ಮಡಿಕೇರಿ, ಸೆ. ೨೨: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಅಂಗವಾಗಿ ಸೇವಾ ಮತ್ತು ಸಮರ್ಪಣಾ ಅಭಿಯಾನ ಎಂಬ ಕಾರ್ಯಕ್ರಮವಾದ ಹದಿಹರೆಯದ ಯುವತಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್, ವಿಟಮಿನ್, ಕ್ಯಾಲ್ಸಿಯಂ, ಜಂತು ಹುಳುನಿವಾರಕ, ಕಬ್ಬಿಣಾಂಶದ ಮಾತ್ರೆಗಳನ್ನು ನೀಡುವ ಕಾರ್ಯಕ್ರಮ ಬಾಲಭವನದಲ್ಲಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತ ರಾಕೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಅತಿಥಿಯಾಗಿದ್ದ ವೃತ್ತಿಪರ ಪ್ರಕೋಷ್ಠದ ಸಂಚಾಲಕಿ ಮೊಂತಿ ಗಣೇಶ್ ಅವರು ಕಿಶೋರಿಯರು ಯಾವ ರೀತಿಯಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು, ಆಹಾರ ಪದ್ಧತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಆರೋಗ್ಯ ಅಧಿಕಾರಿ ರೇವತಿ ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಿತಾ ಪೂವಯ್ಯ ಅವರು ಸ್ವಚ್ಛತೆ ಹಾಗೂ ಋತುಚಕ್ರದ ಬಗ್ಗೆ ಮಾಹಿತಿ ನೀಡಿದರು.
ನಗರಾಧ್ಯಕ್ಷ ಮನು ಮಂಜುನಾಥ್ ಅವರು ಮೋದಿ ಹುಟ್ಟುಹಬ್ಬದ ಕಾರ್ಯಕ್ರಮಗಳ ವಿವರ ನೀಡಿದರು.
ಅಧ್ಯಕ್ಷೆ ಸವಿತಾ ರಾಕೇಶ್ ಅವರು ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ತಿಳಿಸಿದರು.
ಆಶಾ ಕಾರ್ಯಕರ್ತೆ ದಿವ್ಯ, ನಗರಸಭಾ ಸದಸ್ಯರುಗಳಾದ, ಸಬಿತಾ, ಉಷಾ ಕಾವೇರಪ್ಪ, ಚಿತ್ರಾವತಿ, ಮಾಜಿ ಸದಸ್ಯೆ ಶಿವಕುಮಾರಿ, ಕನ್ನಿಕೆ, ಶುಭ ವಿಶ್ವನಾಥ, ಸಂಧ್ಯಾ ಅಶೋಕ, ಸವಿತಾ ಕುಡೆಕಲ್, ಶ್ರೀದೇವಿ, ಪ್ರೇಮ ರಾಘವಯ್ಯ, ಪವಿತ್ರ ಗಿರೀಶ, ಪ್ರಫುಲ್ಲ ಗೋಪಾಲಕೃಷ್ಣ, ರಾಣಿ, ಮಲರ್ ಮಣಿ, ರುಕ್ಮಿಣಿ, ಜಯಂತಿ, ಶಶಿ, ಮೀನಾಕ್ಷಿ ಬಾಳಿಗ ಮುಂತಾದವರು ಪಾಲ್ಗೊಂಡಿದ್ದರು. ಬಾಲಭವನದ ಮಕ್ಕಳು ಪ್ರಾರ್ಥಿಸಿದರೆ, ನಿರೂಪಣೆ ಹಾಗೂ ಸ್ವಾಗತವನ್ನು ಕವಿತಾ ರಾಮ್, ವಂದನಾರ್ಪಣೆಯನ್ನು ನಗರ ಪ್ರಧಾನ ಕಾರ್ಯದರ್ಶಿ ಶ್ವೇತಾ ಪ್ರಶಾಂತ್ ಮಾಡಿದರು.