ಣ ವಿವರಗಳಿಲ್ಲ ಎಂದು ಗಮನ ಸೆಳೆದಿದ್ದಾರೆ.
ಕಳೆದ ೭೦-೮೦ ವರ್ಷಗಳಲ್ಲಿ ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿನ ಜಮ್ಮಾ ಹಿಡುವಳಿ ಹೊಂದಿರುವ ನೂರಾರು ಒಕ್ಕಲಿಗ ಕುಟುಂಬಗಳು ಕೊಡವ ಸಂಪ್ರದಾಯವನ್ನು ಅನುಕರಣೆ ಮಾಡಿ ತಮ್ಮ ತಮ್ಮ ಮನೆ ಅಥವಾ ಕುಟುಂಬದ ಹೆಸರನ್ನು ಕೂಡ ಬದಲಾಯಿಸಿಕೊಂಡು ಕೂರ್ಗ್ ಬೈ ರೇಸ್ ಆಧಾರದ ಮೇಲೆ ಶಸ್ತಾçಸ್ತç (ಕೋವಿ) ಪರವಾನಿಗೆ ರಿಯಾಯಿತಿ ಪಡೆದಿದ್ದಾರೆ.
ವಾಸ್ತವಾಂಶ ಹೀಗಿರುವಾಗ ಜಮ್ಮಾ ಹಿಡುವಳಿ ಹೊಂದಿರುವ ಎಲ್ಲಾ ಒಕ್ಕಲಿಗರಿಗೂ ಕೂರ್ಗ್ ಬೈ ರೇಸ್ ಆಧಾರದ ಮೇಲೆ ಕೋವಿ ಪರವಾನಗಿಯಲ್ಲಿ ವಿನಾಯಿತಿ ಸಿಗಬೇಕಾಗುತ್ತದೆ ಎಂದು ಎಸ್.ಎಂ. ಚಂಗಪ್ಪ ಪ್ರತಿಪಾದಿಸಿದ್ದಾರೆ.