*ರಂಜನ್ ಪ್ರಶ್ನೆಗೆ ವೈದ್ಯಕೀಯ ಸಚಿವರ ಉತ್ತರ

ಮಡಿಕೇರಿ, ಸೆ. ೨೧: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಗತ್ಯ ಮೂಲಸೌಲಭ್ಯಕ್ಕೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಅಧಿವೇಶನದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪ್ರಶ್ನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್ ಉತ್ತರಿಸಿದರು.

ಕಳೆದ ಮೂರು ವರ್ಷಗಳಿಂದ ವೈದ್ಯಕೀಯ ಕಾಲೇಜಿನ ಮೂಲಭೂತ ಸೌಲಭ್ಯಕ್ಕೆ ಬಿಡುಗಡೆಯಾದ ಅನುದಾನದ ಬಗ್ಗೆ ರಂಜನ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಕಳೆದ ಮೂರು ವರ್ಷಗಳಲ್ಲಿ ಕಟ್ಟಡ ಕಾಮಗಾರಿಗಳಿಗೆ ರೂ. ೯೧,೧೫,೮೬,೦೦೦ ಹಣವನ್ನು ಬಿಡುಗಡೆಗೊಳಿಸಲಾಗಿವೆ. ವೇತನೇತರ ಸಾಮಾನ್ಯ ವಿಚಾರಗಳಿಗೆ ರೂ. ೫೦,೪೬,೬೮,೦೦೦ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವೈದ್ಯಕೀಯ ಕಾಲೇಜಿಗೆ ಮಂಜೂರಾದ ಸಿಬ್ಬಂದಿಗಳ ಭರ್ತಿಯಾಗಿದೆಯಾ ಎಂದು ಪ್ರಶ್ನಿಸಿದ ಸುನಿಲ್‌ಗೆ ಉತ್ತರಿಸಿದ ಸಚಿವರು, ಗ್ರೂಪ್ ಎ ವಿಭಾಗಕ್ಕೆ ಮಂಜೂರಾದ ೨೨೮ ಹುದ್ದೆಗಳ ಪೈಕಿ ೧೮೯ ಹುದ್ದೆ ಭರ್ತಿಯಾಗಿದೆ. ೩೯ ಹುದ್ದೆಗಳು ಖಾಲಿ ಇವೆ. ಗ್ರೂಪ್ ಸಿಗೆ ೨೦೪ ಹುದ್ದೆ ಮಂಜೂರು, ೨೦೦ ಭರ್ತಿ, ೪ ಖಾಲಿ ಇದೆ. ಗ್ರೂಪ್ ಡಿಗೆ ಮಂಜೂರಾದ ೪೭ ಹುದ್ದೆಗಳ ಪೈಕಿ ಎಲ್ಲವೂ ಭರ್ತಿಯಾಗಿದೆ ಎಂದು ವಿವರಿಸಿದ್ದಾರೆ.

ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕಾಲಕಾಲಕ್ಕೆ ನಿಯಮಾನುಸಾರ ನೇರ ಸಂದರ್ಶನಗಳನ್ನು ನಡೆಸಿ ಅರ್ಹರನ್ನು ಭರ್ತಿ ಮಾಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.