ಚೆಟ್ಟಳ್ಳಿ, ಸೆ. ೨೩: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಇದರ ೩೩ನೇ ವಾರ್ಷಿಕೋತ್ಸವದ ಅಂಗವಾಗಿ ಎಸ್.ಎಸ್.ಎಫ್. ಅಯ್ಯಂಗೇರಿ ಶಾಖೆಯಲ್ಲಿ ಧ್ವಜ ದಿನ ಕಾರ್ಯಕ್ರಮ ನಡೆಯಿತು. ಅಯ್ಯಂಗೇರಿ ಯೂನಿಟ್ ಎಸ್.ಎಸ್.ಎಫ್. ಅಧ್ಯಕ್ಷ ರಾಶಿದ್ ಅನ್ವಾರಿ ಅಲ್ ಅಹ್ಸನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್.ಎಸ್.ಎಫ್. ಮಡಿಕೇರಿ ಶಾಖೆ ನಾಯಕ ಹಾಫಿಳ್ ಯೂಸುಫ್ ಸಖಾಫಿ ಉದ್ಘಾಟಿಸಿದರು. ಜಮಾಅತ್ ಅಧ್ಯಕ್ಷ ಸಯ್ಯಿದ್ ಅಬ್ದುಲ್ ಖಾದರ್ ಅಲ್ ಬುಖಾರಿ ಧ್ವಜಾರೋಹಣ ನೆರವೇರಿಸಿದರು. ಮುಹಮ್ಮದ್ ರಾಫಿ ಹಿಮಮಿ ಧ್ವಜ ದಿನದ ಸಂದೇಶ ಭಾಷಣವನ್ನು ಮಾಡಿದರು. ಎಸ್.ವೈ.ಎಸ್ ಕಾರ್ಯದರ್ಶಿ ಹಂಝ ಸಖಾಫಿ ದುಆ ನೆರವೇರಿಸಿದರು.