ಗುಡ್ಡೆಹೊಸೂರು, ಸೆ. ೨೩: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಲ್ಯಾಂಪ್ಸ್ ಸಹಕಾರ ಸಂಘದ ಆವರಣದಲ್ಲಿ ಔಷಧಿ ಸಸ್ಯಗಳ ಸುಸ್ಥಿರ ತರಬೇತಿ ಕಾರ್ಯಾಗಾರ ನಡೆಯಿತು.
ಬೆಂಗಳೂರಿನ ಔಷಧಿ ಸಸ್ಯಗಳ ಸುಸ್ಥಿರ ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣಮೂರ್ತಿ ಮತ್ತು ದೀಪ ಅವರುಗಳು ಸಸ್ಯ ಮತ್ತು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಬಗ್ಗೆ ಮಾಹಿತಿ ನೀಡಿದರು. ಅರಣ್ಯದಲ್ಲಿ ಸಿಗುವ ಸೀಗೆಕಾಯಿ, ಜೇನು ಮರಪಾಚಿ, ನೆಲ್ಲಿಕಾಯಿ ಇದನ್ನು ಸಂಗ್ರಹಿಸುವ ಸಂದರ್ಭ ಮರಗಳನ್ನು ರಕ್ಷಿಸಿ ವಸ್ತುಗಳನ್ನು ಸಂಗ್ರಹಿಸುವ ಬಗ್ಗೆ ಸದಸ್ಯರಿಗೆ ಅರಿವು ಮೂಡಿಸಲಾಯಿತು. ಸಂಘದ ಸಿಬ್ಬಂದಿ ಯಶವಂತ ಸ್ವಾಗತಿಸಿದರು. ತರಬೇತಿಯಲ್ಲಿ ಸುಮಾರು ೧೦೦ಕ್ಕೂ ಅಧಿಕ ಮಂದಿ ಸದಸ್ಯರು ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದÀರ್ಭ ನಿರ್ದೇಶಕರಾದ ಸುರೇಶ, ಅಣ್ಣಯ್ಯ, ಸೋಲಿಗರ ಸಂಘದ ಅಧ್ಯಕ್ಷ ಕುಮಾರ ಮತ್ತು ಮುಖ್ಯ ಕಾರ್ಯನಿರ್ವಣಾಧಿಕಾರಿ ಹನಿಕುಮಾರ್, ಸಿಬ್ಬಂದಿಗಳು ಮತ್ತು ಸಂಘದ ಸದಸ್ಯರು ಹಾಜರಿದ್ದರು.