ನಾಪೋಕ್ಲು, ಸೆ. ೨೨: ಮಡಿಕೇರಿಯಿಂದ ನಾಪೋಕ್ಲು ಕಡೆಗೆ ಬರುತ್ತಿದ್ದ ಪ್ರವಾಸಿಗರ ಕಾರೊಂದು ಇಂದು (ಕೆ.ಎ. ೦೩ ಎನ್.ಜಿ. ೮೯೫೪ ) ಬೆಟ್ಟಗೇರಿ ಸಮೀಪದ ಪಾಲೂರು ಗ್ರಾಮದ ಬಳಿಯಲ್ಲಿ ರಸ್ತೆ ಬದಿಯ ತೋಡಿಗೆ ಮಗುಚಿಕೊಂಡಿದೆ. ಕಾರಿನಲ್ಲಿ ೫ ಜನರು ಪ್ರಯಾಣಿಸುತ್ತಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ನಂತರ ಸ್ಥಳೀಯರ ಸಹಕಾರದಿಂದ ಕಾರನ್ನು ಮೇಲೆತ್ತಲಾಯಿತು.