ಕಡಂಗ, ಸೆ. ೨೪: ಆಯುಷ್ ಕಾ ಅಮೃತ್ ಮಹೋತ್ಸವದ ಅಂಗವಾಗಿ ಆಯುಷ್ ಇಲಾಖೆ ವತಿಯಿಂದ ನೀಡುವ ಔಷಧಿ ಸಸಿಗಳ ವಿತರಣೆಯನ್ನು ಅರಪಟ್ಟು ಗ್ರಾಮದ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕೂಡಿರ ವಿನೋದ್ ನಾಣಯ್ಯ ಮತ್ತು ಸುಬೀರ್ ಸಿ.ಇ. ಅವರು ಅರ್ಹ ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭ ವೈದ್ಯಾಧಿಕಾರಿಗಳಾದ ಡಾ. ಶೈಲಜಾ, ಡಾ. ಸುಮಾ, ಡಾ. ಅರುಣ್ ಮತ್ತು ಆಯುರ್ವೇದಿಕ್ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.