ಕೋವಿಶೀಲ್ಡ್ ಲಸಿಕೆಗೆ ಮಾನ್ಯತೆ ನೀಡಿದ ಬ್ರಿಟನ್
ಲಂಡನ್, ಸೆ. ೨೨: ತಾರತಮ್ಯ ಕ್ರಮದ ಬಗ್ಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿದ ನಂತರ ಬ್ರಿಟನ್ ಸರ್ಕಾರ ಆಕ್ಸ್ಫರ್ಡ್/ಅಸ್ಟಾçಜೆನೆಕಾ ಕೋವಿಡ್-೧೯ ಲಸಿಕೆ ಕೋವಿಶೀಲ್ಡ್ ಅನ್ನು ಅನುಮೋದಿತ ಲಸಿಕೆಗಳ ಪಟ್ಟಿಗೆ ಸೇರಿಸಿದೆ. ಬ್ರಿಟನ್ ಸರ್ಕಾರ ಇಂದು ಪರಿಷ್ಕೃತ ಅಂರ‍್ರಾಷ್ಟಿçÃÃಯ ಪ್ರಯಾಣ ನಿಯಮಗಳನ್ನು ಬಿಡುಗಡೆ ಮಾಡಿದ್ದು, ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಪಡೆದವರು ಬ್ರಿಟನ್ ಪ್ರವೇಶಿಸಿದ ಬಳಿಕ ಕಡ್ಡಾಯವಾಗಿ ೧೦ ದಿನ ಕ್ವಾರಂಟೈನ್‌ಗೆ ಒಳಗಾಗಬೇಕಿಲ್ಲ ಎಂದು ಹೇಳಿದೆ. ಈ ಮುಂಚೆ ಬ್ರಿಟನ್ ಸರ್ಕಾರ ಭಾರತೀಯರು ಎರಡೂ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದರೂ ೧೦ ದಿನ ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕು ಎಂಬ ನಿಯಮ ಜಾರಿಗೊಳಿಸಿತ್ತು. ಭಾರತ ಸರ್ಕಾರದ ಆಕ್ಷೇಪದ ನಂತರ ಪ್ರಯಾಣಿಕರ ನಿಯಮವನ್ನು ಸಡಿಲಗೊಳಿಸಿದೆ. ಅಸ್ಟಾçಜೆನೆಕಾ ಕೋವಿಶೀಲ್ಡ್, ಅಸ್ಟಾçಜೆನೆಕಾ ವಾಕ್ಸೇವ್ರಿಯಾ, ಮೊಡೆರ್ನಾ ಟಕೆಡಾ ಲಸಿಕೆಗಳನ್ನು ಅನುಮೋದಿತ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಬ್ರಿಟನ್‌ನ ಸಾರಿಗೆ, ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ಸಚಿವಾಲಯಗಳು ಪ್ರಕಟಣೆಯಲ್ಲಿ ತಿಳಿಸಿವೆ. ಬ್ರಿಟನ್ ಪರವಾನಗಿ ಪಡೆದ ಉತ್ಪನ್ನದ ವಿರುದ್ಧ ತಾರತಮ್ಯ ಕ್ರಮದ ಬಗ್ಗೆ ಸರಿಯಲ್ಲ ಎಂದಿದ್ದ ಭಾರತ, ೧೦ ದಿನ ಕ್ವಾರಂಟೈನ್ ನಿಯಮ ಕೈಬಿಡದಿದ್ದರೆ ತಿರುಗೇಟು ನೀಡುವಂತಹ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
ನಮ್ಮ ಮೆಟ್ರೋ ೩ನೇ ಹಂತಕ್ಕೆ ಶೀಘ್ರ ಚಾಲನೆ
ಬೆಂಗಳೂರು, ಸೆ. ೨೨: ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲು ನೀಡಲಾಗಿದ್ದ ೨೦೨೫ರ ಗಡುವನ್ನು ಮಾರ್ಪಡಿಸಿ, ೨೦೨೪ ಕ್ಕೆ ನಿಗದಿಪಡಿಸುವಂತೆ ಹಾಗೂ ಇದಕ್ಕೆ ತಕ್ಕ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದು ಪೂರ್ಣಗೊಳ್ಳುತ್ತಿದ್ದಂತೆಯೇ ಮೂರನೇ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅವರು ಇಂದು ಮೆಟ್ರೋ ೨ನೇ ಹಂತದ ಯೋಜನೆಯಡಿ ಕಂಟೋನ್ಮೆAಟ್‌ನಿAದ ಶಿವಾಜಿನಗರ ನಿಲ್ದಾಣದವರೆಗೆ ಸುರಂಗ ಮಾರ್ಗ ಕೊರೆದ ಟಿಬಿಎಂ ಊರ್ಜಾ ಯಂತ್ರವು ಹೊರಗೆ ಬರುವುದನ್ನು ವೀಕ್ಷಿಸಿದ ನಂತರ ಮಾತನಾಡುತ್ತಿದ್ದರು. ಎರಡನೇ ಹಂತ ೨೦೨೪ಕ್ಕೇ ಮುಗಿಸಲು, ಯೋಜನೆ ರೂಪಿಸಿ, ಹೆಚ್ಚುವರಿ ಮಾನವಸಂಪನ್ಮೂಲ ಬಳಸಿಕೊಂಡು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಇನ್ನು ೨೧ ಕಿ.