ನಾಪೋಕ್ಲು , ಸೆ. ೨೧ : ನಾಪೋಕ್ಲು ನಗರದಲ್ಲಿ ಸೋಮವಾರ ಸಂತೆ ದಿನವಾಗಿದ್ದು ಸಂತೆಗೆ ಬರುವ ಕಾರ್ಮಿಕರು ಕೋವಿಡ್ ನಿಯಂತ್ರಿಸಲು ಗುಂಪಾಗಿ ಬರದಂತೆ ಟಾಸ್ಕ್ ಪೋರ್ಸ್ ಸಭೆಯಲ್ಲಿ ಕಟ್ಟು ನಿಟ್ಟಿನ ನಿರ್ಣಯ ಕೈಗೊಂಡಿದ್ದರು ಕಾರ್ಮಿಕರು ಮಾತ್ರ ಇದಕ್ಕೆ ಕ್ಯಾರೇ ಎನ್ನದೆ ವಾಹನದಲ್ಲಿ ನಿಯಮವನ್ನು ಗಾಳಿಗೆ ತೂರಿ ಸಂತೆಗೆ ಆಗಮಿಸಿದರು.

ಹೀಗಾದರೆ ನಗರದಲ್ಲಿ ಹೇಗೆ ಕೋವಿಡ್ ನಿಯಂತ್ರಣ ಸಾಧ್ಯ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಈಗಾಗಲೇ ಈ ವಿಭಾಗದಲ್ಲಿ ಪಾಸಿಟಿವ್ ಪ್ರಕರಣಗಳಿದ್ದು, ತಾ ೧೭ ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಬಗ್ಗೆ ಕಾರ್ಮಿಕರು ನಗರಕ್ಕೆ ಗುಂಪು ಗುಂಪಾಗಿ ಬರಬಾರದು ಮತ್ತು ಇವರ ಮಾಲೀಕರು ಇದಕ್ಕೆ ಆಸ್ಪದ ನೀಡಬಾರದು ಎಂದು ಆದೇಶವನ್ನು ಕೈಗೊಂಡರು ತೋಟದ ಮಾಲೀಕರಾಗಲಿ, ಕಾರ್ಮಿಕರಾಗಲಿ ಇದನ್ನು ಕೈಗೊಳ್ಳದೆ ನಿಯಮವನ್ನು ಉಲ್ಲಂಘಿಸಿದ್ದಾರೆ. ಮುಂದೆ ಇಂತವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

-ದುಗ್ಗಳ