ಮಡಿಕೇರಿ, ಸೆ. ೨೩: ಪತ್ರಕರ್ತರು, ಮಾಧ್ಯಮದವರನ್ನು ಇಡೀ ಜಗತ್ತು ನೋಡುತ್ತಿದೆ. ಸಾಮಾಜಿಕ ಜಾಲತಾಣ ಬಂದ ಬಳಿಕ ಪತ್ರಕರ್ತರನ್ನೂ ವಿಮರ್ಷೆ ಮಾಡುತ್ತಿರುವ ನಿದರ್ಶನಗಳು ನಮ್ಮ ಕಣ್ಣಮುಂದಿವೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೇಕಾದ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮತ್ತಿಕೆರೆ ಜಯರಾಂ ಹೇಳಿದರು.

ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸ ಲಾಗಿದ್ದ ಸಂಘದ ವತಿಯಿಂದ ಕೊಡಮಾಡುವ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಪ್ರಶಸ್ತಿ ಲಭಿಸಿದ ಬಳಿಕ ಪತ್ರಕರ್ತರ ಜವಾಬ್ದಾರಿ ಹೆಚ್ಚಾಗುತ್ತದೆ. ಪ್ರಶಸ್ತಿ ಬಂದಿತೆAದು ಕೋಡು ಬರಬಾರದು. ಜವಾಬ್ದಾರಿ ಅರಿತು ಸಮಾಜಕ್ಕೆ ಹೆಚ್ಚಿನ ಸೇವೆ ಸಲ್ಲಿಸಬೇಕೆಂದು ಹೇಳಿದರು. ಸಾಂಘಿಕ ಹೋರಾಟ, ಒಗ್ಗಟ್ಟಿನಿಂದ ಮುನ್ನಡೆದರೆ ಸಾಧನೆ ಸಾಧ್ಯವೆಂದು ಅಭಿಪ್ರಾಯಿಸಿದರು.

ಸಂಘದ ರಾಜ್ಯ ಸಮಿತಿ ನಿರ್ದೇಶಕ ಅಜ್ಜಮಾಡ ಕುಟ್ಟಪ್ಪ ಮಾತನಾಡಿ, ಪತ್ರಕರ್ತರು ಪರಿಣಾಮಕಾರಿ ವಿಶೇಷ ವರದಿಗಳನ್ನು ಮಾಡಿ ತಾವೂ ಬೆಳವಣಿಗೆ ಹೊಂದುವದರೊAದಿಗೆ ಸಂಸ್ಥೆಯ ಬೆಳವಣಿಗೆಗೂ ಕಾರಣೀಭೂತ ವಾಗುವುದರೊಂದಿಗೆ ಬದಲಾಗುತ್ತಿ ರುವ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಬೇಕೆAದು ಆಶಿಸಿದರು.

ಇದೇ ಸಂದರ್ಭ ದೈವಾಧೀನ ರಾದ ವೀರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ಸಣ್ಣುವಂಡ ಚಂಗಪ್ಪ ಅವರ ಹೆಸರಿನಲ್ಲಿ ಸಂಗ್ರಹಿಸಲಾದ ಹಣದಲ್ಲಿ ರಾಜ್ಯ ಸಂಘ ಹಾಗೂ ಜಿಲ್ಲಾ ಸಂಘದಲ್ಲಿ ದತ್ತಿ ನಿಧಿಯನ್ನು ಸ್ಥಾಪನೆ ಮಾಡುವಂತೆ ಚೆಕ್‌ಗಳನ್ನು ಹಸ್ತಾಂತರ ಮಾಡಿದರು.

ಅತಿಥಿ ನಗರಸಭಾ ಆಯುಕ್ತ ಎಸ್.ವಿ. ರಾಮ್‌ದಾಸ್ ಮಾತನಾಡಿ, ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲಾ ಪತ್ರಕರ್ತರಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಇಲ್ಲಿನ ಪತ್ರಕರ್ತರಲ್ಲಿ ಸಾಮಾಜಿಕ ಕಳಕಳಿ ಇದೆ. ಇದನ್ನು ಬೇರೆಯವರು ಕಲಿಯುವಂತಾಗಬೇಕೆAದು ಹೇಳಿದರು. ಪತ್ರಕರ್ತರ ಕೆಲಸದ ಹಿಂದಿನ ಶ್ರಮದಿಂದಾಗಿ ಜನರಿಗೆ ಉತ್ತಮ ಸಂದೇಶಗಳು ತಲುಪುತ್ತವೆ. ಸತ್ಯ, ನಿಷ್ಠೆಗೆ ಒತ್ತು ನೀಡಿ ಕೆಲಸ ಮಾಡುತ್ತಿರುವ ಬಗ್ಗೆ ಶ್ಲಾಘಿಸಿದರು.

