ಮಡಿಕೇರಿ, ಸೆ. ೨೧: ಲೋಕೋಪಯೋಗಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಸಂಬAಧದ ದಾಖಲೆಗಳನ್ನು ಶೀಘ್ರದಲ್ಲಿ ಬಹಿರಂಗ ಗೊಳಿಸಲಾಗುವುದು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಜಿನಿಯರಿAಗ್ ವಿಭಾಗದಲ್ಲಿ ಶೇ. ೨೩ ಕಮಿಷನ್ ನೀಡಿದರೆ ಮಾತ್ರ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ. ಇದಕ್ಕೆ ಇತ್ತೀಚಿನ ಎ.ಸಿ.ಬಿ. ಬಲೆಗೆ ಬಿದ್ದ ಅಧಿಕಾರಿಗಳೇ ಉದಾಹರಣೆಯಾಗಿದ್ದಾರೆ. ಜಿ.ಪಂ. ಅಭಿಯಂತರ ಶ್ರೀಕಂಠಯ್ಯ ಅವ್ಯವಹಾರದ ಕುರಿತು ಈ ಹಿಂದೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಪೂರಕ ದಾಖಲೆ ಒದಗಿಸಿದ್ದರು ಕೂಡ ಅಧಿಕಾರಿ ವಿರುದ್ಧ ಯಾವುದೇ ಶಿಸ್ತು ಕ್ರಮವಾಗಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ ಎಂದರು.
ಇಂತಹ ಅಧಿಕಾರಿಗಳ ವಿರುದ್ಧ ಜಿಲ್ಲೆಯ ಶಾಸಕರುಗಳು ಮೌನವಹಿಸಿರಲು ಕಾರಣವೇನೆಂದು ಪ್ರಶ್ನಿಸಿದ ಅವರು, ನಗರÀಸಭೆಗೂ ಕೆ.ಎ.ಎಸ್. ದರ್ಜೆಯ ಪೌರಾಯುಕ್ತರನ್ನು ನೇಮಿಸದೆ ಕೆಳಹಂತದ ಅಧಿಕಾರಿಯನ್ನು ನೇಮಿಸಿರುವುದು ಯಾಕೆಂದು ತಿಳಿಯುತ್ತಿಲ್ಲ. ಇದು ಜನಪ್ರತಿನಿಧಿಗಳ ವೈಫಲ್ಯಕ್ಕೆ ಕಾರಣವಾಗಿವೆ ಎಂದು ದೂರಿದರು.
೮೦೦ ಪುಟಗಳ ದಾಖಲೆ
ಲೋಕೋಪಯೋಗಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ೮೦೦ ಪುಟಗಳ ದಾಖಲೆಗಳು ಕೊಡಗು ಕಾಂಗ್ರೆಸ್ ಬಳಿ ಇವೆ. ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಸದ್ಯದಲ್ಲೇ ಜನರ ಮುಂದಿಡುತ್ತೇವೆ. ಆಧಾರ ರಹಿತ ಆರೋಪವನ್ನು ಕಾಂಗ್ರೆಸ್ ಮಾಡುವುದಿಲ್ಲ.
(ಮೊದಲ ಪುಟದಿಂದ) ಲಂಚಾವತಾರ, ಅವ್ಯವಹಾರಗಳು ಪುರಾವೆ ದಾಖಲೆಗಳಲ್ಲಿವೆ ಎಂದು ಹೇಳಿದರು.
