ಚೆಟಳ್ಳಿ, ಸೆ. ೨೩: ಕಾಫಿ ಗಿಡಗಳ ನಿರ್ವಹಣೆ, ಕಾಂಡ ಕೊರಕಗಳಂತಹ ಕೀಟಭಾದೆಗಳ ಹತೋಟಿ ಕ್ರಮಗಳು, ಕಸಿಕಟ್ಟುವ ವಿಧಾನ ಹಾಗೂ ಸಸ್ಯ ಸಂವರ್ಧನ ಕ್ರಿಯೆಗಳ ಮೂಲಕ ಮೂಲ ತಳಿ ಅಭಿವೃದ್ಧಿಯ ಬಗ್ಗೆ ಚೆಟ್ಟಳ್ಳಿ ಕಾಫಿ ಉಪಸಂಶೋಧನಾ ಕೇಂದ್ರದಲ್ಲಿ ಬೆಳೆಗಾರರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಾಫಿ ಸಂಶೋಧನಾ ಕೇಂದ್ರಗಳಲ್ಲಿ ೭೫ ದಿನಗಳವರೆಗೆ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಕೋವಿಡ್ ನಿಯಮದಂತೆ ನಿಯಮಿತ ಸಂಖ್ಯೆಯ ಬೆಳೆಗಾರರು ತೋಟದ ಮೇಲ್ವಿಚಾರಕರಿಗೆ ಕಾಫಿ ತೋಟದ ಬಗ್ಗೆ ಮಾಹಿತಿ ನೀಡುವುದೇ ಈ ಕಾರ್ಯಾಗಾರದ ಮುಖ್ಯ ಉದ್ದೇಶವೆಂದು ಚೆಟ್ಟಳ್ಳಿ ಕಾಫಿ ಉಪಸಂಶೋಧನಾ ಕೇಂದ್ರದ ಉಪ ನಿರ್ದೇಶಕ ಡಾ. ಜಾರ್ಜ್ ಡ್ಯಾನಿಯಲ್ ತಿಳಿಸಿದರು.
ಕಾಫಿ ಮಂಡಳಿಯ ಜಂಟಿ ನಿರ್ದೇಶಕ ಡಾ. ಜೆ.ಎಸ್. ನಾಗರಾಜ್ ಹಾಗೂ ಮಣ್ಣು ವಿಭಾಗದ ವಿಜ್ಞಾನಿ ರಜಿಬ್ಪಾಟಿ ಮಾತನಾಡಿ, ಮಣ್ಣಿನ ಗುಣಮಟ್ಟ ಉತ್ತಮವಾಗಿದ್ದರೆ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ. ನಿರಂತರ ಸುರಿಯುವ ಮಳೆಯಿಂದಾಗಿ ಮಣ್ಣಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಂ, ಸೋಡಿಯಂ ವ್ಯತ್ಯಾಸಗೊಂಡು ಮಣ್ಣಿನ ಸಾರ ಕಡಿಮೆಯಾದರೆ ಬೆಳೆಗಳಿಗೆ ಹಲವು ರೋಗಗಳು ಬರುವ ಸಾಧ್ಯತೆಯಿದೆ. ಮಣ್ಣಿನ ಪರೀಕ್ಷೆ ಮಾಡಿಸುವುದು ಅತೀ ಮುಖ್ಯ. ಕಳಪೆ ಗೊಬ್ಬರದ ಬಗ್ಗೆ ಎಚ್ಚರವಹಿಸಬೇಕೆಂದರು.
ಕಾಫಿ ಗಿಡಗಳಿಗೆ ಬರುವ ಬೆರಿಬೋರರ್ ನಿಯಂತ್ರಣಕ್ಕೆ ಹಲವು ಕ್ರಮದ ಬಗ್ಗೆ ಕೀಟ ತಜ್ಞ ಡಾ. ಮಂಜನಾಥ್ ರೆಡ್ಡಿ, ಕಾಫಿ ತಳಿ ಅಭಿವೃದ್ಧಿ, ಸಸ್ಯ ಮೂಲದ ಸಂವರ್ಧನೆ ಕಸಿಕಟ್ಟುವಿಕೆಯ ಬಗ್ಗೆ ತಳಿ ಅಭಿವೃದ್ಧಿ ತಜ್ಞ ಡಾ. ಶಿವಲಿಂಗು ಹಾಗೂ ಬೇಸಾಯ ತಜ್ಞ ಮುಖರೀಬ್ ಕಾಫಿ ಬೇಸಾಯ ಕ್ರಮದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ತಾ. ೨೬ ರಂದು ಕಾಫಿ ಬೆಳೆಗಾರರಿಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕಾ ಕಾರ್ಯಾಗಾರ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದಲ್ಲೇ ನಡೆಯಲಿದೆ ಎಂದು ಡಾ. ಜಾರ್ಜ್ ಡ್ಯಾನಿಯಲ್ ತಿಳಿಸಿದ್ದಾರೆ.