ಗೋಣಿಕೊಪ್ಪ ವರದಿ, ಸೆ. ೨೨: ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಜೂನಿಯರ್ ಚೇಂಬರ್ ಸಪ್ತಾಹದ ಸಮಾರೋಪ ಕಾರ್ಯಕ್ರಮ ಕಕೂನ್ ಸಭಾಂಗಣದಲ್ಲಿ ನಡೆಯಿತು.

೭ ದಿನ ನಡೆದ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಸಪ್ತಾಹದ ಯೋಜನಾ ನಿರ್ದೇಶಕ ಅಜಯ್ ಮಾಹಿತಿ ನೀಡಿದರು.

ವನ್ಯಜೀವಿ ಛಾಯಾಚಿತ್ರಕಾರ ಚೆಟ್ಟಂಗಡ ಸೋಮಣ್ಣ ಅವರಿಗೆ ಅತ್ಯುತ್ತಮ ಯುವ ವ್ಯಕ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಮಾತನಾಡಿ, ಹಿರಿಯರು ಮಕ್ಕಳಿಗೆ ವ್ಯವಸಾಯವನ್ನು ಬಳುವಳಿಯಾಗಿ ನೀಡುವ ಪದ್ಧತಿ ಅನುಸರಿಸಬೇಕು ಎಂದರು. ಸರ್ಕಾರದ ಸವಲತ್ತು ಬಳಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಉತ್ತಮ ಇಳುವರಿ ಪಡೆಯಲು ಯುವಸಮೂಹ ಮುಂದಾಗಬೇಕು ಎಂದು ಸಲಹೆ ನೀಡಿದರು.

ಘಟಕ ಅಧ್ಯಕ್ಷ ಪಾರುವಂಗಡ ದಿಲನ್ ಚಂಗಪ್ಪ, ಕಾರ್ಯದರ್ಶಿ ಮತ್ರಂಡ ಬೋಪಣ್ಣ, ನಿಕಟಪೂರ್ವ ಅಧ್ಯಕ್ಷ ಗಯ ಜೋಯಪ್ಪ, ಜೆಸಿರೆಟ್ ಮುಖ್ಯಸ್ಥೆ ರಿಸ್ತ ಚಂಗಪ್ಪ, ಕಿರಿಯರ ವಲಯ ಸಿ ಉಪಾಧ್ಯಕ್ಷ ಮಹಿತ್ ಪೂಣಚ್ಚ ಇದ್ದರು.