*ವೀರಾಜಪೇಟೆ, ಸೆ. ೨೩: ವಿವಾದಿತ ೩ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ರಾಷ್ಟçರಾಜಧಾನಿಯಲ್ಲಿ ಕೃಷಿಕರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲವಾಗಿ ತಾ.೨೭ ರಂದು ಆಹ್ವಾನ ನೀಡಲ್ಪಟ್ಟಿರುವ ಅಖಿಲ ಭಾರತ ಬಂದ್‌ಗೆ ಭಾರತ ಕಮ್ಯುನಿಸ್ಟ್ ಪಕ್ಷ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಸುನಿಲ್, ಸಿಪಿಎಂ ಪಕ್ಷದ ಸಂಘಟನಾ ಕಾರ್ಯದರ್ಶಿ ರಮೇಶ್, ಕಾರ್ಯದರ್ಶಿ ರಫೀಕ್ ನವಲಗುಂದ ಅವರುಗಳು ತಿಳಿಸಿದ್ದಾರೆ.