ನಗರಸಭಾ ಸದಸ್ಯ ಬಿ.ಎಂ. ರಾಜೇಶ್ ಯಲ್ಲಪ್ಪ ಮಾತನಾಡಿ, ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಪತ್ರಕರ್ತರ ಕೆಲಸ ಕಷ್ಟಕರವಾಗಿದ್ದರೂ, ಅವರುಗಳ ಸಾಧನೆ ದೊಡ್ಡದಾಗಿದೆ. ಜಿಲ್ಲೆಯಲ್ಲಿ ಹಲವಷ್ಟು ಪ್ರಾಮಾಣಿಕ ಪತ್ರಕರ್ತರಿದ್ದು, ಸಾಧನೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಆಶಿಸಿದರು.

ಪತ್ರಕರ್ತರ ಸಂಘದ ರಾಷ್ಟಿçÃಯ ಸಮಿತಿ ಸದಸ್ಯ ಎಸ್.ಎ. ಮುರಳೀಧರ್ ಮಾತನಾಡಿ, ಪ್ರಶಸ್ತಿಗಳನ್ನು ನೀಡುವ ಸಂದರ್ಭ ಪ್ರಶಸ್ತಿ ಸ್ಥಾಪನೆ ಮಾಡಿದ ವರಿಗೆ ಖುಷಿಯಾಗುತ್ತದೆ. ವರ್ಷಂಪ್ರತಿ ನೆನಪಿಸಿಕೊಳ್ಳುವ ಕಾರ್ಯಕ್ರಮ ಇದಾಗಿದೆ. ಮುಂದಿನ ದಿನಗಳಲ್ಲಿ ವೀರಾಜಪೇಟೆ ಹಾಗೂ ಕುಶಾಲನಗರ ತಾಲೂಕು ಸಂಘ ರಚನೆಯಾದ ಬಳಿಕ ಅಲ್ಲಿಯೂ ಪ್ರಶಸ್ತಿ ಸ್ಥಾಪನೆ ಮಾಡಲಾಗುವುದೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾರೈ, ಪ್ರಶಸ್ತಿ ಘೋಷಣೆ ವಿಚಾರದಲ್ಲಿ ಯಾವುದೇ ಒತ್ತಡÀಗಳು, ಹಸ್ತಕ್ಷೇಪಗಳು ನಡೆದಿಲ್ಲ. ಕೆಲವರು ವಿನಾಕಾರಣ ಆರೋಪ ಮಾಡುತ್ತಾರೆ. ಇದರಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದೆ ಎಂದರು. ಮೂರು ವರ್ಷಗಳ ಅವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಪ್ರಶಸ್ತಿ ವಿಜೇತ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾಯಪಂಡ ಶಶಿಸೋಮಯ್ಯ, ಅನಿಲ್ ಎಚ್.ಟಿ., ಕೆ.ಎಸ್. ಮೂರ್ತಿ, ಚೆನ್ನನಾಯಕ್, ಪ್ರವೀಣ್ ಚಂಗಪ್ಪ, ಹೆಚ್.ಕೆ. ಜಗದೀಶ್, ಜಗದೀಶ್ ಜೋಡುಬೀಟಿ, ಕೆ.ಎಂ. ವಿನೋದ್, ಶಿವರಾಜ್, ರೆಜಿತ್ ಕುಮಾರ್, ನವೀನ್ ಸುವರ್ಣ, ಕೆ.ಆರ್. ಪ್ರಸೀನ್, ಬಾಚರಣಿಯಂಡ ಅನುಕಾರ್ಯಪ್ಪ, ಸಣ್ಣುವಂಡ ಕಿಶೋರ್ ನಾಚಪ್ಪ ಇವರುಗಳು ಪ್ರಶಸ್ತಿ ಸ್ವೀಕರಿಸಿದರು.

ರಾಜ್ಯ ಪ್ರಶಸ್ತಿ ವಿಜೇತರಾದ ಪುತ್ತರಿರ ಕರುಣ್ ಕಾಳಯ್ಯ, ಬೊಳ್ಳಜಿರ ಅಯ್ಯಪ್ಪ, ಪ್ರೆಸ್ ಕ್ಲಬ್‌ಗೆ ಎರಡನೇ ಬಾರಿಗೆ ಆಯ್ಕೆಯಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ವಾರ್ತಾ ಇಲಾಖೆ ವಾಹನ ಚಾಲಕ ಗಣೇಶ್, ಸಂಘದ ಕ್ರೀಡಾ ಸಮಿತಿ ಸದಸ್ಯ ಸುವರ್ಣ ಮಂಜು, ದತ್ತಿನಿಧಿ ಸ್ಥಾಪನೆ ಮಾಡಿದ ದಿ. ಡಿ.ಎನ್. ಕೃಷ್ಣಯ್ಯ ಅವರ ಪುತ್ರಿ ಇಂದಿರಾ ಅವರ ಪುತ್ರ ಕ್ಯಾಪ್ಟನ್ ರಾಜಾರಾಂ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಸದಸ್ಯ ಚೆನ್ನನಾಯಕ್ ಪ್ರಾರ್ಥಿಸಿದರೆ, ನಿರ್ದೇಶಕ ಆನಂದ್ ಕೊಡಗು ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಹೆಚ್.ಕೆ. ಜಗದೀಶ್ ವಂದಿಸಿದರು.

ಇದಕ್ಕೂ ಮುನ್ನ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.