ಮಡಿಕೇರಿ, ಸೆ. ೨೨: ಪ್ರಸಕ್ತ ಸಾಲಿಗೆ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕ/ ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ-೧, ೨ಎ, ೨ಬಿ, ೩ಎ, ಹಾಗೂ ೩ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ ಪ್ರವರ್ಗ-೧ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ರೂ.೨.೫೦ ಲಕ್ಷ ಹಾಗೂ ಪ್ರವರ್ಗ-೨ಎ, ೨ಬಿ, ೩ಎ ಮತ್ತು ೩ಬಿ ರೂ ೧ ಲಕ್ಷ ಒಳಗಿರಬೇಕು. ವಿದ್ಯಾರ್ಥಿಗಳು ಕಡ್ಡಾಯವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ ೨೨ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖಾ ವೆಬ್ಸೈಟ್ ತಿತಿತಿ.bಛಿತಿಜ. ಞಚಿಡಿಟಿಚಿಣಚಿಞಚಿ.gov.iಟಿ ಅನ್ನು ನೋಡುವುದು. ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆಗಳಾದಲ್ಲಿ bಛಿತಿಜ.hosಣeಟs@ಞಚಿಡಿಟಿಚಿಣಚಿಞಚಿ.gov.iಟಿ ಗೆ ಇ-ಮೇಲ್ ಮುಖಾಂತರ ದಾಖಲೆಗಳೊಂದಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ: ೦೮೦-೮೦೫೦೩೭೦೦೦೬ ನ್ನು ಸಂಪರ್ಕಿಸಬಹುದಾಗಿದೆ ಹಾಗೂ ಮಡಿಕೇರಿ ತಾಲೂಕು ಕಚೇರಿ ದೂ: ೯೪೮೦೩೫೬೪೦೯, ವೀರಾಜಪೇಟೆ ತಾಲೂಕು ಕಚೇರಿ ದೂ:-೮೭೬೨೪೭೬೭೯೦, ಸೋಮವಾರಪೇಟೆ ತಾಲೂಕು ಕಚೇರಿ ದೂ: ೮೬೬೦೦೧೯೦೪೨, ಜಿಲ್ಲಾ ಕಚೇರಿ ದೂ. ೯೪೪೮೨೦೫೯೧೯ ನ್ನು ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.