ಮಡಿಕೇರಿ, ಸೆ. ೨೩: ವಿದೇಶಿ ಪ್ರಜೆಗಳಿಗೆ ಕರ್ನಾಟಕದಲ್ಲಿ ಕೃಷಿ ಜಮೀನು ಖರೀದಿಸಲು ಅವಕಾಶವಿರುವುದಿಲ್ಲ. ಆದರೂ ಕೊಡಗಿನ ತೆರಾಲು ಗ್ರಾಮದಲ್ಲಿ ವಿದೇಶಿ ಮೂಲದ ಮಹಿಳೆಯೊಬ್ಬರು ಕೃಷಿ ಜಮೀನು ಹೊಂದಿದ್ದಾರೆ ಎಂಬ ವಿಚಾರಕ್ಕೆ ಸಂಬAಧಿಸಿದAತೆ ಇದು ನಿಯಮಾನುಸಾರವಾಗಿರದಿದ್ದಲ್ಲಿ ಸದರಿ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸರಕಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಸದಸ್ಯೆ ವೀಣಾ ಅಚ್ಚಯ್ಯ ಅವರು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತೆರಾಲುವಿನಲ್ಲಿ ವಿದೇಶಿ ಪ್ರಜೆಗಳು ಜಮೀನು ಖರೀದಿಸಿದ್ದಾರೆಯೇ ಇದಕ್ಕೆ ಇರುವ ನಿಯಮಗಳೇನು ಹಾಗೂ ಅವರ ಹೆಸರಿಗೆ ಖಾತೆ ಮಾಡಲಾಗಿದೆಯೇ ಎಂದು ವೀಣಾ ಅಚ್ಚಯ್ಯ ಪ್ರಶ್ನಿಸಿದರು. ಇದಕ್ಕೆ ಸಚಿವರು ನೀಡಿರುವ ಉತ್ತರ ಇಂತಿದೆ.
ವಿದೇಶಿ ಪ್ರಜೆಗಳಿಗೆ ಕರ್ನಾಟಕದಲ್ಲಿ ಕೃಷಿ ಜಮೀನು ಖರೀದಿಸಲು ಅವಕಾಶವಿರುವುದಿಲ್ಲ. ವಿದೇಶಿ ಪ್ರಜೆಯು ಭಾರತದಲ್ಲಿ ವಾಸಿಸುತ್ತಿದ್ದಲ್ಲಿ ಸಂಬAಧಿಸಿದ ರಾಜ್ಯ ಸರ್ಕಾರದಿಂದ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನಿAದ ಅನುಮತಿ ಪಡೆದು ಖರೀದಿಸಲು ಅವಕಾಶವಿರುತ್ತದೆ. (ಎಫ್ಇಎಂಎ ಕಾಯ್ದೆಯಂತೆ) ಉಪನೋಂದಣಾಧಿಕಾರಿ ಪೊನ್ನಂಪೇಟೆ ಕೊಡಗು ಜಿಲ್ಲೆ, ಇವರ ಕಚೇರಿಯಲ್ಲಿ ನೋಂದಾಯಿಸಲಾದ ದಸ್ತಾವೇಜು ಸಂಖ್ಯೆ: ೫೨೧/೯೭-೯೮ ದಿನಾಂಕ ೨೬.೦೯.೧೯೯೭ರಲ್ಲಿ ತೆರಾಲು ಗ್ರಾಮದಲ್ಲಿ ಅನಿಲ್ಕುಮಾರ್ ಮಲ್ಹೋತ್ರ ಮತ್ತು ಅವರ ಪತ್ನಿ ಪಮೇಲಾ ಗಾಲೆ ಮಲ್ಹೋತ್ರ ಅವರು ಕೃಷಿ ಭೂಮಿಯನ್ನು ಖರೀದಿಸಿರುವುದು ದಾಖಲಾಗಿರುತ್ತದೆ. ನೋಂದಾಯಿತ ದಸ್ತಾವೇಜುಗಳಲ್ಲಿ ಅನಿಲ್ಕುಮಾರ್ ಮಲ್ಹೋತ್ರ ಮತ್ತು ಅವರ ಪತ್ನಿ ಪಮೇಲಾ ಗಾಲೆ ಮಲ್ಹೋತ್ರ ಅವರು ತಾವು ತೆರಾಲು ಗ್ರಾಮ, ವೀರಾಜಪೇಟೆ ತಾಲೂಕು, ಕೊಡಗು ಜಿಲ್ಲೆ ಇಲ್ಲಿನ ನಿವಾಸಿಗಳೆಂದು ದಾಖಲಿಸಿಕೊಂಡಿರುತ್ತಾರೆ.
