ಗುಡ್ಡೆಹೊಸೂರು, ಸೆ. ೨೩ : ಇಲ್ಲಿನ ಸಿದ್ದಾಪುರ ಮಾರ್ಗದಲ್ಲಿ ಸುಮಾರು ಎರಡು ಕಿ.ಮೀ. ನಷ್ಟು ಕಾಂಕ್ರಿಟ್ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭಗೊAಡಿದ್ದು, ಗುಡ್ಡೆಹೊಸೂರು ಮೂಲಕ ಸಿದ್ದಾಪುರ ಸೇರುವ ವಾಹನ ಚಾಲಕರು ಬದಲಿ ಎರಡು ಮಾರ್ಗಗಳನ್ನು ಆಯ್ಕೆ ಮಾಡಬಹುದು. ಕೊಡಗರಹಳ್ಳಿ-ಚಿಕ್ಲಿಹೊಳೆ ಜಲಾಶಯದ ಪಕ್ಕದಲ್ಲಿ ಸೇರುವ ರಸ್ತೆಯಾದರೆ ಮತ್ತೊಂದು ಸುಂಟಿಕೊಪ್ಪ-ಚೆಟ್ಟಳ್ಳಿ ಮೂಲಕ ಸಿದ್ದಾಪುರ ಸೇರಬಹುದು. ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸುವಂತೆ ಗುತ್ತಿಗೆದಾರರು ಮನವಿ ಮಾಡಿಕೊಂಡಿದ್ದಾರೆ.