ಮಡಿಕೇರಿ, ಸೆ. ೨೨: ದಲಿತ ಸಂಘಟನೆಗಳ ಒಕ್ಕೂಟದ ಶನಿವಾರಸಂತೆ ಹೋಬಳಿ ಸಮಿತಿಯ ನೂತನ ಸಂಚಾಲಕರಾಗಿ ಹೆಚ್.ಆರ್. ಪಾಲಾಕ್ಷ ಆಯ್ಕೆಯಾಗಿದ್ದಾರೆ.
ಒಕ್ಕೂಟದ ಜಿಲ್ಲಾ ಸಮಿತಿಯ ಸಂಘಟನಾ ಸಂಚಾಲಕ ಡಿ.ಜೆ. ಈರಪ್ಪ ಅವರ ಅಧ್ಯಕ್ಷತೆಯಲ್ಲಿ ಶನಿವಾರಸಂತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಸೋಮವಾರಪೇಟೆ ತಾಲೂಕು ಅಧ್ಯಕ್ಷ ಟಿ.ಈ. ಸುರೇಶ, ತಾಲೂಕು ಸಂಚಾಲಕ ಕುಮಾರ್ ಎಂ.ಎಸ್, ಸಮಿತಿಯ ಸದಸ್ಯರುಗಳಾದ ರಾಜೇಂದ್ರ ವಿನೋದ್ (ಪುಟ್ಟ), ನವೀನ್, ನಿಶಾಂತ್, ಪ್ರವೀಣ, ಪುನೀತ್, ಜಗದೀಶ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದು ಒಕ್ಕೂಟವನ್ನು ಬಲಪಡಿಸುವ ಕುರಿತು ಚರ್ಚಿಸಿದರು.