ಕೂಡಿಗೆ, ಸೆ. ೨೩: ಕೂಡಿಗೆ ಸರ್ಕಲ್ ಸಮೀಪದ ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಸಮೀಪದಲ್ಲಿ ನಿರ್ಮಾಣ ಮಾಡಿರುವ ಸೋಪಾನ ಕಟ್ಟೆ ಮತ್ತು ಮೆಟ್ಟಿಲು ತೀರಾ ಹಾಳಾಗಿದ್ದು, ಕಾಡುಮಯವಾಗಿದೆ. ಕಳೆದ ಒಂದು ವರ್ಷಗಳಿಂದಲೂ ಗ್ರಾಮ ಪಂಚಾಯಿತಿಗೆ ಸರಿಪಡಿಸುವಂತೆ ದುರಸ್ತಿಗೆ ಮನವಿ ಸಲ್ಲಿಸಿದರೂ ಸ್ಪಂದನ ದೊರೆತಿಲ್ಲ.
ಸಂಬAಧಿಸಿದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತುರ್ತಾಗಿ ಸೋಪಾನ ಕಟ್ಟೆಯ ದುರಸ್ತಿಗೆ ಮುಂದಾಗಬೇಕೆAದು ಗ್ರಾಮಸ್ಥರುಗಳಾದ ನಿವೃತ್ತ ಪೊಲೀಸ್ ಪೇದೆ ಗೋಪಾಲ, ಕೃಷ್ಣ, ರಾಜ, ಫಿಲೋಮಿನಾ, ದೇವಕ್ಕಿ, ರಾಜಮ್ಮ ಸೇರಿದಂತೆ ಹಲವಾರು ಮಂದಿ ಒತ್ತಾಯಿಸಿದ್ದಾರೆ.