*ಗೋಣಿಕೊಪ್ಪ, ಸೆ. ೨೨: ಮಕ್ಕಳಿಗೆ ಅನ್ನ ಪ್ರಸನ್ನ, ಅಕ್ಷರ ಅಭ್ಯಾಸ, ಗರ್ಭಿಣಿಯರಿಗೆ ಸೀಮಂತ ಲಸಿಕೆ ಅಭಿಯಾನ ಕಾರ್ಯಕ್ರಮ ಹರಿಶ್ಚಂದ್ರಪುರ ಕಾವೇರಿ ಮಹಿಳಾ ಸಮಾಜದ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ತಾಲೂಕು ಶಿಶುಅಭಿವೃದ್ಧಿ ಯೋಜನಾಧಿಕಾರಿ ಕೆ.ಆರ್. ರಾಜೇಶ್ ಮಾತನಾಡಿ ಪೌಷ್ಠಿಕ ಆಹಾರಗಳ ಸೇವನೆಯಿಂದ ತಾಯಿ ಮತ್ತು ಮಗುವಿನ ಆರೋಗ್ಯ ವೃದ್ಧಿಸುತ್ತದೆ. ಸರ್ಕಾರ ಮಕ್ಕಳ ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಗ್ರಾಮೀಣ ಭಾಗದವರು ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕೆAದು ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲಚಂಡ ಪ್ರಮೋದ್‌ಗಣಪತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಆರೋಗ್ಯ ಇಲಾಖೆ ಬಿ.ಹೆಚ್.ಇ.ಓ ಶಿವಯ್ಯ, ಅಂಗನವಾಡಿ ಶಿಕ್ಷಕಿ ಲತಾ, ಆರೋಗ್ಯ ಕಾರ್ಯಕರ್ತೆ ಶಿವಮ್ಮ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವರಲಕ್ಷಿ÷್ಮ, ಸದಸ್ಯರುಗಳಾದ ಪ್ರಿಯ, ಗೌರಿ, ತಿತಿಮತಿ ವರ್ತುಲ ಹಾಗೂ ರಾಜೇಶ್ವರಿ, ಸರೋಜ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಸಹಾಯಕರು ಹಾಜರಿದ್ದರು.