ಕೂಡಿಗೆ, ಸೆ. ೨೩: ಸ್ವಾತಂತ್ರö್ಯ ದಿನಾಚರಣೆಯ ೭೫ನೇ ಅಮೃತ ಮಹೋತ್ಸವ ಪ್ರಯುಕ್ತ ರಾಜ್ಯ ಸರಕಾರ ಆಯ್ಕೆ ಮಾಡಿದ ೭೫೦ ಗ್ರಾಮ ಪಂಚಾಯಿತಿಗಳಲ್ಲಿ ‘ಅಮೃತ ಗ್ರಾಮ ಪಂಚಾಯಿತಿ’ ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಗುರುತಿಸಲ್ಪಟ್ಟಿದೆ. ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಮಗ್ರವಾದ ಕಾಮಗಾರಿಗಳನ್ನು ಅಭಿವೃದ್ಧಿಪಡಿಸುವುದು, ಪ್ರತಿ ಮನೆಗೆ ಕುಡಿಯುವ ನೀರು, ಘನತ್ಯಾಜ್ಯದ ಶೇ. ೧೦೦ ರಷ್ಟು ವಿಂಗಡಣೆ ಮತ್ತು ವಿಲೇವಾರಿ, ತ್ಯಾಜ್ಯ ನೀರಿನ ವೈಜ್ಞಾನಿಕ ವಿಸರ್ಜನೆ, ಸೌರ ವಿದ್ಯುತ್ ಘಟಕಗಳ ಅಳವಡಿಕೆ, ಡಿಜಿಟಲ್ ಗ್ರಂಥಾಲಯ ಗಳುಳ್ಳ ಶಾಲೆಗಳನ್ನು ಸ್ಥಾಪಿಸುವ ನೂತನ ಯೋಜನೆಗೆ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಕಾಳಜಿಯಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಮೃತ ಗ್ರಾಮ ಪಂಚಾಯಿತಿಯಾಗಿ ಆಯ್ಕೆಯಾಗಿದ್ದು ರೂ. ೨೫ ಲಕ್ಷ ವಿಶೇಷ ಅನುದಾನ ದೊರಕಲಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ತಿಳಿಸಿದ್ದಾರೆ.

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಜ್ಯ ಗ್ರಾಮೀಣ ಪಂಚಾಯಿತಿ ಸಚಿವ ಈಶ್ವರಪ್ಪ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಆಯ್ಕೆ ಪ್ರಕ್ರಿಯೆಯನ್ನು ಪ್ರಕಟಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಸದಸ್ಯರಾದ ಗಿರೀಶ್, ಜ್ಯೋತಿ, ಲಕ್ಷಿö್ಮ ಗಿರೀಶ್, ದಿನೇಶ್, ಮಣಿಕಂಠ ಹಾಗೂ ಅಭಿವೃದ್ಧಿ ಅಧಿಕಾರಿ, ಬಿಜೆಪಿ ತಾಲೂಕು ವಕ್ತ್ತಾರ ಕೆ.ಜಿ. ಮನು ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರಾದ ಗಣೇಶ, ಕೃಷ್ಣಾಚಾರಿ, ಕುಮಾರ ಸ್ವಾಮಿ ಹಾಜರಿದ್ದರು.