ಮೀ. ಆಗಬೇಕಾಗಿದೆ. ಇದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆಮೇಲೆ ಮೂರನೇ ಹಂತ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಮೆಟ್ರೋ ಯೋಜನೆ ತ್ವರಿತವಾಗಿ ಪೂರ್ಣಗೊಳಿಸ ಬೇಕಾಗಿದೆ. ಮೆಟ್ರೋ ೨ನೇ ಹಂತ ಪೂರ್ಣಗೊಂಡಾಗ ೫೬ ಕಿ.ಮೀ. ಮಾರ್ಗ ಪೂರ್ಣಗೊಳ್ಳುವುದು. ಇದರೊಂದಿಗೆ ೩ನೇ ಹಂತ ಕೈಗೆತ್ತಿಕೊಳ್ಳುತ್ತಿದ್ದೇವೆ. ಮೂರೂ ಹಂತಗಳು ಪೂರ್ಣಗೊಂಡಾಗ ಮೆಟ್ರೋ ರೈಲು ಬೆಂಗಳೂರಿನ ಜೀವನಾಡಿಯಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಮೆಟ್ರೋ ಕಾಮಗಾರಿಯನ್ನು ಹಲವು ಸವಾಲುಗಳ ನಡುವೆಯೂ ವೈಜ್ಞಾನಿಕವಾಗಿ, ಸುರಕ್ಷತೆಗೆ ಆದ್ಯತೆ ನೀಡಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಯಾಬ್ ಚಾಲಕನ ವಿರುದ್ಧ ಅತ್ಯಾಚಾರ ಆರೋಪ
ಬೆಂಗಳೂರು, ಸೆ. ೨೨: ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ೨ ಗಂಟೆ ಸುಮಾರಿಗೆ ಕ್ಯಾಬ್ ಚಾಲಕನಿಂದ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಕೇಳಿ ಬಂದಿದೆ. ನಿನ್ನೆ ರಾತ್ರಿ ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗಲು ಯುವತಿ ನಗರದ ಹೆಚ್‌ಎಸ್‌ಆರ್ ಲೇಔಟ್‌ನಿಂದ ಮುರುಗೇಶಪಾಳ್ಯಕ್ಕೆ ತೆರಳಲು ಕ್ಯಾಬ್ ಬುಕ್ ಮಾಡಿದ್ದರು. ಹೀಗಾಗಿ ಹೆಚ್‌ಎಸ್‌ಆರ್ ಲೇಔಟ್‌ಗೆ ಬಂದು ಯುವತಿ ಕರೆದೊಯ್ದ ಚಾಲಕ, ಬಳಿಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬAಧಿಸಿದAತೆ ಜೀವನ್ ಭೀಮಾನಗರ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ೮೪೭ ಹೊಸ ಸೋಂಕು ಪ್ರಕರಣ ಪತ್ತೆ
ಬೆಂಗಳೂರು, ಸೆ. ೨೨: ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕದ ಅಬ್ಬರದ ಸರಾಸರಿ ಮುಂದುವರೆದಿದ್ದು, ೮೦೦ಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ ೨೪ ಗಂಟೆಗಳಲ್ಲಿ ರಾಜ್ಯಾದ್ಯಂತ ಒಟ್ಟು ೮೪೭ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ ೨೯,೭೦,೨೦೮ಕ್ಕೆ ಏರಿಕೆಯಾಗಿದೆ. ಅಂತೆಯೇ ಇದೇ ಅವಧಿಯಲ್ಲಿ ಒಟ್ಟು ೨೦ ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ರಾಜ್ಯದಲ್ಲಿ ಕೋವಿಡ್ ಮಹಾಮಾರಿಗೆ ಬಲಿಯಾದ ಸೋಂಕಿತರ ಸಂಖ್ಯೆ ೩೭,೬೬೮ಕ್ಕೆ ಏರಿಕೆಯಾಗಿದೆ. ೯೪೬ ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಸೋಂಕಿನಿAದ ಗುಣಮುಖರಾದವರ ಒಟ್ಟಾರೆ ಸಂಖ್ಯೆ ೨೯, ೧೮, ೮೯೦ಕ್ಕೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ ೧೩,೬೨೧ ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಸೋಂಕು ಸಕಾರಾತ್ಮಕ ಪ್ರಮಾಣ ಶೇ. ೦.೫೭ಯಷ್ಟಿದ್ದು, ಸಾವಿನ ದರ ಶೇ.೨.೩೬ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.