ಕೂಡಿಗೆ, ಸೆ. ೨೩: ಪ್ರತಿಯೊಬ್ಬರೂ ಕೂಡ ಬಾಲ್ಯದಿಂದಲೇ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶರೀನ್ ಸುಬ್ಬಯ್ಯ ಕರೆ ನೀಡಿದರು.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ನರೇಂದ್ರ ಮೋದಿ ಹುಟ್ಟುಹಬ್ಬ ಅಂಗವಾಗಿ ಬಸವನಹಳ್ಳಿಯ ಗಿರಿಜನ ಹಾಡಿಯಲ್ಲಿ ಹಮ್ಮಿಕೊಂಡಿದ್ದ ಪೋಷಣ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಸಬಲೀಕರಣಕ್ಕೆ ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ರಾಜ್ಯ ಮಹಿಳಾ ಮೋರ್ಚಾ ಮೂಲಕ ಅವುಗಳನ್ನು ಗ್ರಾಮೀಣ ಭಾಗಗಳಿಗೆ ತಲುಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿವೆ. ಮಹಿಳೆಯರು ಆರ್ಥಿಕ ವಾಗಿ, ಸಾಮಾಜಿಕವಾಗಿ ಸದೃಢರಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳ ಮೂಲಕ ಅರಿವು ಹಾಗೂ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ರಾಜ್ಯ ಸಮಿತಿ ಸದಸ್ಯೆ ವಿಜಯಲಕ್ಷಿö್ಮ ಸುರೇಶ್ ಮಾತನಾಡಿ, ಕಿಶೋರಿಯರು ಹದಿಹರೆಯದ ವಯಸ್ಸಿನಲ್ಲಿ ಉಂಟಾಗುವ ಬದಲಾವಣೆಗಳ ಸಂದರ್ಭ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಆರೋಗ್ಯ ವೃದ್ಧಿಸಿಕೊಂಡಲ್ಲಿ ಮುಂದಿನ ವೈವಾಹಿಕ ಜೀವನದ ಸವಾಲುಗಳನ್ನು ಎದುರಿಸಲು ಅನುಕೂಲವಾಗುವುದು ಎಂದರು.
ಕಾರ್ಯಕ್ರಮ ಸಂಯೋಜಕ ರಾದ ಸಿ.ಎಸ್. ರುದ್ರಾಂಬಿಕೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಾಹಿತಿ ನೀಡಿದರು. ಹಾಡಿಯ ೬೦ ಮಕ್ಕಳಿಗೆ ಹಣ್ಣುಹಂಪಲು, ವಿಟಮಿನ್, ಐರನ್, ಕ್ಯಾಲ್ಸಿಯಂ ಮಾತ್ರೆ ವಿತರಿಸಿ, ಬಾಲಕಿಯರಿಗೆ ಸ್ಯಾನಿಟರ್ ಪ್ಯಾಡ್ ಪೂರೈಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅನಿತಾ ಪೂವಯ್ಯ, ಭುವನೇಶ್ವರಿ, ಜಿಲ್ಲಾ ಸಮಿತಿ ಸದಸ್ಯರಾದ, ಮೈನಾ ಹರೀಶ್, ರಶ್ಮಿ ಕುಶಾಲಪ್ಪ, ಸುಶೀಲಾ ಅಶೋಕ್, ಶೀಲಾ ಬೋಪಣ್ಣ, ಚಿತ್ರಾವತಿ, ಡಾಟಿ, ಸುಚಿತ್ರ ತಮ್ಮಯ್ಯ, ಪವಿತ್ರ, ತಾಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಪ್ರಮುಖರಾದ ತಂಗಮ್ಮ, ವೇದಾವತಿ, ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್, ಪುಷ್ಪ ನಾಗೇಶ್ ಮತ್ತಿತರರು ಇದ್ದರು.