ದೇವಾಲಯ ಕೆಡವುವ ವಿಚಾರಕ್ಕೆ ಸಂಬAಧಿಸಿದAತೆ ಮಾತನಾಡಿದ ಧರ್ಮಜ ಉತ್ತಪ್ಪ, ಏಕಾಏಕಿ ದೇವಾಲಯಗಳನ್ನು ಕೆಡವಿ ಸರಕಾರ ಜನವಿರೋಧಿ ನಡೆ ಅನುಸರಿಸಿದೆ. ಕಾಂಗ್ರೆಸ್ ಸರಕಾರ ಈ ರೀತಿ ಮಾಡಿದ್ದಲ್ಲಿ ಪ್ರತಿಭಟನೆ ನಡೆಸಿ ಸಮಾಜದಲ್ಲಿ ಬಿಜೆಪಿ ಅಶಾಂತಿ ಸೃಷ್ಟಿಸುತ್ತಿತ್ತು. ಇದು ಸರಕಾರದ ವಿಫಲತೆ ಎಂದು ಕಿಡಿಕಾರಿದರು. ಕೊಡಗು ಜಿಲ್ಲೆ ಸರ್ವಾಧಿಕಾರಿ ಶಾಸಕರುಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ. ಭ್ರಷ್ಟಾಚಾರಿ ಅಧಿಕಾರಿಗಳಿಗೆ ಶಾಸಕರುಗಳ ಕೃಪಕಟಾಕ್ಷವಿದೆ ಎಂದು ಗಂಭೀರ ಆರೋಪ ಮಾಡಿದರು. ಆರ್.ಟಿ.ಸಿ.ಯಲ್ಲಿ ಬೆಳೆ ಕಲಂನಲ್ಲಿ ಪ್ರತಿ ವರ್ಷ ಬೆಳೆ ನಮೂದು ಮಾಡಬೇಕೆಂಬ ಕ್ರಮ ಸರಿಯಲ್ಲ. ಇದನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಪಕ್ಷ ಮುಖ್ಯ
ನಮಗೆ ಪಕ್ಷ ಮುಖ್ಯ ವ್ಯಕ್ತಿಯಲ್ಲ ಎಂದು ಧರ್ಮಜ ಹೇಳಿದರು. ಪಕ್ಷ ಸದೃಢವಾಗಿದೆ. ಮುಂದಿನ ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಪಕ್ಷದಿಂದ ನಾಪಂಡ ಮುತ್ತಪ್ಪ ಹೋಗಿರುವುದು ಸಾಮಾಜಿಕ ಜಾಲತಾಣದ ಮೂಲಕ ತಿಳಿದು ಬಂದಿದೆ. ಅವರಿಗೆ ಶುಭವಾಗಲಿ. ಪಕ್ಷದೊಳಗೆ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರ ಮೈನಾ ಮಾತನಾಡಿ, ಕಾಂಗ್ರೆಸ್ನಿAದ ತಂಡ ರಚಿಸಿ ೩ ತಿಂಗಳುಗಳಿAದ ಲೋಕೋಪಯೋಗಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಹಲವು ಗೋಲ್ಮಾಲ್ಗಳು ಇದರಿಂದ ಬೆಳಕಿಗೆ ಬರಲಿವೆ. ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಡೆ ಅನುಸರಿಸಲಾಗುವುದು. ಹಲವು ಕಾಮಗಾರಿಗಳು ನಿಯಮ ಮೀರಿ ನಡೆದಿವೆ. ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದ್ದು, ದಾಖಲೆ ಬಿಡುಗಡೆ ಬಳಿಕ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಸಾಮಾಜಿಕ ಜಾಲತಾಣ ಘಟಕದ ಮೈಸೂರು ವಿಭಾಗೀಯ ಅಧ್ಯಕ್ಷ ಐ.ಜಿ. ಚಿಣ್ಣಪ್ಪ ಮಾತನಾಡಿ, ದೇವಾಲಯ ಕೆಡವಿದ ವಿಚಾರಕ್ಕೆ ಸಂಬAಧಿಸಿದAತೆ ಶಾಸಕರುಗಳು, ಸಂಸದರು, ಸಚಿವರುಗಳು ತಮ್ಮ ವೇತನವನ್ನು ವಿನಿಯೋಗಿಸಿ ಕೆಡವಿದ ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ನಗರಸಭೆ ಮಾಜಿ ಸದಸ್ಯ ನಂದಕುಮಾರ್ ಇದ್ದರು.