ನೋAದಾಯಿತ ದಸ್ತಾವೇಜಿನಂತೆ ಜೆ- ನಮೂನೆಯನ್ನು ತಹಶೀಲ್ದಾರ್ ಕಚೇರಿಯಲ್ಲಿ ಸ್ವೀಕೃತವಾದ ಕಾರಣ ಮ್ಯುಟೇಷನ್ ಅಂಗೀಕರಿಸಲಾಗಿದೆ. ಇದು ನಿಯಮಾನುಸಾರವಾಗಿರದಿದ್ದಲ್ಲಿ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂಬದು ಸಚಿವರ ಉತ್ತರವಾಗಿದೆ.
ವಿಚಾರವೇನು...?
ಪಮೇಲಾಗಾಲೆ ಮಲ್ಹೊತ್ರ ನ್ಯೂಜರ್ಸಿ ಮೂಲದವರಾಗಿದ್ದು, ಅಲ್ಲಿನ ಪಾಸ್ಪೋರ್ಟ್ ಐ.ಓ.ಸಿ. ಕಾರ್ಡ್ ಹೊಂದಿರುವ ವಿದೇಶಿ ಮಹಿಳೆಯಾಗಿದ್ದಾರೆ. ಇವರು ವೀರಾಜಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ಸರ್ವೆ ನಂಬರ್ ೧೪೯, ೧೫೧/೬, ೧೫೧/೫, ೧೪೫, ೧೩೩/೩೭P೨, ೧೩೩/೧೬, ೧೩೩/೪೭P೨, ೧೩೩/೩೧, ೧೧೧/೯ ರಲ್ಲಿ ತಮ್ಮ ಪತಿ ಅನಿಲ್ಕುಮಾರ್ ಮಲ್ಹೋತ್ರ ಹೆಸರಿನಲ್ಲಿ ಜಂಟಿಯಾಗಿ ೪೧.೧ ಎಕರೆ ಆಸ್ತಿ ಖರೀದಿಸಿದ್ದಾರೆ. ಎಲ್ಲದಕ್ಕೂ ಆರ್ಟಿಸಿ ಕೂಡಾ ಮಾಡಿಕೊಡಲಾಗಿದೆ. ವಿದೇಶಿ ಪ್ರಜೆ ಹಾಗೂ ರೂ. ೨ ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರು ಕರ್ನಾಟಕದಲ್ಲಿ ಕೃಷಿ ಜಮೀನು ಹೊಂದಲು
(ಮೊದಲ ಪುಟದಿಂದ) ಕರ್ನಾಟಕ ಭೂ ಕಂದಾಯ ಕಾಯ್ದೆಯಂತೆ ಅವಕಾಶವಿಲ್ಲ. ಆದರೂ ಇವರು ಕೃಷಿ ಜಮೀನು ಹೊಂದಿದ್ದು, ಈ ಬಗ್ಗೆ ಮೇಲ್ಮನೆ ಸದಸ್ಯರು ಪ್ರಶ್ನಿಸಿದ್ದಾರೆ. ಇವರಿಬ್ಬರ ಜಂಟಿ ಖಾತೆ ಮಾಡಿರುವ ದಾಖಲೆಗಳನ್ನು ಪಿ.ಎಂ. ಮುತ್ತಣ್ಣ ಅವರು ಸಂಗ್ರಹಿಸಿದ್ದಾರೆ.
ಸ್ಥಳೀಯರಿAದ ಜಾಗ ಖರೀದಿಸಿ ತಮ್ಮ ಹೆಸರಿಗೆ ಖಾತೆ ಮಾಡುವ ಸಂದರ್ಭ ಸಿದ್ಧಪಡಿಸಿರುವ ಪ್ರಮಾಣ ಪತ್ರದಲ್ಲಿ ಇವರಿಬ್ಬರು ತೆರಾಲು ಗ್ರಾಮದ ನಿವಾಸಿಗಳೆಂದು ದೃಢಪಡಿಸಿದ್ದಾರೆ. ಆದರೆ ಮಲ್ಹೋತ್ರ ಅವರು ಪೊನ್ನಂಪೇಟೆ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಯೊಂದರಲ್ಲಿ ಪಮೇಲಾ ವಿದೇಶಿ ಪ್ರಜೆ ಎಂದು ಉಲ್ಲೇಖಿಸಿದ್ದಾರೆ. ಇವರಿಗೆ ಇಲ್ಲಿನ ಮತದಾರರ ಗುರುತಿನ ಚೀಟಿಯೂ ದೊರೆತಿದ್ದು, ಇದೂ ಪ್ರಶ್ನಾರ್ಹವಾಗಿದೆ. ಈ ಬಗ್ಗೆ ಪಿ.ಎಂ. ಮುತ್ತಣ್ಣ ಅವರು ಆರ್ಟಿಎ ಮೂಲಕ ಮಾಹಿತಿ ಕೇಳಿದ್ದು, ಇದೀಗ ಉಪವಿಭಾಗಾಧಿಕಾರಿಗಳು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಮಾಹಿತಿಯೂ ತಿಳಿದು ಬಂದಿದೆ.
