ಗೋಣಿಕೊಪ್ಪ ವರದಿ, ಸೆ. ೨೩: ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘ ೨೦೨೦-೨೧ನೇ ಸಾಲಿನಲ್ಲಿ ರೂಪಾಯಿ ೪೮.೯೬ ಲಕ್ಷ ಲಾಭದಲ್ಲಿದೆ ಎಂದು ಸಂಘದ ಅಧ್ಯಕ್ಷ ಚೆಪ್ಪುಡೀರ ಎಂ. ರಾಮಕೃಷ್ಣ ತಿಳಿಸಿದರು.

ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕೋವಿಡ್ ಸಂಕಷ್ಟದ ನಡುವೆಯೂ ರೂ. ೮೪.೨೫ ಕೋಟಿ ಆರ್ಥಿಕ ಮತ್ತು ವ್ಯಾಪಾರ ವಹಿವಾಟು ನಡೆಸಿ, ರೂ. ೪೮.೯೬ ಲಕ್ಷ ಲಾಭ ಪಡೆದುಕೊಂಡಿದೆ. ಇದರಿಂದ ಜಿಲ್ಲೆಗೆ ಪ್ರಗತಿ ಸಾಧಿಸಿದ ಮಾದರಿ ಸಹಕಾರ ಸಂಘ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಇದರಂತೆ ಶೇ. ೨೧ ಡಿವಿಡೆಂಟ್ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

ಸಂಘದಲ್ಲಿ ೧೨೬೨ ಸದಸ್ಯರಿದ್ದು, ರೂ. ೧.೧೬ ಕೋಟಿ ಪಾಲು ಬಂಡವಾಳ ಹೊಂದಿದೆ. ರೂ. ೧.೬೩ ಕೋಟಿ ಕ್ಷೇಮನಿಧಿ, ರೂ. ೧.೮೦ ಕೋಟಿ ವಿವಿಧ ನಿಧಿ, ಸದಸ್ಯರಿಂದ ರೂ. ೧೦.೯೪ ಕೋಟಿ ಠೇವಣಿ ಸಂಗ್ರಹಿಸಿ, ರೂ. ೫.೭ ಕೋಟಿ ಹೂಡಿಕೆ ಮಾಡಲಾಗಿದೆ. ರೂ. ೨೧.೫೭ ಕೋಟಿ ದುಡಿಯುವ ಬಂಡವಾಳ ಹೊಂದಿದೆ. ರೂ. ೧೩.೩೮ ಕೋಟಿ ಕೃಷಿ ಮತ್ತು ಕೃಷಿಯೇತರ ಸಾಲ ನೀಡಲಾಗಿದೆ. ರೂ. ೫.೫೨ ಕೋಟಿ ಜಿಲ್ಲಾ ಸಹಕಾರ ಬ್ಯಾಂಕ್‌ನಿAದ ಸಾಲ ಪಡೆದು, ಶೇ. ೧೦೦ ಮರು ಪಾವತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕೋವಿಡ್ ಸಂದರ್ಭ ಮುಖ್ಯಮಂತ್ರಿ ಪರಿಹಾರ ನಿಧಿ, ಪಿಎಂ. ಕೇರ್ ಫಂಡ್‌ಗೆ ರೂ. ೨೦ ಸಾವಿರ ಧನ ಸಹಾಯ ನೀಡಲಾಗಿದೆ. ಸದಸ್ಯರ ಆರೋಗ್ಯ ಚಿಕಿತ್ಸೆಗೆ ರೂ. ೪೦ ಸಾವಿರ, ಮರೂರು ಕೃಷಿ ಪ್ರಾಂಗಣಕ್ಕೆ ಕಾಂಕ್ರಿಟ್ ರಸ್ತೆ ನಿರ್ಮಿಸಿ ಅಭಿವೃದ್ಧಿಪಡಿಸಲಾಗಿದೆ ಎಂದರು. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಸಂಘದ ಆಡಳಿತ ಮಂಡಳಿ ಸದಸ್ಯರು ೧೩ ವರ್ಷಗಳಿಂದ ಗೌರವ ಭತ್ಯೆ ಪಡೆಯದೆ ಇರುವ ಬಗ್ಗೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾವೇರಮ್ಮ ಪ್ರಾರ್ಥಿಸಿ ದರು. ಜಯಮ್ಮ ಸ್ವಾಗತಿಸಿದರು. ಎಂ. ಎ. ಮಂಜುಳ ವಂದಿಸಿದರು. ಉಪಾಧ್ಯಕ್ಷ ಪಾಲೇಕಂಡ ಮನು ನಂಜಪ್ಪ, ನಿರ್ದೇಶಕ ಎಂ. ಅಚ್ಚಯ್ಯ, ಬಿ.ಬಿ. ಚಂಗಪ್ಪ, ಎಸ್.ವಿ. ಚಂದ್ರಶೇಖರ, ಹೆಚ್.ಬಿ. ಗಣೇಶ್, ಹೆಚ್.ಡಿ. ಲಕ್ಷö್ಮಮ್ಮ, ಕೆ.ಕೆ. ಪದ್ಮನಾಭ, ಹೆಚ್.ಎಸ್. ಗೋವಿಂದ, ಯು.ಎಂ. ಸವಿತ, ಎಂ.ಎA. ಮಹೇಶ, ಸಿಇಒ ವಿ.ಎಸ್. ಸುಬ್ರಮಣಿ ಇದ್ದರು.