ಮಡಿಕೇರಿ, ಸೆ. ೨೩: ಬ್ಯಾಂಕ್ ಆಫ್ ಬರೋಡಾ ವತಿಯಿಂದ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ರೂ. ೬೫ ಸಾವಿರಗಳ ಮೊತ್ತದ ಗಣಕಯಂತ್ರ ಮತ್ತು ಪ್ರಿಂಟರ್ ಅನ್ನು ಉಚಿತವಾಗಿ ಶ್ರೀ ಓಂಕಾರೇಶ್ವರ ದೇವಾಲಯದ ಕಚೇರಿ ಕೆಲಸಕ್ಕೆ ಒದಗಿಸಲಾಯಿತು.
ಬ್ಯಾಂಕ್ ಆಫ್ ಬರೋಡಾದ ಮಂಗಳೂರು ವಲಯದ ಮಹಾ ಪ್ರಬಂಧಕರು ಹಾಗೂ ವಲಯ ಮುಖ್ಯಸ್ಥೆ ಆರ್. ಗಾಯತ್ರಿ, ಉಪ ಮಹಾಪ್ರಬಂಧಕರು ಹಾಗೂ ವಲಯ ಮುಖ್ಯಸ್ಥ ಆರ್. ಗೋಪಾಲಕೃಷ್ಣ, ಬ್ಯಾಂಕ್ ಆಫ್ ಬರೋಡಾದ ಮಂಗಳೂರು ಜಿಲ್ಲಾ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕರು ಹಾಗೂ ಪ್ರಾದೇಶಿಕ ಮುಖ್ಯಸ್ಥ ದೇವಿಪ್ರಸಾದ್ ಶೆಟ್ಟಿ, ಮುಖ್ಯ ಪ್ರಬಂಧಕರು ಹಾಗೂ ಉಪ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ವಿದ್ಯಾಧರಶೆಟ್ಟಿ, ಬ್ಯಾಂಕ್ ಆಫ್ ಬರೋಡಾ ಮುಖ್ಯ ಶಾಖೆಯ ಮುಖ್ಯ ಪ್ರಬಂಧಕರಾದ ಲಕ್ಷಿö್ಮÃಕಾಂತ್ ನಾಯಕ್, ಗದ್ದೆಹಳ್ಳ ಶಾಖಾ ಮುಖ್ಯಸ್ಥರಾದ ಗಿರಿಧರ್, ಮಂಗಳೂರಿನ ಜಿಲ್ಲಾ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕರಾದ ಅಮನ್ ಕುಮಾರ್ ಪಾಣಿ ಅವರು ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ. ಕೃಷ್ಣಪ್ಪ ಅವರಿಗೆ ಹಸ್ತಾಂತರಿಸಿದರು.