ಕೂಡಿಗೆ, ಸೆ. ೨೩: ರಂಗಕಲೆಗಳು ಸಮಾಜದ ಸಮಸ್ಯೆಗಳನ್ನು ತಿದ್ದಿ ಸಮಾಜದ ಕೊಳಕನ್ನು ತೆಗೆಯುವಲ್ಲಿ ಸಂವಹನವಾಗಿ ಕೆಲಸ ಮಾಡಿವೆ ಎಂದು ಹಿರಿಯ ನಾಟಕ ಕಲಾವಿದ ಕಡುವಿನಹೊಸಳ್ಳಿ ಗೋವಿಂದೇಗೌಡ ಹೇಳಿದರು.
ಮೈಸೂರು ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗೋಣಿಮರೂರು ಬಸವೇಶ್ವರ ಕೃಪಾ ಘೋಷಿತ ನಾಟಕ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಗೋಣಿಮರೂರು ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಬಿ.ವಿ. ಕಾರಂತ್ ಜನ್ಮದಿನಾಚರಣೆ ಅಂಗವಾಗಿ ಭಾರತೀಯ ರಂಗಸAಗೀತ ದಿನ, ರಂಗ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದೆ ರಂಗಕಲೆಗೆ ಹೆಚ್ಚು ಪ್ರೋತ್ಸಾಹ ಇತ್ತು. ಆದರೆ ಇಂದಿನ ದಿನಗಳಲ್ಲಿ ದೃಶ್ಯ ಮಾಧ್ಯಮದಿಂದಾಗಿ ದೂರವಾಗುತ್ತಿದೆ ಎಂದರು.ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿಯ ಮೂಲಕ ಬಾಳಪ್ಪ, ಗುಬ್ಬಿ ವೀರಣ್ಣ, ಸುಬ್ಬಯ್ಯ ನಾಯ್ಡು ಮುಂತಾದ ಹಿರಿಯ ಕಲಾವಿದರ ಕೊಡುಗೆ ಅಪಾರವಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಮಾತನಾಡಿ, ಬಿ.ವಿ. ಕಾರಂತರು ಹವ್ಯಾಸಿ ರಂಗಭೂಮಿ ಕಲಾವಿದರಾಗಿ ಕಳೆದ ನಾಲ್ಕು ದಶಕಗಳ ಚರಿತ್ರೆಯಲ್ಲಿ ಸ್ಫೂರ್ತಿದಾಯಕವಾಗಿ ಕೆಲಸ ಮಾಡಿದ್ದಾರೆ. ಆದ್ದರಿಂದ ಇವರ ಕನ್ನಡ ರಂಗ ಪ್ರದರ್ಶನಗಳು ರಾಷ್ಟç ಮತ್ತು ಅಂರ್ರಾಷ್ಟಿçÃಯ ಮಟ್ಟದಲ್ಲಿ ಪ್ರದರ್ಶನಗೊಂಡು ಜನರ ಮನಸ್ಸಿನಲ್ಲಿ ಅಜರಾಮರವಾಗಿ ಉಳಿದಿವೆ. ಮೈಸೂರು ರಂಗಾಯಣದ ಪುರೋಭಿವೃದ್ಧಿಯಲ್ಲಿ ಇವರ ಶ್ರಮ ಅಪಾರವಾಗಿದೆ. ಅವರ ಬೀದಿ ನಾಟಕಗಳಿಗೆ ವಿಶೇಷ ಸ್ಥಾನವಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪೌರಾಣಿಕ ನಾಟಕಕಾರ ಸಿದ್ದಲಿಂಗಪ್ಪ ಮಾತನಾಡಿ, ಬಿ.ವಿ. ಕಾರಂತರು ಸಂಗೀತ, ಹಾಡುಗಾರಿಕೆ, ನಿರ್ದೇಶಕ ಮೊದಲಾದ ನೆಲೆಗಳಲ್ಲಿ ವಿಶೇಷ ಪರಿಶ್ರಮ ಮತ್ತು ನಿಷೆೆ್ಠಯ ಮೂಲಕ ರಂಗಭೂಮಿಯ ಸೃಜನಶೀಲ ಆಯಾಮಗಳನ್ನು ವಿಸ್ತರಿಸಿದರು. ನಾಟಕಗಳ ಮೂಲಕ ಸಿನಿಮಾ ರಂಗ ಸೃಷ್ಟಿಯಾಯಿತು. ನಾಟಕಗಳಲ್ಲಿ ಅಭಿನಯಿಸಿದ ಕಲಾವಿದರು ಸಿನಿಮಾ ರಂಗದಲ್ಲೂ ಗುರುತಿಸಿಕೊಂಡು ತಮ್ಮ ಪ್ರತಿಭೆಯಿಂದ ಪ್ರಸಿದ್ಧಿಗಳಿಸಿದ್ದಾರೆ ಎಂದರು.
ಗಣಗೂರು ಗ್ರಾ.ಪಂ. ಉಪಾಧ್ಯಕ್ಷೆ ಗೌರಮ್ಮ ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ವೃತ್ತಿ ಕಲಾವಿದರಾದ ಕೆರೆಕೋಡಿ ವೆಂಕಟೇಶ, ರೇವಪ್ಪ, ರಾಜಪ್ಪ, ಗ್ರಾಮದ ಮುಖಂಡರಾದ ಜವರಪ್ಪ, ಬಾಣವಾರದೊಡ್ಡಪ್ಪ, ಶಂಕರಾಚಾರಿ, ರೇವಪ್ಪ, ಶಂಭುಲಿAಗಪ್ಪ, ಯಶವಂತು, ಜಯಣ್ಣ, ಚಂದ್ರಪ್ಪ ಉಪಸ್ಥಿತರಿದ್ದರು. ಕಲಾವಿದರು ರಂಗಗೀತೆ ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.