ಕೊ.ಏ.ರ. ದೂರು
೨೦೧೭ರಲ್ಲಿ ಈ ಆಸ್ತಿ ಖರೀದಿ ವಿಚಾರಕ್ಕೆ ಸಂಬAಧಿಸಿದAತೆ ಕೊಡಗು ಏಕೀಕರಣ ರಂಗ ಜಿಲ್ಲಾಧಿಕಾರಿಗಳಿಗೆ (ಆಗಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್) ದೂರು ಸಲ್ಲಿಸಿತ್ತು. ಆದರೆ ಇದರ ಬಗ್ಗೆ ಸೂಕ್ತ ತನಿಖೆ ಇನ್ನೂ ನಡೆದಿಲ್ಲವೆನ್ನಲಾಗಿದೆ.
ಪಿ.ಎಂ. ಮುತ್ತಣ್ಣ ಅವರ ಅಭಿಪ್ರಾಯದಂತೆ ಇದು ಕೊಡಗಿನಲ್ಲಿ ನಡೆದಿರುವ ಭಾರೀ ಭೂಹಗರಣಗಳಲ್ಲಿ ಒಂದಾಗಿದೆ. ಸ್ಥಳೀಕರಿಗೆ ತಲೆತಲಾಂತರದಿAದ ಬಂದಿರುವ ಆಸ್ತಿಗಳಿಗೆ ದಾಖಲೆ ಮಾಡಿಕೊಡಲು ಕಂದಾಯ ಇಲಾಖೆಯಿಂದ ಭಾರೀ ಸತಾವಣೆಯಾಗುತ್ತಿದೆ. ಹಲವಾರು ಮಂದಿಗೆ ಇನ್ನೂ ದಾಖಲೆಯಾಗದೆ ಒದ್ದಾಡುತ್ತಿದ್ದಾರೆ. ಆದರೆ ಇಲ್ಲಿ ನಿಯಮ ಬಾಹಿರವಾಗಿ ಭೂ ದಾಖಲೆ ಸೃಷ್ಟಿಯಾಗುವಲ್ಲಿ ಯಾವ ಕೈವಾಡವಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಇದು ಮಾತ್ರವಲ್ಲದೆ ಪಮೇಲಾ ಅವರ ಆಸ್ತಿ ವಿಚಾರಕ್ಕೆ ಸಂಬAಧಿಸಿದ ಕಡತವೂ ಸಂಬAಧಿಸಿದ ಇಲಾಖೆಯಿಂದ ಇದೀಗ ನಾಪತ್ತೆಯಾಗಿರುವದಾಗಿ ತಿಳಿದು ಬಂದಿದೆ.
ಈ ವ್ಯವಹಾರದ ಬಗ್ಗೆ ಪ್ರಸ್ತುತ ವೀಣಾ ಅವರ ಪ್ರಶ್ನೆಗೆ ಕಂದಾಯ ಸಚಿವರು ಉತ್ತರ ನೀಡಿದ್ದು, ಮುಂದೆ ಯಾವ ರೀತಿಯ ಕ್ರಮಗಳಾಗಬಹುದು ಎಂಬದನ್ನು ಕಾದು ನೋಡಬೇಕಿದೆ. ಕೊ.ಏ. ರಂಗದ ಪ್ರಮುಖರಾದ ತಮ್ಮು ಪೂವಯ್ಯ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಂದಾಯ ಇಲಾಖೆಯ ಕೆಲವು ಪ್ರಮುಖ ಅಧಿಕಾರಿಗಳು ಇತ್ತೀಚೆಗೆ ಮಲ್ಹೋತ್ರ ನಿವಾಸಕ್ಕೆ ಭೇಟಿ ನೀಡಿ ವಾಸ್ತವ್ಯ ಹೂಡಿದ್ದಾಗಿ ತಿಳಿದು ಬಂದಿದೆ. ಈ ವಾಸ್ತವ್ಯದ ಹಿಂದಿರುವ ಗುಟ್ಟೇನು ಎಂದು ಅವರು ಪ್ರಶ್ನಿಸಿದ್ದಾರೆ.