ಮಡಿಕೇರಿ, ಸೆ. ೨೧: ಸೋಮವಾರಪೇಟೆ ತಾಲೂಕು ಬಸವನಹಳ್ಳಿ ಲ್ಯಾಂಪ್ ಸೊಸೈಟಿಯಲ್ಲಿ ನಡೆದಿರುವ ಹಣ ದುರುಪಯೋಗ ಪ್ರಕರಣಕ್ಕೆ ಸಂಬAಧಿಸಿದAತೆ ಸಂಘದ ಮಾಜಿ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ಹಣ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮಾಹಿತಿ ನೀಡಿದ್ದಾರೆ.

ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ವಿಧಾನಮಂಡಲದ ಅಧಿವೇಶನದಲ್ಲಿ ಲ್ಯಾಂಪ್ಸ್ ಸೊಸೈಟಿಯಲ್ಲಿ ಆಗಿರುವ ಅವ್ಯವಹಾರದಲ್ಲಿನ ಹಣ ವಾಪಸಾತಿಗೆ ಕೈಗೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಬಸವನಹಳ್ಳಿ ಲ್ಯಾಂಪ್ ಸೊಸೈಟಿಯಲ್ಲಿ ೨೦೧೮-೧೯ ಮತ್ತು ೨೦ನೇ ಸಾಲಿನ ಆಡಿಟ್ ವರದಿಯನ್ವಯ ೨೩,೮೬,೮೫೫ ರೂ. ದುರುಪಯೋಗವಾಗಿದ್ದು ಸರಕಾರದ ಗಮನಕ್ಕೆ ಬಂದಿದೆ. ಅಂದಿನ ಅಧ್ಯಕ್ಷ ಎಸ್.ಎನ್. ರಾಜಾರಾವ್ ಮತ್ತು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರುಗಳ ಜಂಟಿ ಜವಾಬ್ದಾರಿಕೆಯಾಗಿದೆ. ಈ ಕುರಿತು ಸಿವಿಲ್ ಮತ್ತು ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ೨೦೨೧ರ ಫೆಬ್ರವರಿ ೧ರಂದು ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಸಂಘಕ್ಕೆ ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದರು.

ದುರುಪಯೋಗದ ಮೊತ್ತ ರೂ. ೨೩,೮೬,೮೫೫ರ ಪೈಕಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ೨೫ ಸಾವಿರ ಹಣವನ್ನು ಸಂಘಕ್ಕೆ ಪಾವತಿ ಮಾಡಿದ್ದು, ೧ ಲಕ್ಷ ರೂ.ಗಳ ಚೆಕ್ ನೀಡಿದ್ದರು.

(ಮೊದಲ ಪುಟದಿಂದ) ಚೆಕ್ ಅನ್ನು ಬ್ಯಾಂಕ್‌ಗೆ ಹಾಕಿದಾಗ ಖಾತೆಯಲ್ಲಿ ಸಾಕ್ಸÀÄ್ಟ ಹಣ ಇಲ್ಲ ಎಂದು ಚೆಕ್ ಹಿಂದಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ೨೦೨೧ರ ಮೇ ೩೧ರಂದು ಕುಶಾಲನಗರ ಸಿವಿಲ್ ನ್ಯಾಯಾಲಯದಲ್ಲಿ ಚೆಕ್ ಅಮಾನ್ಯ ದಾವೆ ದಾಖಲಿಸಿದ್ದು, ವಿಚಾರಣೆ ಪ್ರಗತಿಯಲ್ಲಿದೆ ಎಂದು ಸೋಮಶೇಖರ್ ಸದನದಲ್ಲಿ ಮಾಹಿತಿ ನೀಡಿದರು. ಹಣ ವಸೂಲಿಗೆ ಸಂಬAಧಿಸಿದAತೆ ೨೦೨೧ರ ಜುಲೈ ೨೪ರಂದು ನಡೆದ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಹಕಾರ ಸಚಿವರು ತಿಳಿಸಿದರು.