ಸುಂಟಿಕೊಪ್ಪ, ಸೆ. ೨೨: ಕೊಡಗಿನ ಹಲವು ಕಡೆ ಗ್ರಾಮ ಲೆಕ್ಕಿಗರಾಗಿ ಕಾರ್ಯ ನಿರ್ವಹಿಸಿ ನಂತರ ಸುಂಟಿಕೊಪ್ಪದಲ್ಲಿ ಕೆಲವು ವರ್ಷಗಳಿಂದ ಕಂದಾಯ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಪದೋನ್ನತ್ತಿ ಪಡೆದು ಸುಂಟಿಕೊಪ್ಪದ ನಾಡ ಕಚೇರಿಯಲ್ಲಿ ಉಪ ತಹಶೀಲ್ದಾರ್ ಆಗಿರುವ ಹೆಚ್.ಕೆ. ಶಿವಪ್ಪ ಅವರನ್ನು ಗದ್ದೆಹಳ್ಳದ ವಿಕಾಸ್ ಜನ ಸೇವಾ ಟ್ರಸ್ಟ್ ಜೀವನ ದಾರಿ ಆಶ್ರಮದ ವತಿಯಿಂದ ಮಾದಾಪುರ ರಸ್ತೆಯ ರಾಮ ಮಂದಿರ ಸಭಾಂಗಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಕೊಡಗು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ. ಉಸ್ಮಾನ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಎಸ್. ಸದಾಶಿವ ರೈ, ಕೊಡಗು ಜಿಲ್ಲಾ ಪ್ರಜಾ ಪರಿವರ್ತನ ವೇದಿಕೆಯ ಜಿಲ್ಲಾ ಅಧ್ಯಕ್ಷ ಹೆಚ್.ಎಸ್. ಮುತ್ತಪ್ಪ, ಹರೀಶ್ ಗುಡ್ಡೆಮನೆ ಮಾತನಾಡಿದರು.

ವೇದಿಕೆಯಲ್ಲಿ ಪಂಚಾಯಿತಿ ಸದಸ್ಯೆಯರಾದ ವಸಂತಿ, ಶಾಂತಿ, ಸಂಗೀತ ಸೌಂಡ್ಸ್ ಮಾಲೀಕ ಕುಮರೇಶ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ವಿಕಾಸ್ ಜನಸೇವಾ ಟ್ರಸ್ಟ್ ಜೀವನ ದಾರಿ ಆಶ್ರಮದ ಅಧ್ಯಕ್ಷ ರಮೇಶ ವಹಿಸಿದ್ದರು.